ಸುದ್ದಿ/ಗಾಸಿಪ್ | ಸಿನಿಮಾ ಮುನ್ನೋಟ | ಸಿನಿಮಾ ವಿಮರ್ಶೆ | ತಾರಾ ಪರಿಚಯ | ಸಂದರ್ಶನ | ಹಾಲಿವುಡ್ | ಕಿರುತೆರೆ
ಮುಖ್ಯ ಪುಟ ಮನರಂಜನೆ » ಬಾಲಿವುಡ್‌ » ಸುದ್ದಿ/ಗಾಸಿಪ್ » ಮಿನಿಷಾಳ ರಸನಿಮಿಷಗಳು ಗುಪ್ತ್ ಗುಪ್ತ್ !
ಸುದ್ದಿ/ಗಾಸಿಪ್
Feedback Print Bookmark and Share
 
IFM
ಮಿನಿಷಾ ಎಂದರೆ ಅಷ್ಟು ಸುಲಭದಲ್ಲಿ ತಿಳಿಯಲಿಕ್ಕಿಲ್ಲ. 'ಕಿಡ್ನ್ಯಾಪ್' ಮಿನಿಷಾ ಲಾಂಬಾ ಅಂದರೆ ಸುಲಭ. ವಿಷಯ ಇಷ್ಟೇ, ಮಿನಿಷಾ ಒಬ್ಬ ಸುಂದರಾಂಗನ ಜತೆ ಇತ್ತೀಚೆಗೆ ಬಾಂದ್ರಾದ ನೈಟ್‌ಸ್ಪಾಟ್‌ನಿಂದ ಹೊರಬರುವುದನ್ನು ಕೆಲವರು ನೋಡಿದ್ದಾರೆ. ಅದೀಗ ಎಲ್ಲರ ಬಾಯಲ್ಲೂ ನಲಿದಾಡುತ್ತಿದೆ.. ಅಷ್ಟೇ.

ನೋಡಿದವರ ಪ್ರಕಾರ ಇವರಿಬ್ಬರ ಜತೆಗೆ ಗೆಳೆಯರ ಪಟಾಲಮ್ಮೇ ಇತ್ತು. ಆದರೆ ಅವರಿಬ್ಬರು ಮಾತ್ರ ಜೋಡಿಯಾಗಿ ಬೇರೆಯಾಗೇ ಇದ್ದರೆಂಬುದೇ ಸುದ್ದಿ ದೊಡ್ಡದಾಗಲು ಕಾರಣ. ಅವಳದನ್ನು ಒಪ್ಪಿಕೊಳ್ಳುತ್ತಾಳಾದರೂ ಆತನಾರು ಮತ್ತು ಆತನ ಹೆಸರೇನು ಎಂಬುದನ್ನು ಬಹಿರಂಗಪಡಿಸಲು ಇಚ್ಚಿಸುತ್ತಿಲ್ಲ.

ಮಿನಿಷಾ ಹೇಳುವ ಪ್ರಕಾರ, "ಯಾವ ಕಾರಣಕ್ಕೂ ಆತ ಯಾರೆಂದು ನಿಮಗೆ ಹೇಳಲಾರೆ. ನಾನು ಕೆಲವು ಸ್ನೇಹಿತರನ್ನು ಹೊಂದಿದ್ದೇನೆ ಮತ್ತು ಯಾರ ಹೆಸರನ್ನೂ ಬಹಿರಂಗಪಡಿಸಲಿಚ್ಚೆಸುವುದಿಲ್ಲ. ಹೆಸರು ಮಾಧ್ಯಮಗಳಲ್ಲಿ ಬರುವುದು ಆತನಿಗಿಷ್ಟವಿಲ್ಲ. ಖಾಸಗಿ ಬದುಕನ್ನು ಅವರೆಲ್ಲ ತುಂಬಾ ಇಷ್ಟಪಡುತ್ತಾರೆ".

ಈಗ ಗೋವಾದಲ್ಲಿರುವ ಆಕೆಗೆ 'ಕಿಡ್ನ್ಯಾಪ್' ಚಿತ್ರದ ಬಗ್ಗೆ ಅಪಾರ ನಿರೀಕ್ಷೆ ಇದೆ. ದೀಪಾವಳಿ ಬೇರೆ ಹತ್ತಿರ ಬಂದಿದೆ. "ನನಗೆ ಮನೆಗಿಂತ ಗೋವಾದಲ್ಲಿ ಹೆಚ್ಚಿನ ರಜಾ ಮಜಾ ಸಿಗುತ್ತದೆ. ನನ್ನ ತಂದೆ ದಕ್ಷಿಣ ಗೋವಾದಲ್ಲಿ ಹೊಟೇಲು ಉದ್ಯಮ ನಡೆಸುತ್ತಿದ್ದಾರೆ. ಹಾಗಾಗಿ ಆಗಾಗ ನಾನಿಲ್ಲಿಗೆ ಬರುತ್ತಿರುತ್ತೇನ" ಎನ್ನುತ್ತಾರೆ ಮಿನಿಷಾ.
ಸಂಬಂಧಿತ ಮಾಹಿತಿ ಹುಡುಕಿ
ಇದನ್ನು ಸಹ ಶೋಧಿಸು: ಮಿನಿಷಾ ಲಾಂಬಾ, ಗೋವಾ, ಕಿಡ್ನ್ಯಾಪ್