ಬಾಲಿವುಡ್‌ನಲ್ಲಿ ಬಿಸಿ ಚರ್ಚೆಗೆ ಗ್ರಾಸವಾದ ಕರೀನಾ ಕಪೂರ್-ಶಾಹಿದ್ ಕಪೂರ್ ವಿಘಟನೆಯ ನಂತರ ಇದೀಗ 10 ವರ್ಷಗಳ ಕಾಲ ದಂಪತಿಗಳಾಗಿ ಜೀವನ ಸವೆಸಿರುವ ಅರ್ಶದ್ ವಾರ್ಸಿ ಮತ್ತು ಮಾರಿಯಾ ಅವರ ವಿವಾಹಿತ ಜೀವನ ಮುರಿದು ಬೀಳುವ ಅಂಚಿನಲ್ಲಿದೆ ಎಂಬ ವದಂತಿಗಳು ದಟ್ಟಗೊಂಡಿವೆ.
ತಮ್ಮ ತಂದೆ ತಾಯಿಯ ನಡುವೆ ಉಂಟಾಗಿರುವ ಕಂದರದ ಅರಿವಿಲ್ಲದ ತಮ್ಮ ಮಕ್ಕಳಿಗಾಗಿ ತಮ್ಮ ವಿವಾಹಿತ ಜೀವನದಲ್ಲಿ ಆನೇಕ ಗಂಭೀರ ಸಮಸ್ಯೆಗಳನ್ನು ಹೊಂದಿರುವ ಈ ಜೋಡಿ ಒಂದೇ ಸೂರಿನಡಿ ಜೀವಿಸುತ್ತಿದೆ ಎಂದು ಹೇಳಲಾಗುತ್ತಿದೆ.
ಮೂಲಗಳ ಪ್ರಕಾರ "ಮಾರಿಯಾ ಸಂಬಂಧವನ್ನು ಕೊನೆಗಾಣಿಸಬೇಕೆಂದು ಬಯಸುತ್ತಿದ್ದಾರೆ. ಆದರೆ ಅರ್ಶದ್‌ಗೆ ತಮ್ಮ ಪತ್ನಿ ಮನೆ ಬಿಟ್ಟು ತೆರಳುವುದು ಇಷ್ಟವಿಲ್ಲ".
ವೈವಾಹಿಕ ಬದುಕಿನ ಸಮಸ್ಯೆಗಳ ಬಗ್ಗೆ ಪ್ರಶ್ನಿಸಿದಾಗ ಅರ್ಶದ್ "ನನ್ನ ದುಡಿಮೆಯನ್ನು ಬಿಟ್ಟು ಬೇರಾವುದರ ಬಗ್ಗೆಯೂ ಚಿಂತಿಸಲು ನನ್ನಲ್ಲಿ ಸಮಯವಿಲ್ಲ" ಎಂದು ಹೇಳುವ ಮೂಲಕ ಉತ್ತರಿಸಲು ನಿರಾಕರಿಸಿದರು.
ಈ ಸುಂದರ ಜೋಡಿ, ಸುಖಿ ದಾಂಪತ್ಯಕ್ಕೆ ಮತ್ತೆ ಮರಳಲಿ ಎಂಬ ಹಾರೈಕೆ.