ಸುದ್ದಿ/ಗಾಸಿಪ್ | ಸಿನಿಮಾ ಮುನ್ನೋಟ | ಸಿನಿಮಾ ವಿಮರ್ಶೆ | ತಾರಾ ಪರಿಚಯ | ಸಂದರ್ಶನ | ಹಾಲಿವುಡ್ | ಕಿರುತೆರೆ
ಮುಖ್ಯ ಪುಟ ಮನರಂಜನೆ » ಬಾಲಿವುಡ್‌ » ಸುದ್ದಿ/ಗಾಸಿಪ್ » ಪತ್ರಕರ್ತರ ಮೇಲೆ ಹಲ್ಲೆ ಆರೋಪದ ಬಗ್ಗೆ ಸೈಫ್ ಸ್ಪಷ್ಟನೆ
ಸುದ್ದಿ/ಗಾಸಿಪ್
Feedback Print Bookmark and Share
 
IFM
ಸೋಮವಾರದಂದು ಪಟಿಯಾಲದಲ್ಲಿ ಮಾಧ್ಯಮಗಳು ಛಾಯಚಿತ್ರ ಪತ್ರಕರ್ತರ ಮೇಲೆ ಹಲ್ಲೆ ಪ್ರಕರಣದಲ್ಲಿ ಸೈಫ್ ಅಲಿಖಾನ್ ಅವರನ್ನು ತಪ್ಪಿತಸ್ಥ ಎಂಬಂತೆ ವರದಿ ಮಾಡಿದ್ದವು. ಈ ಬಗ್ಗೆ ಸೈಫ್ ಕುಪಿತರಾಗಿದ್ದಾರೆ.

"ಮೊದಲನೇಯದಾಗಿ ವರದಿಯಲ್ಲಿ ಚಿತ್ರದ ಹೆಸರನ್ನು ತಪ್ಪಾಗಿ ನಮೂದಿಸಲಾಗಿದೆ. ನಾವು 3 ಇಡಿಯಟ್ಸ್ ಚಿತ್ರದ ಚಿತ್ರೀಕರಣ ಮಾಡುತ್ತಿರಲಿಲ್ಲ. ನಾನು ಆ ಚಿತ್ರದಲ್ಲಿ ನಟಿಸುತ್ತಿಲ್ಲ, ಕರೀನಾ ನಟಿಸುತ್ತಿದ್ದಾರೆ. ನಾನು ಇಮ್ತಿಯಾಜ್ ಅಲಿ ಅವರ ಚಿತ್ರದ ಚಿತ್ರೀಕರಣದಲ್ಲಿದ್ದೆ.

ನಾವು ಕಳೆದ ಮೂರು ದಿನಗಳಿಂದ ಪಟಿಯಾಲದ ರೈಲ್ವೆ ನಿಲ್ಧಾಣದಲ್ಲಿ ರಾತ್ರಿ ಚಿತ್ರೀಕರಣದಲ್ಲಿ ನಿರತರಾಗಿದ್ದೆವು. ಈ ಘಟನೆ ಚಿತ್ರೀಕರಣ ಆರಂಭವಾಗುವ ಮೊದಲು ನಡೆಯಿತು. ಅಲ್ಲಿ ಕೆಲವು ಛಾಯಚಿತ್ರ ಪತ್ರಕರ್ತರೊಡನೆ ವಾಗ್ಯುದ್ಧ ನಡೆಯಿತು, ಅವರ ಹೆಸರು ಸಹ ನನಗೆ ತಿಳಿದಿಲ್ಲ. ಸಹ ನಿರ್ಮಾಪಕ ದಿನೇಶನ್ ವಿಜಯನ್‌ರೂ ಸೇರಿದಂತೆ ನಮ್ಮ ತಂಡದ ಎಲ್ಲ ಸದಸ್ಯರು ಘಟನೆಯ ಬಗ್ಗೆ ಕ್ಷಮೆ ಕೋರಿದರು. ಮತ್ತು ಅಲ್ಲಿಗೆ ಆ ವಿಚಾರ ಮುಗಿಯಿತು ಎಂದು ನಾನು ತಿಳಿದಿದ್ದೆ" ಎಂದು ಸೈಫ್ ಹೇಳಿದ್ದಾರೆ

ಮುಂದೇನಾಯಿತು ಎಂಬುದು ಎಲ್ಲರಿಗೂ ತಿಳಿದಿದೆ, ಪತ್ರಕರ್ತರು ಪೊಲೀಸರಲ್ಲಿ ದೂರು ಸಲ್ಲಿಸಿದರು. "ಇವೆಲ್ಲದರ ಅಗತ್ಯವೇ ಇರಲಿಲ್ಲ ಎಂದು ನನಗೆ ಅನಿಸುತ್ತದೆ. ನಾನು ಆ ಪತ್ರಕರ್ತರು ಮತ್ತು ಪಟಿಯಾಲ ಪ್ರೆಸ್ ಅನ್ನು ವಿಶ್ವಾಸಕ್ಕೆ ತೆಗೆದುಕೊಂಡಿದ್ದೇನೆ. ಈಗ ಎಲ್ಲವೂ ಸರಿಯಾಗಿದೆ" ಎಂದು ಸೈಫ್ ತಿಳಿಸಿದ್ದಾರೆ.

ಸೈಫ್ ಮಾಧ್ಯಮದವರೊಂದಿಗೆ ಜಟಾಪಟಿ ಮಾಡಿಕೊಂಡದ್ದು ಇದೇ ಮೊದಲ ಬಾರಿಯೇನಲ್ಲ. "ಆದರೆ ಇದೆ ಕೊನೆಯ ಬಾರಿಯಾಗಲಿ ಎಂದು ಬಯಸುತ್ತೇನೆ" ಎನ್ನುತ್ತಾರೆ ಸೈಫ್.
ಸಂಬಂಧಿತ ಮಾಹಿತಿ ಹುಡುಕಿ
ಇದನ್ನು ಸಹ ಶೋಧಿಸು: ಪತ್ರಕರ್ತ ಹಲ್ಲೆ ಸೈಫ್ ಅಲಿಖಾನ್