ಸುದ್ದಿ/ಗಾಸಿಪ್ | ಸಿನಿಮಾ ಮುನ್ನೋಟ | ಸಿನಿಮಾ ವಿಮರ್ಶೆ | ತಾರಾ ಪರಿಚಯ | ಸಂದರ್ಶನ | ಹಾಲಿವುಡ್ | ಕಿರುತೆರೆ
ಮುಖ್ಯ ಪುಟ ಮನರಂಜನೆ » ಬಾಲಿವುಡ್‌ » ಸುದ್ದಿ/ಗಾಸಿಪ್ » ಐಶ್ ಎದುರು ಮಂಕಾಗಿ ಕಾಣಿಸಿದರೆ ಚಿಂತೆಯಿಲ್ಲ: ಅಭಿ
ಸುದ್ದಿ/ಗಾಸಿಪ್
Feedback Print Bookmark and Share
 
IFM
ಈ ವಾರ ತಮ್ಮ ದ್ರೋಣ ಚಿತ್ರದ ಬಿಡುಗಡೆಗೆ ಸನ್ನದ್ಧರಾಗುತ್ತಿರುವ ಅಭಿಷೇಕ್ ಬಚ್ಚನ್ ತಾವು ತಮ್ಮ ಪತ್ನಿ ಐಶ್ವರ್ಯಾ ಎದುರು ಮಂಕಾಗಿ ಕಾಣಿಸಿದರೆ ಆ ಬಗ್ಗೆ ತಮಗೇನೂ ತೊಂದರೆಯಿಲ್ಲ ಎಂದು ಹೇಳಿದ್ದಾರೆ.

ಕಿರಿಯ ಬಚ್ಚನ್ ದಂಪತಿಗಳು ಈ ವರ್ಷದ ಕ್ಯಾನೆ ಚಲನಚಿತ್ರೋತ್ಸವದಲ್ಲಿ ಪಾಲ್ಗೊಂಡ ಸಂದರ್ಭ ತಮಗಿಂತ ಪತ್ನಿ ಹೆಚ್ಚು ಪ್ರಾಮುಖ್ಯತೆ ಪಡೆಯುತ್ತಿರುವುದರ ಬಗ್ಗೆ ಹೇಗನಿಸುತ್ತದೆ ಎಂದು ಅಭಿಷೇಕ್‌ರನ್ನು ಮತ್ತೆ ಮತ್ತೆ ಪ್ರಶ್ನಿಸಲಾಯಿತು.

"ಇಂತಹ ಪ್ರಶ್ನೆಗಳ ಹಿಂದಿನ ಉದ್ದೇಶವು ಉತ್ತಮವಾದುದಲ್ಲದಿದ್ದರೂ, ಇದರಿಂದ ನಾನು ಒಂದಿಷ್ಟೂ ವಿಚಲಿತನಾಗಿಲ್ಲ. ವಿಶ್ವದ ಅತ್ಯಂತ ಸುಂದರ ಮಹಿಳೆಯೆದುರು ಮಂಕಾಗಿ ಕಾಣಿಸಿಕೊಳ್ಳುವುದು ಸಂತೋಷದ ವಿಷಯ" ಎಂದು ಅಭಿಷೇಕ್ ಉತ್ತರಿಸಿದರು.

ಗುರು ಚಿತ್ರದ ನಂತರ ಅವರು ಮತ್ತೆ ಮಣಿರತ್ನಂ ಚಿತ್ರದಲ್ಲಿ ಪತ್ನಿಯ ಜೊತೆ ನಟಿಸಲಿದ್ದಾರೆ.

"ಮಣಿರತ್ನಂ ಚಿತ್ರದ ಸಂದರ್ಭ ಅವಳೊಂದಿಗೆ ನಾನು ಉತ್ತಮ ಸಮಯವನ್ನು ಕಳೆಯಲಿದ್ದೇನೆ. ಪ್ರಸ್ತುತ ನಾನು ಅವಳು ಬ್ರೆಜಿಲ್‌ನಿಂದ್ ಮರಳಿ ಬರುವುದನ್ನು ನಿರೀಕ್ಷಿಸುತ್ತಿದ್ದೇನೆ" ಎಂದು ಅವರು ಹೇಳಿದ್ದಾರೆ.
IFM


ಐಶ್ವರ್ಯ ಬ್ರೆಜಿಲ್‌ನಲ್ಲಿ ಶಂಕರ್‌ರ ರೋಬೋಟ್ ಚಿತ್ರದ ಚಿತ್ರೀಕರಣದಲ್ಲಿ ತೊಡಗಿದ್ದಾರೆ. ದ್ರೋಣ ಚಿತ್ರದ ಪ್ರೀಮಿಯರ್ ಸಂದರ್ಭ ಐಶ್‌ರ ಇರುವಿಕೆಯನ್ನು ಎದುರು ನೋಡುತ್ತಿರುವುದಾಗಿ ಅಭಿಷೇಕ್ ಹೇಳಿದರು

"ನನ್ನ ಚಿತ್ರದ ಪ್ರೀಮಿಯರ್‌ನಲ್ಲಿ ಭಾಗವಹಿಸುವುದಕ್ಕೋಸ್ಕರವೇ ನನ್ನ ಪತ್ನಿ ಮರಳಿ ಬರುತ್ತಿದ್ದಾರೆ ಎಂದು ಕೇಳಿದಾಗ ಬಹಳ ಸಂತೋಷವಾಗುತ್ತದೆ. ಆದರೆ ಇದು ನಿಜವಲ್ಲ. ದ್ರೋಣ ಚಿತ್ರದ ಪ್ರೀಮಿಯರ್‌ಗಿಂತ ಒಂದು ವಾರ ಮೊದಲೇ ಶಂಕರ್‌ರ ಅವರ ಚಿತ್ರೀಕರಣ ಕೊನೆಗೊಳ್ಳುತ್ತಿದೆ, ಆದ್ದರಿಂದ ಐಶ್ವರ್ಯ ದ್ರೋಣ ಚಿತ್ರದ ಪ್ರೀಮಿಯರ್‌ನಲ್ಲಿ ಭಾಗವಹಿಸುತ್ತಾರೆ" ಎಂದರವರು,

"ಇಷ್ಟನ್ನು ಹೇಳಿದ ಮೇಲೆ, ಇನ್ನೊಂದು ವಿಷಯವನ್ನು ನಾನು ಹೇಳಲೇಬೇಕು. ಅವಳು ವಿಶ್ವದ ಯಾವುದೇ ಮೂಲೆಯಲ್ಲಿ ಚಿತ್ರೀಕರಣದಲ್ಲಿ ತೊಡಗಿದ್ದರೂ ನನ್ನ ಚಿತ್ರದ ಪ್ರೀಮಿಯರ್‌ಗಾಗಿ ಮುಂಬಯಿಗೆ ಮರಳಿ ಬರುತ್ತಿದ್ದಳು" ಎಂದು ಅಭಿಷೇಕ್ ಹೇಳಿದ್ದಾರೆ.
ಸಂಬಂಧಿತ ಮಾಹಿತಿ ಹುಡುಕಿ
ಇದನ್ನು ಸಹ ಶೋಧಿಸು: ದ್ರೋಣ ಅಭಿಷೇಕ್ ಬಚ್ಚನ್ ಐಶ್ವರ್ಯಾ ರೋಬೋಟ್