ಸೈಫ್ ಅಲಿ ಖಾನ್ ತಮ್ಮ ನಿರ್ಮಾಣ ಸಂಸ್ಥೆಯ ಮೊದಲ ಚಿತ್ರದಲ್ಲಿ ಅವರನ್ನು ಬಿಟ್ಟು ದೀಪಿಕಾ ಪಡುಕೋಣೆಯವರನ್ನು ಹಾಕಿಕೊಂಡರೇನಂತೆ, ಇದೀಗ ಕರೀನಾ ಕಪೂರ್ ತಮ್ಮದೇ ಸ್ವಂತ ನಿರ್ಮಾಣ ಸಂಸ್ಥೆ ಸ್ಥಾಪಿಸುವ ಚಿಂತನೆಯಲ್ಲಿದ್ದಾರೆ.
ಮೂಲಗಳ ಪ್ರಕಾರ ತಮ್ಮದೇ ಆದ ನಿರ್ಮಾಣ ಸಂಸ್ಥೆಯನ್ನು ಹೊಂದಬೇಕೆಂಬ ಯೋಚನೆಯನ್ನು ಬೆಬೊ ಬಹಳ ಸಮಯದಿಂದ ಹೊಂದಿದ್ದರು, ಈಗ ಆಧಿಕೃತವಾಗಿ ತಮ್ಮ ನಿರ್ಮಾಣ ಸಂಸ್ಥೆಯನ್ನು ಸ್ಥಾಪಿಸಲು ಸನ್ನದ್ಧರಾಗಿದ್ದಾರೆ. ಕರೀನಾರ ನಿರ್ಮಾಣ ಸಂಸ್ಥೆಯ ಮೊದಲ ಚಿತ್ರ ಮುಂದಿನ ವರ್ಷದ ಆರಂಭದಲ್ಲಿ ಸೆಟ್ಟೇರಲಿದ್ದು ಬೆಬೊ ಚಿತ್ರದ ಪ್ರಮುಖ ಪಾತ್ರದಲ್ಲಿ ಕಾಣಿಸಿಕೊಳ್ಳಲಿದ್ದಾರೆ.
ಹಾಗಾದರೆ ನಾಯಕನ ಪಾತ್ರದಲ್ಲಿ ಪ್ರಿಯಕರ ಸೈಫು ಕಾಣಿಸಿಕೊಳ್ಳಲಿದ್ದಾರೆಯೇ?
ಆಧಿಕೃತವಾಗಿ ಘೋಷಣೆಯಾಗದಿದ್ದರೂ ರಿಯಲ್ ಲೈಫ್ ಹಾಟ್ ಜೋಡಿ ತೆರೆ ಮೇಲೆ ಸರಸವಾಡಲಿದೆ ಎನ್ನುತ್ತವೆ ಮೂಲಗಳು.