ನಾಲ್ಕು ಹಿಟ್ ಚಿತ್ರಗಳ ಜೋಡಿ ಅಕ್ಷಯ್ ಕುಮಾರ್ ಮತ್ತು ಪ್ರಿಯಾಂಕ ಚೋಪ್ರಾ ಮೂರು ವರ್ಷಗಳ ನಂತರ ಮತ್ತೆ ಜೊತೆಯಾಗುತ್ತಿದ್ದಾರೆ. 'ಅಂದಾಜಾ', 'ಎತ್ರಾಜ್', 'ವಕ್ತ್ ಮತ್ತು 'ಮುಜ್ ಸೆ ಶಾದಿ ಕರೋಗಿ' ಚಿತ್ರಗಳಲ್ಲಿ ಮಿಂಚಿದ ನಂತರ ಈ ಜೋಡಿ ಮತ್ತೆ ತೆರೆಯ ಮೇಲಾಗಲಿ ಅಥವಾ ತೆರೆಯ ಮರೆಯಲ್ಲಾಗಲಿ ಮತ್ತೆ ಜೊತೆಯಾಗಿ ಕಾಣಿಸಿಕೊಳ್ಳದಿರಲು ನಿರ್ಧರಿಸಿತ್ತು. ಈ ಇಬ್ಬರ ಚಿತ್ರಗಳೂ ಉತ್ತಮವಾಗಿ ಓಡುತ್ತಿದ್ದಾಗ ಈ ವಿಚಿತ್ರ ನಡೆಗೆ ಕಾರಣವೇನು ?
ಆಶ್ಚರ್ಯಕರವಾಗಿ ಇದಕ್ಕೆ ಕಾರಣ ಅಕ್ಕಿ ಪತ್ನಿ ಟ್ವಿಂಕಲ್ ಖನ್ನಾ. ತೆರೆ ಮೇಲೆ ಮಿಂಚುತ್ತಿದ್ದ ಅಕ್ಕಿ-ಪ್ರಿಯಾಂಕ ಬಗ್ಗೆ ಬಾಲಿವುಡ್ ಗಾಸಿಪ್ ಕೇಂದ್ರಗಳು ಗುಸುಗುಸು ಹಬ್ಬತೊಡಗಿದ್ದವು. ಇದರಿಂದಲೇ ಅಕ್ಕಿ ತನ್ನ ಪ್ರೀತಿಯ ಪತ್ನಿಗಾಗಿ ಪ್ರಿಯಾಂಕ ಜೊತೆ ಮತ್ತೆ ನಟಿಸದಿರುವ ಒಪ್ಪಂದಕ್ಕೆ ಬಂದಿದ್ದರು.
ಈಗ ಪ್ರಿಯದರ್ಶನ್ರ ಮುಂದಿನ ಚಿತ್ರದಲ್ಲಿ ಅಕ್ಷಯ್ ಮತ್ತು ಪ್ರಿಯಾಂಕ ನಟಿಸಲಿರುವುದರಿಂದ ಟ್ವಿಂಕಲ್ಗೆ ತನ್ನ ಖಿಲಾಡಿ ಮೇಲೆ ಪೂರ್ಣ ನಂಬಿಕೆ ಬಂದಿರುವುದಾಗಿ ಕಂಡುಬರುತ್ತಿದೆ.
ಅಕ್ಷಯ್ ಸ್ಟಾರ್ಡಮ್ನ ಉತ್ತುಂಗಕ್ಕೇರುತ್ತಿದ್ದಾರೆ, ಪ್ರಿಯಾಂಕರೂ ಮಿಂಚುತ್ತಿದ್ದಾರೆ. ಮತ್ತು ಪ್ರಿಯಾಂಕರಿಗೀಗ ಹರಮಾನ್ ಜೊತೆಯಾಗಿದ್ದಾರೆ ಅದ್ದರಿಂದ ಈಗ ಗಾಸಿಪ್ಗಳಿಗೆ ಎಡೆಯಿಲ್ಲ. ಟ್ವಿಂಕಲ್ರಿಗೆ ಇದು ಅರ್ಥವಾಗಿರಬೇಕು. ಇಲ್ಲವೆಂದಾದಲ್ಲಿ ಅಕ್ಷಯ್ ಪತ್ನಿ ಮತ್ತು ಕೆರಿಯರ್ ನಡುವೆ ತೊಯ್ದಾಡಬೇಕಾಗಿತ್ತು.