ನಿಕ್ ಮತ್ತು ಬೂಸ್ಟ್ ಮುಂಬಯಿ, ದೆಹಲಿ ಮತ್ತು ಬೆಂಗಳೂರುಗಳಲ್ಲಿ ಮಕ್ಕಳಿಗಾಗಿ ಮೆಗಾ ಆಟದ ಸ್ಪರ್ಧೆಗಳನ್ನು ಹಮ್ಮಿಕೊಳ್ಳಲಿದ್ದಾರೆ.
ಮುಂಬಯಿ, ಶುಕ್ರವಾರ, 26 ಸೆಪ್ಟೆಂಬರ್ 2008( 13:27 IST )
WD
ಮಕ್ಕಳು ಮತ್ತು ಪೋಷಕರನ್ನು ಅರೋಗ್ಯಕರ ಮತ್ತು ಉಲ್ಲಾಸದ ಜೀವನಶೈಲಿ ರೂಪಿಸುಕೊಳ್ಳುವತ್ತ ಸೆಳೆಯಲು ಬಾಲಿವುಡ್‌ನ ಮೇರು ನಟಿ ಮತ್ತು ಓರ್ವ ತಾಯಿಯೂ ಆಗಿರುವ ಕಾಜೋಲ್, ನಿಕ್ ಚಾನೆಲ್‌ನ 'ಲೆಟ್ಸ್ ಜಸ್ಟ್ ಪ್ಲೇ' ಆಂದೋಲನದಲ್ಲಿ ಭಾಗಿಯಾಗಿದ್ದು, ಬೆಂಗಳೂರಿನ ಗರುಡಾ ಮಾಲ್ ಸೇರಿದಂತೆ ದೇಶದ ಮೂರು ಕಡೆ ಸೆ.27ರಂದು ಈ ವಿಶಿಷ್ಟ ಕಾರ್ಯಕ್ರಮ ನಡೆಯಲಿದೆ.
ನಿಕ್ ಕಂಪನಿಯ 'ಲೆಟ್ಸ್ ಜಸ್ಟ್ ಪ್ಲೇ' ಆಂದೋಲನದ ಪ್ರಯುಕ್ತ ಮೊದಲ ಬಾರಿಗೆ ಸೆಪ್ಟಂಬರ್ 27, 2008ರಂದು ಮುಂಬಯಿಯ ಅರ್ಬಿಟ್ ಲಾನ್, ದೆಹಲಿಯ ಸೆಲೆಕ್ಟ್ ಸಿಟಿ ವಾಕ್ ಮತ್ತು ಬೆಂಗಳೂರಿನ ಗರುಡಾ ಮಾಲ್ ಲಾನ್‌ನಲ್ಲಿ ವಿವಿಧ ಆಕರ್ಷಕ ಸ್ಪರ್ಧೆಗಳು ನಡೆಲಿವೆ. ಆಟದ ಮಹತ್ವವನ್ನು ತಿಳಿಯಪಡಿಸಲು ಮಕ್ಕಳಿಗೆ ಆಟವಾಡಲು ಅವಕಾಶ ಮಾಡಿಕೊಡಲು ನಿಕ್ ಮಕ್ಕಳ ಚಾನೆಲ್ ಸಹ ಅರ್ಧ ಗಂಟೆ ಕಾಲ ಕಾರ್ಯಕ್ರಮ ಸ್ಥಗಿತಗೊಳಿಸಲಿದೆ.
'ಲೆಟ್ಸ್ ಜಸ್ಟ್ ಪ್ಲೇ'ಗೆ ತಮ್ಮ ಬೆಂಬಲ ನೀಡುತ್ತಾ ಕಾಜೋಲ್, "ಆಟ ಎಂದರೆ ಎಲ್ಲಾ ರೀತಿಯ ಮೋಜು, ಸೂರ್ಯನ ಬೆಳಕನ್ನು ಹಿಡಿದಿಡುವುದು, ಸ್ವಚ್ಛಂದ ಗಾಳಿಯಲ್ಲಿ ಉಸಿರಾಡುವುದು, 27ನೇ ಸೆಪ್ಟೆಂಬರ್ ಅನ್ನು ನಿಕ್ 'ಲೆಟ್ಸ್ ಜಸ್ಟ್ ಪ್ಲೇ' ದಿನವಾಗಿ ಘೋಷಿಸಿದ್ದಾರೆ. ಆದ್ದರಿಂದ ಬನ್ನಿ ಮಕ್ಕಳೆ.. ಎದ್ದು ಹೊರ ಬನ್ನಿ ಮತ್ತು ಆಟವಾಡಿ" ಎನ್ನುತ್ತಾ ಮಕ್ಕಳಿಗೆ ಕರೆ ನೀಡಿದ್ದಾರೆ.
ಈ ಸಂದರ್ಭದಲ್ಲಿ ಬಾಸ್ಕೆಟ್ ಬಾಲ್, ಕ್ರಿಕೆಟ್ ಮತ್ತು ಫುಟ್ ಬಾಲ್‌ಗಳಂತಹ ಆಟಗಳು ಮತ್ತು ಸರಳ ಮತ್ತು ಮೋಜಿನ ಆಟಗಳಾದ ಮೂರು ಕಾಲಿನ ಓಟ, ಲಿಂಬೆ ಚಮಚ ಓಟ ಮತ್ತು ಇತರ ಸ್ಪರ್ಧೆಗಳು ನಡೆಯಲಿವೆ. ಭಾಗವಹಿಸಿದ ಮಕ್ಕಳಿಗೆ ಆಟದ ಕೊನೆಯಲ್ಲಿ ಭರಪೂರ ಬಹುಮಾನಗಳನ್ನು ಗಳಿಸುವ ಅವಕಾಶವಿದೆ. ನಿಕ್ಟೂನ್‌ಗಳಾದ ಡೋರಾ, ನಿನ್‌ಜಾ , ಪರ್ಮಾನ್, ಸ್ಪಾಂಜ್‌ಬಾಬ್ ಮತ್ತು ಪಾಟ್ರಿಕ್ ಅವರ ಅದ್ಭುತ ಪ್ರದರ್ಶನದೊಂದಿಗೆ ಅಂದಿನ ಲೆಟ್ಸ್ ಜಸ್ಟ್ ಪ್ಲೇ ಸಂಜೆಗೆ ತೆರೆ ಬೀಳಲಿದೆ. ಅಷ್ಟೆಲ್ಲಾ ಮೋಜು ಮತ್ತು ಇನ್ನೂ ಹೆಚ್ಚಿನದನ್ನು ಹೊಂದಿರುವ 'ಲೆಟ್ಸ್ ಜಸ್ಟ್ ಪ್ಲೆ ಕಾರ್ಯಕ್ರಮವನ್ನು ಯಾವೊಂದು ಮಗುವು ತಪ್ಪಿಸಿಕೊಳ್ಳಲು ಇಷ್ಟಪಡದು ಎಂಬುದು ಆಯೋಜಕರ ಅಭಿಮತ.
ಬೇರೆ ನಗರದ ಮಕ್ಕಳು ನಿರಾಶರಾಗಬೇಕೆಂದಿಲ್ಲ, ಯಾಕೆಂದರೆ ನೀವುಗಳು ನಿಕ್‌ಇಂಡಿಯಾ.ಕಾಮ್‌ಗೆ ತೆರಳಿ ಲೆಟ್ಸ್ ಜಸ್ಟ್ ಪ್ಲೇಯ ಸದಸ್ಯರಾಗಿ ನೊಂದಾಯಿಸಿಕೊಳ್ಳಬಹುದು ಮತ್ತು ಎಲ್ಲಿ ಬೇಕಾದರೂ ಆಟವಾಡಿಕೊಳ್ಳಬಹುದು ಎಂದು ಪ್ರಕಟಣೆ ತಿಳಿಸಿದೆ.