ಸುದ್ದಿ/ಗಾಸಿಪ್ | ಸಿನಿಮಾ ಮುನ್ನೋಟ | ಸಿನಿಮಾ ವಿಮರ್ಶೆ | ತಾರಾ ಪರಿಚಯ | ಸಂದರ್ಶನ | ಹಾಲಿವುಡ್ | ಕಿರುತೆರೆ
ಮುಖ್ಯ ಪುಟ ಮನರಂಜನೆ » ಬಾಲಿವುಡ್‌ » ಸುದ್ದಿ/ಗಾಸಿಪ್ » ನಿರ್ಮಾಪಕಿಯಾಗುವ ಯೋಚನೆ ಇಲ್ಲ:ಕರೀನಾ
ಸುದ್ದಿ/ಗಾಸಿಪ್
Feedback Print Bookmark and Share
 
IFM
ಬಾಲಿವುಡ್ ನಟಿ ಕರೀನಾ ಕಪೂರ್ ತಾವು ನಿರ್ಮಾಪಕಿಯಾಗುತ್ತಿರುವ ವರದಿಗಳನ್ನು ಅಲ್ಲಗಳೆದಿದ್ದಾರೆ.

"ನನಗೆ ನಿರ್ಮಾಪಕಿಯಾಗುವ ಯಾವುದೇ ಯೋಚನೆಗಳಲ್ಲಿ. ವದಂತಿಗಳಿಗೆ ಯಾವುದೇ ಆಧಾರಗಳಿಲ್ಲ. ಅದರಲ್ಲಿ ಯಾವುದೇ ಸತ್ಯಾಂಶವಿಲ್ಲ" ಎಂದು ಕರೀನಾ ಹೇಳಿಕೆ ನೀಡಿದ್ದಾರೆ.

"ಮುಂದಿನ ಎರಡು ವರ್ಷಗಳವರೆಗೆ ಕರೀನಾ ಕಂಠಮಟ್ಟಕ್ಕೆ ಬರುವಷ್ಟು ಕೆಲಸ ಹೊಂದಿದ್ದಾರೆ. ಅಂದಮೇಲೆ ಅವರದೇ ಆದ ನಿರ್ಮಾಣ ಸಂಸ್ಥೆ ಸ್ಥಾಪಿಸಲು ಸಮಯವೆಲ್ಲಿದೆ ?" ಎಂದು ಕರೀನಾರಿಗೆ ಹತ್ತಿರದ ಮೂಲವೊಂದು ಕರೀನಾರ ಹೇಳಿಕೆಯನ್ನು ಸಮರ್ಥಿಸಿದೆ.

ಕರೀನಾ ತಮ್ಮದೆ ನಿರ್ಮಾಣ ಸಂಸ್ಥೆ ಸ್ಥಾಪಿಸಲಿದ್ದಾರೆ. ಅವರ ಸಂಸ್ಥೆಯ ಮೊದಲ ಚಿತ್ರದಲ್ಲಿ ಅವರೇ ಮುಖ್ಯ ಪಾತ್ರದಲ್ಲಿ ನಟಿಸಲಿದ್ದಾರೆ ಮತ್ತು ಅವರೊಂದಿಗೆ ಪ್ರಿಯಕರ ಸೈಫ್ ಅಲಿ ಖಾನ್ ನಾಯಕನಾಗಿ ನಟಿಸುತ್ತಾರೆ ಎಂಬ ವದಂತಿ ಎಲ್ಲೆಡೆ ಹರಡಿತ್ತು.

ಅದೇನೇ ಇದ್ದರೂ ಕರೀನಾ ಆರ್‌ಕೆ ಕುಟುಂಬಕ್ಕೆ ಸೇರಿದವರಾಗಿದ್ದಾರೆ ಮತ್ತು ಪ್ರತಿಷ್ಟಿತ ಆರ್‌ಕೆ ಬ್ಯಾನರ್ ಅವರೊಂದಿಗಿರುವಾಗ ಅವರು ತಮ್ಮದೇ ಸ್ವಂತ ನಿರ್ಮಾಣ ಸಂಸ್ಥೆ ಹುಟ್ಟುಹಾಕುವ ಅಗತ್ಯವಾದರೂ ಏನಿದೆ ?
ಸಂಬಂಧಿತ ಮಾಹಿತಿ ಹುಡುಕಿ
ಇದನ್ನು ಸಹ ಶೋಧಿಸು: ಕರೀನಾ ಕಪೂರ್ ನಿರ್ಮಾಣ ಸಂಸ್ಥೆ