ಮಣಿರತ್ನಂರ ಚಿತ್ರಗಳ ಬಗ್ಗೆ ರಹಸ್ಯವನ್ನು ಕಾಯ್ದುಕೊಳ್ಳಲಾಗುತ್ತದೆ. ಚಿತ್ರದ ವಿಷಯದಿಂದ ಹಿಡಿದು ತಾರಗಣದವರೆಗೆ ಎಲ್ಲವೂ ಸೀಕ್ರೆಟ್, ಮಾಧ್ಯಮಗಳ ಹದ್ದಿನ ಕಣ್ಣಿನಿಂದ ದೂರ.
ಬಾಲಿವುಡ್ ವಲಯದಲ್ಲಿ ಮಣಿ ಹೊಸ ಯೋಜನೆಯೊಂದನ್ನು ಕೈಗೆತ್ತಿಗೊಂಡಿದ್ದಾರೆ ಎಂಬ ಬಗ್ಗೆ ಗುಸುಗುಸು ಹಬ್ಬಿತ್ತು. ಈ ಬಗೆಗಿನ ಸತ್ಯವೆಂದರೆ ಈ ಬಾರಿ ಮಣಿರತ್ನಂ ಅವರು ಗುರು ಚಿತ್ರತಂಡವಾದ ಬಾಲಿವುಡ್ನ 'ಗೋಲ್ಡನ್ ಕಪಲ್' ಅಭಿಷೇಕ್ ಬಚ್ಚನ್ ಮತ್ತು ಐಶ್ವರ್ಯ ರೈ ಬಚ್ಚನ್ ಮತ್ತು ದಕ್ಷಿಣದ ಖ್ಯಾತ ನಟ ವಿಕ್ರಮ ಅವರನ್ನೊಳಗೊಂಡ ತ್ರಿಕೋನ ಪ್ರೇಮಕತೆಯನ್ನು ನಿರ್ದೇಶಿಸಿಲಿದ್ದಾರೆ. ಶೀಘ್ರದಲ್ಲೇ ಚಿತ್ರೀಕರಣ ಆರಂಭವಾಗಲಿದೆ.