ಇದನ್ನು ಬುದ್ದಿವಂತ ನಡೆಯೆಂದಾಗಲಿ ಅಥವಾ ರಕ್ಷಣಾ ಕ್ರಮವೆಂದಾಗಲಿ ಪರಿಗಣಿಸಿ, ಆಯ್ಕೆ ನಿಮ್ಮದು, ಶಾರುಖ್ ಖಾನ್ ತಮ್ಮ ಸ್ವ ನಿರ್ಮಾಣ ಸಂಸ್ಥೆಯಡಿ ನಿರ್ಮಾಣವಾದ 'ಬಿಲ್ಲೊ ಬಾರ್ಬರ್' ಚಿತ್ರದ ಬಿಡುಗಡೆಯನ್ನು ನವಂಬರ್‌ನಿಂದ 2009ಕ್ಕೆ ಮುಂದೂಡಿದ್ದಾರೆ. ಇದಕ್ಕೆ ಕಾರಣ ಅವರಿಗೆ ಸಲ್ಮಾನ್ ಖಾನ್‌ರ ಚಿತ್ರ 'ಯುವರಾಜ್'ಗೆ ಪೈಪೋಟಿ ನೀಡುವ ಮನಸ್ಸಿಲ್ಲ.
ಬಾಲಿವುಡ್ ಮೂಲವೊಂದು ತಿಳಿಸುವ ಪ್ರಕಾರ 'ಬಿಲ್ಲೊ ಬಾರ್ಬರ್' ಚಿತ್ರದಲ್ಲಿ ಶಾರುಖ್ ಪೂರ್ಣ ಪ್ರಮಾಣದ ನಾಯಕರಲ್ಲ ಅವರು ಚಿತ್ರದಲ್ಲಿ ಕಾಣಿಸಿಕೊಳ್ಳುತ್ತಿರುವುದು ಅತಿಥಿ ಪಾತ್ರದಲ್ಲಿ, ಇದಕ್ಕೆ ವಿರುದ್ಧವಾಗಿ 'ಯುವರಾಜ್'ನಲ್ಲಿ ಸಲ್ಮಾನ್ ಪೂರ್ಣ ಪ್ರಮಾಣದ ನಾಯಕ ಅವರ ಜೊತೆ ಬಾಲಿವುಡ್ ಕ್ವೀನ್ ಆಗಿ ಮೆರೆಯುತ್ತಿರುವ ಕತ್ರಿನಾ ಕೈಫ್ ಮತ್ತು ದಿಗ್ಗಜ ನಿರ್ದೇಶಕ ಸುಭಾಶ್ ಘಾಯ್ ಅವರ ನಿರ್ದೇಶನದಡಿಯಲ್ಲಿ ಚಿತ್ರ ಮೂಡಿ ಬಂದಿದೆ.
ಅಲ್ಲದೇ ಬಿಲ್ಲೊ ಬಾರ್ಬರ್ ಕತೆಯನ್ನೇ ಹೊಂದಿರುವ ತಮಿಳು ಚಿತ್ರ 'ಕುಸೇಲನ್' ಸ್ಟೈಲ್ ಕಿಂಗ್ ರಜನಿಕಾಂತ್‌ರ ಹೊರತಾಗಿಯೂ ಹೀನಾಯವಾಗಿ ನೆಲಕಚ್ಚಿದೆ. ಆದರೆ ಮೂಲಗಳು ಹೇಳುವಂತೆ ರಬ್ನೆ ಬನಾ ದಿ ಜೋಡಿಯಂತಹ ಚಿತ್ರವಾಗಿದ್ದಲ್ಲಿ ಖಂಡಿತವಾಗಿಯೂ ಶಾರುಖ್ ಹಿಂದೆ ಸರಿಯುತ್ತಿರಲಿಲ್ಲ.
ಅದೇನೆ ಇರಲಿ ಕಿಂಗ್ ಖಾನ್ ಉತ್ತಮ ನಡೆಯನ್ನೇ ತಮ್ಮದಾಗಿಸಿಕೊಂಡಿದ್ದಾರೆ. ಏನಂತೀರಿ...