ಕರಣ್ ಜೋಹರ್ ಸಿನಿಮಾದಲ್ಲಿ ನಟಿಸಲು ಕಾಜೋಲ್ ನಿರಾಕರಿಸಿದ್ದಾಳೆಂಬ ಲೇಟೆಸ್ಟ್ ಸುದ್ದಿ ಬಾಲಿವುಡ್ ಅಂಗಳದಿಂದ ಬಂದಿದೆ.
ಕಾಜೋಲ್ ಕೊಟ್ಟಿರುವ ಕಾರಣ ಕೌಟುಂಬಿಕ ಸಮಸ್ಯೆಗಳು. ಚಿತ್ರಕ್ಕಾಗಿ ಕರಣ್ ಕೇಳಿದ 60 ದಿನಗಳ ಕಾಲ್ಶೀಟ್ನ ಶೂಟಿಂಗ್ಗಾಗಿ ಲಂಡನ್ಗೆ ಹೋಗಬೇಕಿತ್ತು. ಆದರೆ ತನ್ನ ಮಗಳು ನ್ಯಾಸಾಳನ್ನು ಅಷ್ಟು ದಿನ ಬಿಟ್ಟಿರಲು ಸಾಧ್ಯವಿಲ್ಲ. ಹಾಗಂತ ಜೊತೆಗೆ ಕರೆದುಕೊಂಡು ಹೋಗುವುದು ಕೂಡಾ ಕೆಲವು ಸಮಸ್ಯೆಗಳಿಗೆ ಕಾರಣವಾಗುತ್ತದೆ. ಹಾಗಾಗಿ ಕರಣ್ ಚಿತ್ರವನ್ನು ಕಾಜೋಲ್ ನಿರಾಕರಿಸಿದ್ದಾಳೆ ಎನ್ನುತ್ತವೆ ಕಾಜೋಲ್ ನಿಕಟಮೂಲಗಳು.
ಈ ಹಿಂದಿನ ಕರಣ್ ಚಿತ್ರಗಳೆಲ್ಲದರಲ್ಲೂ ನಟಿಸಿದವಳೆಂಬ ಖ್ಯಾತಿ ಬೆನ್ನಿಗಿರುವುದು ಈ ಬಾರಿ ಅಳಿಸಿ ಹೋಗುವ ಸಾಧ್ಯತೆ ನಿಚ್ಛಳವಾಗಿ ಕಾಣುತ್ತಿದೆ. ಕುಛ್ ಕುಛ್ ಹೋತಾ ಹೈ, ಕಭಿ ಖುಷಿ ಕಭಿ ಘಮ್, ಕಭಿ ಆಲ್ವಿದಾ ನಾ ಕೆಹೆನಾಗಳಲ್ಲಿ ನಟಿಸಿರುವ ಕಾಜೋಲ್ಗೆ ಕರಣ್ ಹೊಸ ಚಿತ್ರ ಮಿಸ್ಸಾದಂತೆಯೇ.
ಅದರ ಜತೆಗೆ ಕರಣ್ಗಿರುವ 'ಕ' ಮಮಕಾರವೂ ಈ ಬಾರಿ ದೂರಾದಂತಿದೆ. ಕರಣ್ ಹೊಸ ಚಿತ್ರಕ್ಕೆ "ಮೈ ನೇಮ್ ಈಸ್ ಖಾನ್" ಎಂದು ಹೆಸರಿಡಲಾಗಿದೆ. ಇದರಲ್ಲಿ ಶಾರೂಖ್ ಖಾನ್ ನಾಯಕ ನಟನಾಗಿದ್ದು, ನಾಯಕಿಯಾಗಿ ಕಾಜೋಲ್ ನಟಿಸಬೇಕಿತ್ತು.
ಮತ್ತೊಂದು ಚಿತ್ರ 'ಕೂಚಿ ಕೂಚಿ ಹೋತಾ ಹೈ' (Koochie Koochie Hota Hain) 2009ರಲ್ಲಿ ಸೆಟ್ಟೇರಲಿದ್ದು, ಇದು ಕುಚ್ ಕುಚ್ ಹೋತಾ ಹೈ ಚಿತ್ರದ ಮುಂದುವರಿದ ಭಾಗವೆಂದು ನಿರೀಕ್ಷಿಸಲಾಗಿದೆ. ಇದರಲ್ಲಿ ಶಾರೂಖ್, ಕಾಜೋಲ್, ರಾಣಿ ಮುಖರ್ಜಿ ನಟಿಸಲಿದ್ದು, ಹಿಂದಿ ಮತ್ತು ಇಂಗ್ಲೀಷ್ ಭಾಷೆಗಳಲ್ಲಿ ಚಿತ್ರ ಬಿಡುಗಡೆ ಮಾಡುವ ಉದ್ದೇಶ ಕರಣ್ ಜೋಹರ್ಗಿದೆ.