ಸುದ್ದಿ/ಗಾಸಿಪ್ | ಸಿನಿಮಾ ಮುನ್ನೋಟ | ಸಿನಿಮಾ ವಿಮರ್ಶೆ | ತಾರಾ ಪರಿಚಯ | ಸಂದರ್ಶನ | ಹಾಲಿವುಡ್ | ಕಿರುತೆರೆ
ಮುಖ್ಯ ಪುಟ ಮನರಂಜನೆ » ಬಾಲಿವುಡ್‌ » ಸುದ್ದಿ/ಗಾಸಿಪ್ » ಐಶ್‌ಗೆ ನಟಿಸೋದು ಗೊತ್ತಿಲ್ವಂತೆ!
ಸುದ್ದಿ/ಗಾಸಿಪ್
Feedback Print Bookmark and Share
 
IFM
ಐಶ್ವರ್ಯಾ ರೈಗೆ ನಟನೆ ಬರುವುದಿಲ್ಲ ಎಂಬುದು ಹಳೆ ಕಂಪ್ಲೇಂಟು. ಕರಿಷ್ಮಾ, ರಾಣಿ ಮುಖರ್ಜಿ, ಕಾಜೋಲ್ ಜತೆ ಹೋಲಿಸಿದರೆ ಇವಳದ್ದು ನಟನೆಯೇ ಅಲ್ಲ. ಕಣ್ಣು, ಮುಖ, ಗ್ಲ್ಯಾಮರ್ ಜತೆ ಇದ್ದುದರಲ್ಲರ್ಧ ತೋರಿಸಿದರೂ ನಟಿಸದಿದ್ದರೆ ಅದು ನಟನೆಯೆನಿಸದು ಎಂಬುದು ಕೆಲ ವರ್ಷಗಳ ಹಿಂದೆ ಚಾಲ್ತಿಯಲ್ಲಿದ್ದ ಮಾತು ಮತ್ತು ಆರೋಪಗಳು ಕೂಡ. ಈಗ ಅದಕ್ಕೆ ಜೀವ ಕೊಟ್ಟಿರುವುದು ಕೆನೆಡಿಯನ್ ಹಾಸ್ಯನಟ ರಸ್ಸೆಲ್ ಪೀಟರ್ಸ್.

ಆತನ ತಂದೆ ಮುಂಬಯಿಯವರು. ತಾಯಿ ಕೊಲ್ಕತ್ತಾದಲ್ಲಿದ್ದವರು. ರಸ್ಸೇಲ್ ಡೊಮಿನಿಕ್ ಪೀಟರ್ಸ್ ಹುಟ್ಟಿದ್ದು ಕೆನಡಾದಲ್ಲಿ. ಇದೀಗ ಅಂತರಾಷ್ಟ್ರೀಯ ಮಟ್ಟದಲ್ಲಿ ಖ್ಯಾತಿ ಗಳಿಸಿರುವ 38ರ ರಸ್ಸೆಲ್ ಬಾಲಿವುಡ್ ಚಿತ್ರಗಳ ಬಗ್ಗೆ ಅಗತ್ಯಕ್ಕಿಂತ ಹೆಚ್ಚೇ ಕಿಡಿ ಕಾರಿದ್ದಾನೆ.

ಇತ್ತೀಚಿನ ವರ್ಷಗಳಲ್ಲಿ ಬಾಲಿವುಡ್ ಅಂತರರಾಷ್ಟ್ರೀಯ ಮಟ್ಟದಲ್ಲಿ ಗಮನಾರ್ಹವಾಗಿ ಗುರುತಿಸಿಕೊಳ್ಳುತ್ತಿರುವುದು ಆತನ ಮೇಲೆ ಪ್ರಭಾವ ಬೀರಿದಂತಿಲ್ಲ. "ನಾನು ನನ್ನ ಜೀವನದ ಅತ್ಯಂತ ಕೆಳಮಟ್ಟದಲ್ಲಿದ್ದರೂ ಬಾಲಿವುಡ್ ಸಿನಿಮಾ ನೋಡಲಾರೆ. ಅಲ್ಲಿನ ಚಿತ್ರಗಳಲ್ಲಿ ಅಸಹ್ಯ ಕಥೆ ಮತ್ತು ಕೆಟ್ಟದಾದ ನಟನೆಯಿರುತ್ತದೆ. ಪ್ರತಿ ನಿಮಿಷಕ್ಕೊಂದು ಹಾಡು ಅಥವಾ ನೃತ್ಯ ಚಿತ್ರಗಳಲ್ಲಿ ಯಾಕಿರುತ್ತದೋ ನಾ ಕಾಣೆ. ಒಂದೋ ಕಥೆ ಹೇಳಬೇಕು ಅಥವಾ ಬೇಡ" ಎಂದು ಬಾಲಿವುಡ್ ಬಗ್ಗೆ ಹಾಸ್ಯಾಸ್ಪದ ಕಮೆಂಟ್ ಮಾಡಿದ್ದಾನೆ ಹಾಸ್ಯನಟ ರಸ್ಸೆಲ್.

ಮತ್ತೊಂದು ಶಾಕಿಂಗ್ ಡೈಲಾಗ್ ಹೊಡೆಯುವ ಆತ, "ಕೆಟ್ಟ ನಟನೆಗೆ ಐಶ್ವರ್ಯಾ ರೈ ಉತ್ತಮ ಉದಾಹರಣೆ. ಅವಳೀಗಾಗಲೇ ಅದನ್ನು ಮನಗಾಣಿಸಿದ್ದಾಳೆ. ಆದರೂ ಅದು ಹೇಗೆ ಆಶ್ಚರ್ಯ ಹುಟ್ಟಿಸುತ್ತದೆ ಎಂಬುದು ಗೊತ್ತಿಲ್ಲ. ಕೇವಲ ಮುದ್ದಾದ ಮುಖದಿಂದ ಬಾಲಿವುಡ್‌ ಮಂದಿ ಸೂಪರ್‌ಸ್ಟಾರ್‌ಗಳಾಗಿದ್ದಾರೆ" ಎಂಬುದು ರಸ್ಸೆಲ್ ಆರೋಪ.

ಬಾಲಿವುಡ್‌ನ ಸಾಧನೆ, ದಾಪುಗಾಲಿನ ಬೆಳವಣಿಗೆ ಬಗ್ಗೆ ಇಲ್ಲಿನ ಮಾಧ್ಯಮಗಳು ಅತ್ಯುತ್ಸಾಹಭರಿತವಾಗಿದ್ದು, ಮತ್ತೊಬ್ಬರ ಟೀಕೆಗಳನ್ನು ಸಮರ್ಥವಾಗಿ ಎದುರಿಸಬಲ್ಲ ತಾಕತ್ತು ಅವುಗಳಿಗಿವೆ. ಬಾಲಿವುಡ್‌ನ ಬೆಳವಣಿಗೆ, ಹುಮ್ಮಸ್ಸಿನ ಬಗ್ಗೆ ಯಾರಿಂದಲೂ ಪಾಠ ಕಲಿಯಬೇಕಾಗಿಲ್ಲ. ಜಗತ್ತೇ ಹಿಂತಿರುಗಿ ನೋಡುವಂತಹ ಅತಿ ದೊಡ್ಡ ಮಾರುಕಟ್ಟೆ ಸೃಷ್ಟಿಸುವ ತಾಕತ್ತು ಇಲ್ಲಿಗಿದೆ. ಭಾರತೀಯ ಚಿತ್ರರಂಗದ ಬಗ್ಗೆ ತೆಗಳಿಕೆಯ ಮಾತುಗಳನ್ನಾಡುವ ಮೂಲತಃ ಭಾರತೀಯನೇ ಆದ ರಸ್ಸೆಲ್ ಕೇವಲ ಹಾಸ್ಯ ನಟನಾಗಿರುವುದರಿಂದ ಹೆಚ್ಚಿನ ಮಹತ್ವ ಕೊಡಬೇಕಾಗಿಲ್ಲವೆನ್ನುವುದೇ ಹಲವರ ಅಂಬೋಣ.

ರಸ್ಸೆಲ್ ಆರೋಪ-ಟೀಕೆಗಳ ಬಗ್ಗೆ ಐಶ್ವರ್ಯಾ ರೈ ಮತ್ತು ಬಾಲಿವುಡ್‌ನ ಇತರೆ ಪಂಡಿತ-ಪಾಮರರು ಹೇಗೆ ಪ್ರತಿಕ್ರಿಯಿಸುತ್ತಾರೆಂದು ಕಾದು ನೋಡಬೇಕಿದೆ. ಅಹಂಕಾರಕ್ಕೆ ನಿರ್ಲಕ್ಷ್ಯವೇ ಮದ್ದು ಎಂಬಂತೆ ಸುಮ್ಮನಿದ್ದು ಬಿಡುವ ಸಾಧ್ಯತೆಯನ್ನೂ ಅಲ್ಲಗಳೆಯುವಂತಿಲ್ಲ.
ಸಂಬಂಧಿತ ಮಾಹಿತಿ ಹುಡುಕಿ
ಇದನ್ನು ಸಹ ಶೋಧಿಸು: ಐಶ್ವರ್ಯಾ ರೈ, ರಸ್ಸೆಲ್, ಬಾಲಿವುಡ್