ಇದೇನೂ ವೈದ್ಯರು ಕೊಟ್ಟ ಸರ್ಟಿಫಿಕೇಟಲ್ಲ ಅಥವಾ ಸಂಜಯ್-ಮಾನ್ಯತಾ ದಂಪತಿಗಳಿಗೂ ಈ ಬಗ್ಗೆ ಸಂಶಯಗಳಿಲ್ಲ. ಇರುವುದು ಕೆಲವು ಮಾಧ್ಯಮಗಳಿಗೆ. ಅದಕ್ಕೀಗ ಸಂಜಯ್- 'ಮಾನ್ಯತ ಗರ್ಭಿಣಿಯಲ್ಲ' ಎಂಬ ಸ್ಪಷ್ಟನೆ ಕೊಟ್ಟಿದ್ದಾರೆ.
49ರ ಸಂಜಯ್- ಮಾನ್ಯತಾ ಮದುವೆ ಈ ವರ್ಷದಾರಂಭದಲ್ಲಿ ಅದೆಷ್ಟು ವಿವಾದವಾಯಿತೆಂದು ಎಲ್ಲರಿಗೂ ಗೊತ್ತು. ರಿಚಾ ಶರ್ಮಾ, ರಿಯಾ ಪಿಳ್ಳೈ ನಂತರ ಮೂರನೇ ಮದುವೆ ಮಾನ್ಯತಾ ಜತೆಗೆ ನಡೆದಿದ್ದು, ಸಂಜಯ್ಗೆ ಓರ್ವ ವಯಸ್ಕ ಮಗಳೂ ಇದ್ದಾಳೆ. ನ್ಯೂಯಾರ್ಕ್ನಲ್ಲಿರುವ ಮಗಳು ತ್ರಿಶಾಲಾ ದತ್ ಅಧ್ಯಯನ ನಡೆಸುತ್ತಿದ್ದಾಳೆ.
ಇತ್ತೀಚಿನ ದಿನಗಳಲ್ಲಿ ಮಾನ್ಯತಾ ಗರ್ಭಿಣಿ ಅಂತ ಕೆಲವು ಪತ್ರಿಕೆಗಳು ವರದಿ ಮಾಡಿದ್ದವು. ಇದಕ್ಕೆ ಪ್ರತಿಕ್ರಿಯಿಸಿರುವ ಚಿತ್ರನಟ ದತ್, "ನಾನು ಕೂಡ ಹಲವು ಪತ್ರಿಕೆಗಳಲ್ಲಿ ಓದಿ ಈ ವಿಷಯ ತಿಳಿದುಕೊಂಡೆ! ನನ್ನ ಹೆಂಡತಿ ಗರ್ಭಿಣಿ ಎನ್ನುವುದು ನನಗಿಂತ ಹೆಚ್ಚಾಗಿ ಮಾಧ್ಯಮಗಳಿಗೇ ಗೊತ್ತಿರುವ ಹಾಗಿದೆ. ನಂಬಿ- ಇದು ಸತ್ಯವಲ್ಲ. ಕೇವಲ ಗಾಳಿಸುದ್ದಿ ಅಷ್ಟೇ" ಎಂದು ಹೇಳಿದ್ದಾರೆ.
ಮದುವೆಯನ್ನು ಮಾಧ್ಯಮಗಳು ಸಾಕಷ್ಟು ವಿವಾದ ಮಾಡಿದವು ಎಂದು ಮಾತು ಮುಂದುವರಿಸಿದ ದತ್, "ನನ್ನ ಮಗಳು ಈ ಮದುವೆಯ ಬಗ್ಗೆ ಯಾವತ್ತೂ ಆಕ್ಷೇಪ ಎತ್ತಿಲ್ಲ. ಅವಳು ನನ್ನ ಸಂತೋಷವನ್ನು ಬಯಸುತ್ತಿದ್ದಾಳೆ. ಕೆಲವು ಪತ್ರಿಕೆಗಳು ಮಾನ್ಯತಾ ಮಗು ಬಯಸುತ್ತಿದ್ದಾರೆ ಎಂದು ಬರೆದವು. ನಿಜ ಹೇಳಬೇಕೆಂದರೆ ಮದುವೆ ನಂತರ ನಾವು 3-4 ದಿನವಷ್ಟೇ ಜತೆಗಿದ್ದೆವು. ಅಂತಹಾ ಯೋಚನೆ ನಾವು ಮಾಡಿಲ್ಲ. ಎಲ್ಲಾ ದೇವರಿಗೆ ಬಿಟ್ಟದ್ದು. ನಾನು ಮತ್ತು ಆಕೆ ತುಂಬಾ ಸಂತೋಷದಿಂದಿದ್ದೇವೆ. ನನ್ನ ಮೂಡ್ ಮತ್ತು ಮೌನವನ್ನು ನನ್ನವಳು ಚೆನ್ನಾಗಿ ಅರ್ಥ ಮಾಡಿಕೊಂಡಿದ್ದಾಳೆ. ನಾವಿಬ್ಬರೂ ಅನ್ಯೋನ್ಯತೆಯಿಂದ ಖುಷಿಯಿಂದಿದ್ದೇವೆ. ದಯವಿಟ್ಟು ನಮ್ಮನ್ನು ನಮ್ಮಷ್ಟಕ್ಕೇ ಬಿಟ್ಟುಬಿಡಿ" ಎಂದು ವಿನಂತಿಸಿಕೊಂಡಿದ್ದಾರೆ.
ಸಂಜಯ್ ದತ್ ಕುರಿತು ಒಂದಷ್ಟು ಮಾಹಿತಿ: ಹುಟ್ಟಿದ್ದು ಜುಲೈ 29, 1959. ತಂದೆ-ಸುನಿಲ್ ದತ್. ತಾಯಿ- ನರ್ಗೀಸ್. ಹೆಂಡತಿಯರು- ರಿಚಾ ಶರ್ಮಾ(ಮಾಜಿ), ರಿಯಾ ಪಿಳ್ಳೈ(ಮಾಜಿ), ಮಾನ್ಯತಾ. ಮಗಳು- ತ್ರಿಶಾಲಾ ದತ್. ಇಷ್ಟದ ದೇಶ- ಸ್ವಿಟ್ಜರ್ಲ್ಯಾಂಡ್. ಚಾನೆಲ್- ನ್ಯಾಷನಲ್ ಜಿಯೋಗ್ರಫಿಕ್. ಗೆಳೆಯ - ಸಲ್ಮಾನ್. ಅವರ ಎಲ್ಲಾ ಕಾರುಗಳ ನಂಬರ್ 4545.