ಅಭಿಷೇಕ್ ಬಚ್ಚನ್, ಪ್ರಿಯಾಂಕ ಚೋಪ್ರಾ ಮತ್ತು ಕೆ.ಕೆ ಮೆನನ್ ಮುಖ್ಯ ಪಾತ್ರದಲ್ಲಿರುವ ದ್ರೋಣ ಚಿತ್ರದಲ್ಲಿ ಅವರ ಉಡುಗೆಗಳನ್ನು ಕಂಡಾಗ ಇದು ಫ್ಯಾಂಟಸಿ ಚಿತ್ರವೇ ಅಥವಾ ಹಾಸ್ಯ ಚಿತ್ರವೇ ಎಂಬ ಅನುಮಾನ ಬರುತ್ತದೆ, ಈ ಸಂದರ್ಭ ನಮ್ಮ ಅನುಮಾನ ಪರಿಹರಿಸಲು ಧಾವಿಸಿದ ನಿರ್ದೇಶಕ ಗೋಲ್ಡೈ ಭೇಲ್ ಚಿತ್ರವನ್ನು ಭಾವುಕ ಚಿತ್ರವೆಂದು ಬ್ರಾಂಡ್ ಮಾಡಿದ್ದಾರೆ.
ನಿರ್ದೇಶಕರನ್ನು ಅವರ ಚಿತ್ರವನ್ನು ವೀಕ್ಷಿಸಲು ಮೂರು ಕಾರಣಗಳನ್ನು ನೀಡುವಂತೆ ಕೇಳಿದಾಗ ಅವರು "ಚಿತ್ರದಲ್ಲಿ ಶ್ರೇಷ್ಠ ಅಭಿನಯವಿದೆ, ನೀವು ಅದೇ ನಟರನ್ನು ಬೇರೆಯದೇ ಅದ ಲೋಕದಲ್ಲಿ ಮತ್ತು ವಾತಾವರಣದಲ್ಲಿ ನೋಡಲಿರುವಿರಿ" ಎಂದು ಹೇಳಿದ್ದಾರೆ.
"ಈ ಚಿತ್ರದಲ್ಲಿ ಹಿಂದೆಂದೂ ಕಾಣಸಿಗದ ಸ್ಟಂಟ್ಗಳು ಮತ್ತು ವಿಶೇಷ ಇಫೆಕ್ಟ್ಗಳು ಇವೆ ಮತ್ತು ಎಲ್ಲದಕ್ಕಿಂತ ಆಶ್ಚರ್ಯಕಾರಿ ಅಂಶವೆಂದರೆ ಈ ಚಿತ್ರವು ತುಂಬಾ ಭಾವನಾತ್ಮಕವಾಗಿದೆ ಮತ್ತು ನಿಮ್ಮನ್ನು ಅಳುವಂತೆ ಮಾಡುತ್ತದೆ. ಅಭಿಷೇಕ್ ಈ ಚಿತ್ರದಲ್ಲಿ ಅದ್ಭುತವಾಗಿ ಮೂಡಿಬಂದಿದ್ದಾರೆ" ಎಂಬುದು ನಿರ್ದೇಶಕರ ಅಂಬೋಣ.
ದ್ರೋಣ ಚಿತ್ರ ಅಳಿಸಲಿದೆಯೇ ಅಥವಾ ನಗಿಸಲಿದೆಯೇ ಎಂಬುದು ತಿಳಿದಿಲ್ಲ ಆದರೆ ಚಿತ್ರಮಂದಿರಕ್ಕೆ ಪ್ರೇಕ್ಷಕರು ಬರದಿದ್ದರೆ ಗೆಲುವಿನ ಬರ ಹಿಡಿದಿರುವ ಅಭಿ, ನಿರ್ದೇಶಕರ ಜೊತೆಗೆ ಸೇರಿ ಗೋಳಾಡಬೇಕಾಗುತ್ತದೆ.