ಪ್ರಸ್ತುತ ರಾಣಿ ಮುಖರ್ಜಿ, ಶಾಹಿದ್ ಕಪೂರ್ ಜೊತೆ ನಾಯಕಿಯಾಗಿ ನಟಿಸುತ್ತಿರುವ ಯಶ್ ರಾಜ್ರ ಚಿತ್ರದ ಚಿತ್ರೀಕರಣದಲ್ಲಿ ನಿರತರಾಗಿದ್ದಾರೆ. ಚಿತ್ರದ ಸೆಟ್ನಲ್ಲಿ ತಮಾಷೆಗಾಗಿ ಶುರುವಾದ ಕುಚೇಷ್ಟೆ ಈಗಾಗಲೇ ಕುಗ್ಗಿ ಹೋಗಿರುವ ರಾಣಿಯನ್ನು ಪೆಚ್ಚಾಗಿಸಿತು.
ಮೂಲವೊಂದು ತಿಳಿಸುವಂತೆ ರಾಣಿ ಮುಖರ್ಜಿ ಶಾಹಿದ್ ಕಪೂರ್ಗಿಂತ ಹಲವು ವರ್ಷ ಹಿರಿಯವರು. ಆದ್ದರಿಂದ ರಾಣಿ ತೆರೆಯ ಮೇಲೆ ಮಾತ್ರವಲ್ಲದೆ ಸೆಟ್ನಲ್ಲಿಯೂ ಸಹ ತಮ್ಮ ನಡುವಿನ ವಯಸ್ಸಿನ ಅಂತರ ಮರೆಮಾಚಲು ಶತಪ್ರಯತ್ನ ಮಾಡಲಾರಂಭಿಸಿದರು.
ಚಿತ್ರದ ಸೆಟ್ನಲ್ಲಿ ರಾಣಿ ಶಾಹಿದ್ರನ್ನು 'ಸರ್' ಎಂದು ಕರೆಯಲಾರಂಭಿಸಿದರು. ಶಾಹಿದ್ಗೆ ಇದು ತಮಾಷೆಯಾಗಿ ಕಾಣಿಸಿತು. ಆದರೆ ಶಾಹಿದ್ ತಮ್ಮ ಮುಜುಗರವನ್ನು ಮುಚ್ಚಿಟ್ಟುಕೊಳ್ಳವಂತಿರಲಿಲ್ಲ ಯಾಕೆಂದರೆ ರಾಣಿ ಸೆಟ್ನಲ್ಲಿ ಇತರರ ಮುಂದೆಯೂ 'ಶಾಹಿದ್ ಸರ್' ಎಂದೇ ಕರೆಯಲಾರಂಭಿದರು. ರಾಣಿಯನ್ನು ಅನುಸರಿಸಿ ಚಿತ್ರತಂಡದ ಪ್ರತಿಯೊಬ್ಬರು ಶಾಹಿದ್ರನ್ನು 'ಸರ್' ಎಂದು ಕರೆಯಲಾರಂಭಿಸಿದ್ದು ಶಾಹಿದ್ಗೆ ತೀರಾ ಕಿರಿಕಿರಿಯುಂಟು ಮಾಡಿತು.
ಅವರನ್ನು ಮೊದಲ ಹೆಸರಿನಿಂದ ಕರೆಯುತ್ತಿದ್ದ ಸಹನಿರ್ದೇಶಕರು ಸಹ 'ಶಾಹಿದ್ ಸರ್' ಎಂದು ಕರೆಯಲಾರಂಭಿಸಿದರು. ಇದನ್ನು ತಪ್ಪಾಗಿ ಅರ್ಥೈಸಿಕೊಂಡ ಶಾಹಿದ್ ರಾಣಿ ಸೂಚನೆಯಂತೆ ಎಲ್ಲರು ಸೇರಿ ಬೇಕೆಂದೇ ಕೀಟಲೆ ಮಾಡುತ್ತಿದ್ದಾರೆ ಎಂದು ತಿಳಿದುಕೊಂಡರು.
ಕಳೆದ ಶುಕ್ರವಾರ ಊಟದ ವಿರಾಮದ ಸಮಯ ಶಾಹಿದ್ರನ್ನು ಊಟಕ್ಕೆ ಆಹ್ವಾನಿಸಲು ರಾಣಿ ಕಳುಹಿಸಿದ ವ್ಯಕ್ತಿ ಅಭ್ಯಾಸದಂತೆ 'ಶಾಹಿದ್ ಸರ್' ಎಂಬ ಪದ ಬಳಸಿದ, ಮೊದಲೇ ಕೋಪಗೊಂಡಿದ್ದ ಶಾಹಿದ್, ಆತನ ಮೇಲೆ ಹರಿಹಾಯ್ದರು, ಆತ ಹೆಚ್ಚು ಕಡಿಮೆ ರೇಸ್ನಲ್ಲಿ ಓಡಿದಂತೆ ರಾಣಿಯ ಬಳಿ ಒಟಕಿತ್ತ. ಅಂದು ಶಾಹಿದ್ ಊಟಕ್ಕೆ ಹೋಗಲಿಲ್ಲ. ಆದರೆ ದಿನದ ಚಿತ್ರೀಕರಣ ಮುಗಿದ ನಂತರ ರಾಣಿ, ಶಾಹಿದ್ರ ಬಳಿ ಹೋಗಿ ಮಾತನಾಡಿದರು, ಇದರಿಂದ ಈ ವಿಷಯ ಅಲ್ಲಿಗೆ ಮುಕ್ತಾಯಗೊಂಡಂತಿದೆ.
ಈಗ ಅವರಿಬ್ಬರೂ ಒಬ್ಬರೊಬ್ಬರನ್ನು ಅವರ ಮೊದಲ ಹೆಸರಿನಿಂದ ಕರೆಯುತ್ತಾರೆ. ಚಿತ್ರತಂಡದ ಉಳಿದ ಎಲ್ಲರೂ ಮತ್ತೆ ಹಿಂದಿನಂತೆ- ಶಾಹಿದ್ ಜಿ ಮತ್ತು ರಾಣಿ ಜಿ ಎಂದು ಕರೆಯಲಾರಂಭಿಸಿದ್ದಾರಂತೆ.