60-70ರ ದಶಕದಲ್ಲಿ ಪಡ್ಡೆ-ಹುಡುಗ-ಹುಡುಗಿಯರ ಪಾಲಿನ ಅಚ್ಚುಮೆಚ್ಚಿನ ಬಾಲಿವುಡ್‌ನ ಎವರ್ ಗ್ರೀನ್ ಹೀರೋ ಎಂದು ಬಿರುದಾಂಕಿತರಾದ ಮೇರು ನಟ ದೇವ್ ಆನಂದ್‌ಗೆ ಇಂದು 85ರ ಹುಟ್ಟು ಹಬ್ಬದ ಸಂಭ್ರಮ.
ಒಂದು ಕಾಲದಲ್ಲಿ ದೇವ್‌ಗೆ ಕಪ್ಪು ಪ್ಯಾಂಟ್ ಮೇಲೆ ಬಿಳಿ ಶರ್ಟ್ ಧರಿಸಬಾರದೆಂದು ನಿಷೇಧ ಹೇರಲಾಗಿತ್ತು. ಅವರ ಚಿತ್ತಾಕರ್ಷಕ ಮೊಗ ಅರ್ಧದಷ್ಟು ಮಾನವರಾಶಿಯನ್ನು ಪ್ರಜ್ಞಾ ಹೀನಗೊಳಿಸುತ್ತಿತ್ತು. ಅವರು ಹಾವಭಾವಗಳು ಅಂದಿನ ಯುವಪೀಳಿಗೆಯ ಅನುಕರಣೆಯ ವಸ್ತುವಾಗಿತ್ತು.
ಐವತ್ತು ದಶಕಗಳಷ್ಟು ಕಾಲ ಭಾರತೀಯ ಸಿನೆಮಾ ರಂಗವನ್ನು ಆಳಿದ ಅವರು ನಿವೃತ್ತಿಗೊಂಡು ವೃದ್ದಾಪ್ಯದ ಏಕಾಂಗಿತನದತ್ತ ಸರಿಯಲೇ ಇಲ್ಲ. ದೇವಾನಂದ್ ಶುಕ್ರವಾರದಂದು(ಸೆಪ್ಟಂಬರ್26) ತಮ್ಮ 85ನೇ ಹುಟ್ಟುಹಬ್ಬ ಆಚರಿಸಿಕೊಂಡಿದ್ದಾರೆ.
ಹಲವು ಪ್ರತಿಭಾನ್ವಿತ ನಟಿಯರನ್ನು ಚಿತ್ರರಂಗಕ್ಕೆ ಪರಿಚಯಿಸುವುದರಿಂದ ಹಿಡಿದು ರಾಜಕೀಯ ಪಕ್ಷವನ್ನು ಸ್ಥಾಪಿಸುವರೆಗೆ ಮತ್ತು ನಟನೆ , ನಿರ್ದೇಶನ, ನಿರ್ಮಾಣ, ಸಾಮಾಜಿಕ ಕಳಕಳಿಯ ಹೋರಾಟ ಮತ್ತು ಮನಸ್ಸನ್ನು ಸೂರೆಗೊಳ್ಳುವ ರೀತಿ ಜೀವನಚರಿತ್ರೆಯನ್ನು ಬರಹಕ್ಕಿಳಿಸಿದ ಬಹುಮುಖಿ ವ್ಯಕ್ತಿತ್ವ ಅವರದ್ದು.
ಹೀಗೆ ಹಲವು ಮಜಲುಗಳಲ್ಲಿ ಕೈಯಾಡಿಸಿರುವ ಬಹುಮುಖ ಪ್ರತಿಭೆ ಹೊಂದಿರುವ ದೇವಾನಂದ್ ಒಬ್ಬನೇ ವ್ಯಕ್ತಿ ಇರುವ ಒಂದು ಬದುಕಿನಲ್ಲಿ ಇಷ್ಟೆಲ್ಲಾ ಸಾಧನೆ ಮಾಡುಲು ಸಾಧ್ಯವೇ ಎಂದು ಇತರರು ಹುಬ್ಬೇರಿಸುವಂತಹ ಮಾಡಿದ ಮೇರುನಟ.
85ರ ಹೊಸ್ತಿಲು ತಲುಪಿದರು ಚಿರಯೌವನಿರಾಗಿರುವ ದೇವಾನಂದ್ ವಯಸ್ಸಿನ ಮೇರೆಯಿಲ್ಲದ ಮೋಡಿಗಾರ.