ಎನ್ಡಿಟಿವಿ ಲೂಮಿ ದೇಶಪ್ರೇಮ ಮತ್ತು ತಾರತಮ್ಯ ನೀತಿಯ ಕರುಣಾಜನಕ ನಿಜಕತೆಯನ್ನು ಚಿತ್ರರೂಪದಲ್ಲಿ ಹೊರತರುತ್ತಿದೆ. ಈ ಚಿತ್ರದ ನಿರ್ದೇಶಕ ರಿಚಿಡ್ ಬೌಚ್‌ರೆಬ್. ಡೇಸ್ ಅಫ್ ಗ್ಲೋರಿ ಎಂಬ ಶಿರ್ಷಿಕೆಯ ಈ ಚಿತ್ರ ಅಕ್ಟೋಬರ್ 24, 2008ರಂದು ಬಿಡುಗಡೆಯಾಗಲಿದೆ. ನೆನಪಿನ ಪುಟಗಳಲ್ಲಿ ಅಳಿಸಿ ಹೋದ ಸ್ವದೇಶಿ ಹೀರೊಗಳು ಮತ್ತು ಅಪ್ರಮಾಣಿಕ ತಾಯ್ನೆಲದ ಬಗ್ಗೆ ಅವರ ಪ್ರಾಮಾಣಿಕತೆಯನ್ನು ಡೆಸ್ ಅಫ್ ಗ್ಲೋರಿ ಪ್ರಸ್ತುತ ಪಡಿಸುತ್ತದೆ. ಇಂಗ್ಲೀಷ್ ಅಡಿ ಬರಹಗಳನ್ನು ಹೊಂದಿರುವ ಡೇಸ್ ಅಫ್ ಗ್ಲೋರಿ ಪ್ರೆಂಚ್ ಚಿತ್ರ. ಇದು ದೆಹಲಿ, ಮುಂಬಯಿ ಮತ್ತು ಬೆಂಗಳೂರುಗಳಲ್ಲಿನ ಪಿವಿಆರ್ ಸಿನಿಮಾ ಮಂದಿರಗಳಲ್ಲಿ ಅಕ್ಟೋಬರ್ 24ರಂದು ಬಿಡುಗಡೆಯಾಗಲಿದೆ.
1943ರ ವೇಳೆ ಫ್ರಾನ್ಸ್ ಯುದ್ಧ ನಿರತವಾಗಿದ್ದ ಕಾಲದ ಪ್ರಭಾವಿ ಯುದ್ಧಕತೆಯನ್ನು ಡೇಸ್ ಅಫ್ ಗ್ಲೋರಿ ಹೊಂದಿದೆ. ಫ್ರಾನ್ಸ್ ಅನ್ನು ನಾಝಿ ಶತ್ರಗಳಿಂದ ಬಿಡುಗಡೆಗೊಳಿಸಲು ಫ್ರೆಂಚ್ ಸೈನ್ಯ ಸೇರುವ ಅಲ್ಗೇರಿಯನ್‌ಗಳಾದ ಅಬ್ದೆಲ್‌ಕಾದರ್, ಮೆಹಸೂದ್ ಮತ್ತು ಯಾಸಿರ್ ಎಂಬವರ ಸುತ್ತ ಈ ಕತೆ ಸುತ್ತುತ್ತದೆ. ಉತ್ತರ ಆಫ್ರಿಕಾದ ಈ ಸೈನಿಕರು 1,30,000 ಇತರ ಸೈನಿಕರಂತೆ ತಾವು ಎಂದೂ ಕಾಲಿಡದ ಅಥವಾ ನೋಡಿರದ ತಮ್ಮ ತಾಯ್ನೆಲಕ್ಕಾಗಿ ಹೋರಾಡುತ್ತಾರೆ ಆದರೆ ಇದರ ಬದಲಿಗೆ ಅವರು ಆಫ್ರಿಕನ್ನರನ್ನು ದ್ವೇಷಿಸುವ ಸೈನಾಧಿಕಾರಿಯ ತಾರತಮ್ಯ ನೀತಿಗೆ ಬಲಿಪಶುಗಳಾಗಬೇಕಾಗುತ್ತದೆ.
ಫ್ರೆಂಚ್ ದಳದೊಂದಿಗೆ ಯುದ್ಧದಲ್ಲಿ ಭಾಗವಹಿಸಿದ ಉತ್ತರ ಆಫ್ರಿಕನ್ನರಿಗೆ ಪಿಂಚಣಿ ನೀಡುವ ವ್ಯವಸ್ಥೆಯನ್ನು ಪುನಾರಾರಂಭಿಸುವಲ್ಲಿ ಫ್ರೆಂಚ್ ಅಧ್ಯಕ್ಷ ಜಾಕೀಸ್ ಚಿರಾಕ್ ಮೇಲೆ ಈ ಚಿತ್ರ ಪ್ರಭಾವ ಬೀರಿದೆ.
2007ರ ಅಕಾಡಮಿ ಪ್ರಶಸ್ತಿಗೆ ಈ ಚಿತ್ರ ವರ್ಷದ ಅತ್ಯುತ್ತಮ ವಿದೇಶಿ ಭಾಷೆಯ ಚಿತ್ರವಾಗಿ ನಾಮಾಂಕಿತವಾಗಿತ್ತು. 2007ರ ಬ್ರಾಡ್‌ಕಾಸ್ಟ್ ಕ್ರಿಟಿಕ್ಸ ಪ್ರಶಸ್ತಿಗೆ ಅತ್ಯುತ್ತಮ ವಿದೇಶಿ ಭಾಷಾ ಚಿತ್ರವಾಗಿ ನಾಮಾಂಕಿಂತವಾಗಿತ್ತು. 2007ರ ಬೆಸ್ಟ್ ರೈಟಿಂಗ್ ಪ್ರಶಸ್ತಿ ಜಯಿಸಿದೆ.
WD
ಈ ಅಕ್ಟೋಬರ್‌ನಲ್ಲಿ ರಿಚಿಡ್ ಬೌಚರೆಬ್‌ರ ಪ್ರೇರಕ ಚಿತ್ರ ಡೇಸ್ ಅಫ್ ಗ್ಲೋರಿ ಚಿತ್ರವನ್ನು ನಿಮಗೆ ಸಮೀಪದ ಪಿವಿಆರ್ ಸಿನಿಮಾ ಮಂದಿರಗಳಲ್ಲಿ ವೀಕ್ಷಿಸಬಹುದು.