ಸುದ್ದಿ/ಗಾಸಿಪ್ | ಸಿನಿಮಾ ಮುನ್ನೋಟ | ಸಿನಿಮಾ ವಿಮರ್ಶೆ | ತಾರಾ ಪರಿಚಯ | ಸಂದರ್ಶನ | ಹಾಲಿವುಡ್ | ಕಿರುತೆರೆ
ಮುಖ್ಯ ಪುಟ ಮನರಂಜನೆ » ಬಾಲಿವುಡ್‌ » ಸುದ್ದಿ/ಗಾಸಿಪ್ » ಎಲ್ಲಿಯ ಠಾಕ್ರೆ, ಎಲ್ಲಿಯ ಸಲ್ಮಾನ್?
ಸುದ್ದಿ/ಗಾಸಿಪ್
Feedback Print Bookmark and Share
 
PTI
ಸಲ್ಮಾನ್ ಖಾನ್ ಬಾಲಿವುಡ್‌ನ ಬ್ಯಾಡ್ ಬಾಯ್ ಆಗಿರಬಹುದು. ಎಷ್ಟೇ ಮಂದಿ ಆತನನ್ನು ತೆಗಳಿರಬಹುದು. ಆದರೆ ಇದೀಗ ಅನಿರೀಕ್ಷಿತ ಕಡೆಯಿಂದ ಹೊಗಳಿಕೆ ಗಿಟ್ಟಿಸಿಕೊಂಡಿದೆ. ಎಲ್ಲಿಂದ ಅಂತೀರಾ?

ಶಿವಸೇನೆಯ ಪರಮೋಚ್ಛ ನಾಯಕ ಬಾಳ್ ಠಾಕ್ರೆ ತನ್ನ ಪಕ್ಷದ ಮುಖವಾಣಿ ಸಾಮ್ನಾದಲ್ಲಿ ಸಲ್ಮಾನ್ ಖಾನ್ ಮತ್ತು ಆತನ ತಂದೆ ಸಲೀಂ ಖಾನ್‌ರ ಜಾತ್ಯತೀತ ಭಾವನೆಗಳಿಗಾಗಿ ಅಪಾದಮಸ್ತಕ ಗುಣಗಾನ ಮಾಡಿದ್ದಾರೆ.

"ಭಾರತದ ಎಲ್ಲಾ ಮುಸ್ಲಿಮರು ಸಲೀಂ ಖಾನ್‍‌ರ ದಾರಿಯನ್ನೇ ಹಿಡಿದರೆ ಇಲ್ಲಿನ ಸಮಸ್ಯೆಗಳು ತನ್ನಿಂದ ತಾನಾಗಿ ಮಾಯವಾಗುತ್ತವೆ" ಎಂದು ಸಾಮ್ನಾ ಸಂಪಾದಕೀಯದಲ್ಲಿ ಬರೆಯಲಾಗಿದ್ದು, ಸಲೀಂ ಖಾನ್ ಪತ್ರಿಕಾ ಸಂದರ್ಶನವೊಂದರಲ್ಲಿ, "ಧರ್ಮದಲ್ಲಿ ನಾನು ಮುಸ್ಲಿಂ, ಆದರೆ ಸಾಂಸ್ಕೃತಿಕವಾಗಿ ನಾನು ಹಿಂದೂ" ಎಂದು ಹೇಳಿದ್ದನ್ನು ಕೂಡಾ ಇಲ್ಲಿ ಉಲ್ಲೇಖಿಸಲಾಗಿದೆ.

ಹೊಗಳಿಕೆ ಅಷ್ಟಕ್ಕೇ ಮುಗಿದಿಲ್ಲ. ಸಲ್ಮಾನ್ ಚೌತಿಯ ಸಂಭ್ರಮದಲ್ಲಿ ಪಾಲ್ಗೊಳ್ಳುವ ಮತ್ತು ಮನೆಯಲ್ಲಿ ಗಣೇಶ ಮೂರ್ತಿಯನ್ನಿಡುತ್ತಿರುವುದನ್ನೂ ಶ್ಲಾಘಿಸಿರುವ ಠಾಕ್ರೆ, ಸಲ್ಮಾನ್‌ರ ಈ ಆಚರಣೆ ಬಗ್ಗೆ ಆಕ್ಷೇಪವೆತ್ತಿರುವ ಮುಸ್ಲಿಂ ನಾಯಕರ ಬಗ್ಗೆ ಹರಿಹಾಯ್ದಿದ್ದು, "ಇಸ್ಲಾಂ, ಮುಲ್ಲಾಗಳು ಮತ್ತು ಮೌಲವಿಗಳ ಸೊತ್ತಲ್ಲ" ಎಂದಿದ್ದಾರೆ.

"ಇದುವರೆಗೆ ಸಲೀಂ-ಅನಾರ್ಕಲಿ ಕಥೆ ಮಾತ್ರ ಭಾರತೀಯರಿಗೆ ಗೊತ್ತಿತ್ತು. ದೇಶದ ಮುಸ್ಲಿಮರು ಸಲೀಂ-ಸಲ್ಮಾನ್‌ರನ್ನು ಮಾದರಿಯಾಗಿ ಸ್ವೀಕರಿಸಿ ಅವರ ಹಾದಿಯಲ್ಲಿ ಮುನ್ನಡೆದರೆ ಭಾರತ ಯಾವತ್ತೂ ಸಂಘಟಿತವಾಗಿರುತ್ತದೆ" ಎಂದು ಸಾಮ್ನಾ ಸಂಪಾದಕೀಯದಲ್ಲಿ ಬರೆಯಲಾಗದೆ.
ಸಂಬಂಧಿತ ಮಾಹಿತಿ ಹುಡುಕಿ
ಇದನ್ನು ಸಹ ಶೋಧಿಸು: ಸಲ್ಮಾನ್ ಖಾನ್, ಬಾಳ್ ಠಾಕ್ರೆ, ಸಾಮ್ನಾ ಸಂಪಾದಕೀಯ