ರಿಲಯನ್ಸ್ ಅನಿಲ್ ಅಂಬಾನಿ ಗ್ರುಪ್ ಕಂಪೆನಿಯ ಸಹಯೋಗಿ ಸಂಸ್ಥೆಯಾದ ಆಡಲ್ಯಾಬ್ಸ್ ಫಿಲ್ಮ್ಸ್ ಲಿಮಿಟೆಡ್, ಭಾರತೀಯ ಸಿನಿಮಾ ಚಿತ್ರರಂಗದಲ್ಲಿ ಮುಂಚೂಣಿಯಲ್ಲಿದ್ದು, ಬಿಗ್ ಸಿನಿಮಾಗಳನ್ನು "ಅಬ್ ಬಡಾ ಮಜಾ ಆಯೇಗಾ" ಪಂಚ್‌ಲೈನ್ ಅಡಿಯಲ್ಲಿ ಬಿಡುಗಡೆ ಮಾಡಲಾಗುವುದು ಎಂದು ಕಂಪೆನಿಯ ಮೂಲಗಳು ತಿಳಿಸಿವೆ.
'ಬಿಗ್ ಸಿನಿಮಾ' ಅಕ್ಟೋಬರ್ 28 ರಂದು ಮಂಗಳವಾರ ದೇಶದಾದ್ಯಂತ ಉದ್ಘಾಟಿಸಲಿದ್ದು, 73 ಸಿನಿಮಾ ಮಂದಿರಗಳಲ್ಲಿ 186 ಪರದೆಗಳ ಮೇಲೆ 71ಸಾವಿರ ಪ್ರೇಕ್ಷಕರು ವೀಕ್ಷಿಸಲಿದ್ದಾರೆ. ಬಿಗ್ ಸಿನಿಮಾಗೆ ಆಗಮಿಸುವ ಅತಿಥಿಗಳು ಸಿನಿಮಾ ಮಂದಿರದಲ್ಲಿ ಟಿ.ವಿ, ರೇಡಿಯೋ ಸೇರಿದಂತೆ ಸಂಪೂರ್ಣ ಬದಲಾವಣೆಯನ್ನು ಕಾಣಲಿದ್ದಾರೆ. ಅತಿಥಿಗಳು ಡಬ್ಲೂ.ಡಬ್ಲೂ.ಡಬ್ಲೂ ಬಿಗ್‌ಸಿನಿಮಾ.ಕಾಮ್ ಮೂಲಕ ಬುಕ್ಕಿಂಗ್ ಮಾಡಬಹುದಾಗಿದೆ. ಮುಂದಿನ ವರ್ಷದಲ್ಲಿ ಸುಮಾರು 3 ಮಿಲಿಯನ್ ಪ್ರೇಕ್ಷಕರು ಬಿಗ್‌ಸಿನಿಮಾಗೆ ಭೇಟಿ ನೀಡಲಿದ್ದಾರೆ ಎಂದು ಕಂಪೆನಿಯ ಮೂಲಗಳು ತಿಳಿಸಿವೆ.
ನೂತನ ಬ್ರ್ಯಾಂಡ್‌ನ್ನು ಸಿಂಗಾಪೂರ್ ಮೂಲದ ಅಂತಾರಾಷ್ಟ್ರೀಯ ಏಜೆನ್ಸಿಯಾದ ಬೊನ್ಸೆ ಡಿಜೈನ್ ಅವರು ಸೃಷ್ಟಿಸಿದ್ದಾರೆ. ಬಿಗ್ ಸಂಸ್ಥೆ ಜಾಗತಿಕ ಮಟ್ಟದ ಉತ್ಕ್ರಷ್ಟ ರೀತಿಯ ಸಿನಿಮಾಗಳನ್ನು ನೀಡಲು ಉದ್ದೇಶವನ್ನು ಹೊಂದಿದ್ದು "ಥಿಂಕ್ ಬಿಗ್ಗರ್ ಥಿಂಕ್ ಬೆಟರ್ " ಎನ್ನುವ ತತ್ವಗಳಿಗೆ ಬದ್ದವಾಗಿದೆ ಎಂದು ಹೇಳಿದೆ.
ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ಅನಿಲ್ ಅರ್ಜುನ್ ಮಾತನಾಡಿ ಆಡ್‌ಲ್ಯಾಬ್ಸ್ ಫಿಲ್ಮ್ಸ್‌ಲಿಮಿಟೆಡ್, ಭಾರತೀಯ ಸಿನಿಮಾ ರಂಗದಲ್ಲಿ ತನ್ನದೇ ಆದ ಸ್ಥಾನ ಪಡೆದಿದ್ದು ಬಿಗ್ ಸಿನಿಮಾದ ಭಾಗವಾಗಿ ಕಾರ್ಯನಿರ್ವಹಿಸಲಿದೆ. ರಿಲಯನ್ಸ್ ಆಡ್‌ಲ್ಯಾಬ್ಸ್ ಸಂಸ್ಥೆ ದೇಶದಲ್ಲಿ ಮನೋರಂಜನಾ ಕ್ಷೇತ್ರದಲ್ಲಿ ಮೊದಲ ಸ್ಥಾನದಲ್ಲಿರಬೇಕು ಎನ್ನುವ ಗುರಿಯನ್ನು ಹೊಂದಿದೆ. ಅಂತಾರಾಷ್ಟ್ರೀಯ ಮಟ್ಟದಲ್ಲಿ ಕೂಡಾ ಪಾದಾರ್ಪಣೆ ಮಾಡುತ್ತಿದ್ದು, ಅಮೆರಿಕ ಮತ್ತು ಮಲೇಷಿಯಾದ 200 ಸಿನಿಮಾ ಗೃಹಗಳಲ್ಲಿ ತೆರೆಕಾಣಲಿವೆ ಎಂದು ಕಂಪೆನಿಯ ಸಿಇಒ ಅನಿಲ್ ತಿಳಿಸಿದ್ದಾರೆ.
'ಬಿಗ್ ಸಿನಿಮಾ' ದ ಮುಖ್ಯ ಕಾರ್ಯಕಾರಿ ಅಧಿಕಾರಿ ತುಷಾರ್ ಧಿಂಗ್ರಾ ಹೇಳಿಕೆಯೊಂದನ್ನು ನೀಡಿ ದೇಶದ ಮನೋರಂಜನಾ ಕ್ಷೇತ್ರದಲ್ಲಿ ಬೃಹತ್ ಗ್ರಾಹಕ ಸಂಸ್ಥೆಯಾಗಿದೆ. ಬ್ರ್ಯಾಂಡ್‌ನ ಹೊಸ ಅವತಾರ ಮೆಟ್ರೋ ಮತ್ತು ಸಣ್ಣನಗರಗಳ ಪ್ರೇಕ್ಷಕರ ಮನತಣಿಯುವಂತೆ ರಂಜಿಸುತ್ತದೆ ಎಂದು ಹೇಳಿದ್ದಾರೆ.