ಸಿಂಗ್ ಈಸ್ ಕಿಂಗ್ ಚಿತ್ರದ ಯಶಸ್ಸನ್ನು ಆನಂದಿಸುತ್ತಿದ್ದ ನಿರ್ಮಾಪಕ-ನಿರ್ದೇಶಕ ವಿಪುಲ್ ಅಮೃತ್ಲಾಲ್ ಲಂಡನ್ನ ಸುತ್ತಾಮುತ್ತಾ ಲಂಡನ್ ಡ್ರೀಮ್ಸ್ ಚಿತ್ರದ ಚಿತ್ರೀಕರಣ ಆರಂಭಿಸಿದ್ದಾರೆ.
ಚಿತ್ರದಲ್ಲಿ ಸಲ್ಮಾನ್ ಖಾನ್ ಹಾಗು ಅಜಯ್ ದೇವಗನ್ ಮುಖ್ಯಪಾತ್ರದಲ್ಲಿದ್ದು ದಕ್ಷಿಣದ ಬೆಡಗಿ ಆಸಿನ್ ನಾಯಕಿಯಾಗಿದ್ದಾರೆ. ಅಜಯ್ ಮತ್ತು ಸಲ್ಮಾನ್ ಒಂದು ದಶಕದ ನಂತರ ಜೊತೆಯಾಗಿ ನಟಿಸುತ್ತಿದ್ದು, 'ಹಮ್ ದಿಲ್ ದೇ ಚುಕೇ ಸನಮ್' ಚಿತ್ರದ ಮೂಲಕ ಮಾಡಿದ ಮೋಡಿಯನ್ನು ಈ ಜೋಡಿ ಮರುಕಳಿಸಲಿದೆಯೇ ಎಂದು ಅವರ ಅಭಿಮಾನಿ ಬಳಗ ಕುತೂಹಲದಿಂದ ಕಾಯುತ್ತಿದೆ.
ಆಸಿನ್ರ ಬಗ್ಗೆ ಹೇಳುವುದಾದರೆ ಅವರು ಬಾಲಿವುಡ್ನಲ್ಲಿ ಸರಿಯಾದ ಆಯ್ಕೆಗಳನ್ನು ಮಾಡುತ್ತಿದ್ದಾರೆ. ಗಜ್ನಿ ಚಿತ್ರದಲ್ಲಿ ಅಮೀರ್ ಖಾನ್ ಎದುರು ನಟಿಸಿರುವ ಈ ನಟಿ ಅಜಯ್ ಮತ್ತು ಸಲ್ಮಾನ್ರೊಂದಿಗೆ ನಟಿಸಲಿದ್ದಾರೆ.
ಚಿತ್ರದ ತಾರಾಗಣ ಮತ್ತು ವಿಪುಲ್ ಶಾರ ಸಮ್ಮೇಳವನ್ನು ಕಂಡಾಗ ಲಂಡನ್ ಡ್ರೀಮ್ಸ್ ಬರುವ ವರ್ಷದ ಅತೀ ದೊಡ್ಡ ಚಿತ್ರಗಳಲ್ಲಿ ಒಂದಾಗಿರುವಂತೆ ಕಂಡುಬರುತ್ತಿದೆ.