ರಾಜೇಶ್ 'ಖನ್ನಾ ಮುಚ್ಚಾಲೆ'
ಪ್ರೀತಿ ಮತ್ತು ಕಾಮಕ್ಕೆ ವಯಸ್ಸಿಲ್ಲ ಅಂತಾರೆ ನಿಜಾನಾ? ಇರಬಹುದು, ಅಲ್ಲವೇ? ಆದರೂ ಇಂತಹ ಸಿನಿಮಾ ನೀವು ನೋಡಿರಲಿಕ್ಕಿಲ್ಲ. ನಮ್ಮ ಬಾಲಿವುಡ್‌ನ 'ಮುತ್ತಪ್ಪ' ಇಮ್ರಾನ್ ಹಷ್ಮಿ ಅದೆಷ್ಟು ತುಟಿಗಳ ಜತೆ ರಸದಾಟವಾಡಿದ್ದಾನೆಂದು ಯಾರಾದರೂ ಲೆಕ್ಕ ಹಾಕಿದ್ದಾರೆಯೇ? ಅಂತಹ ಲಟಲಟ ಯುವಕನೇ "ನನಗೆ ಕಿಸ್ ಕೊಡುವುದು ಇಷ್ಟವಿಲ್ಲ. ನಿರ್ದೇಶಕರ ಒತ್ತಾಯಕ್ಕಾಗಿ ಹಾಗೆ ಮಾಡುತ್ತಿದ್ದೇನೆ" ಎನ್ನುತ್ತಿರಬೇಕಾದರೆ ನಮ್ಮ ಹಿರಿಯ ನಟ ರಾಜೇಶ್ ಖನ್ನಾ ಕಥೆ ಏನು? ಮುಂದೈತೆ ಓದಿ...ಬಾಲಿವುಡ್ ಬಿಚ್ಚಮ್ಮ ರಾಖಿ ಸಾವಂತ್‌ಳ ಸಹೋದರ 'ವಫಾ' ಎಂಬ 'ಎ' ಗ್ರೇಡ್ ಚಿತ್ರ ನಿರ್ದೇಶಿಸುತ್ತಿದ್ದಾನೆ. ಅದರಲ್ಲಿ ನಮ್ಮ ರಾಜೇಶ್ ಖನ್ನಾರೇ ನಾಯಕ. ನಾಯಕಿಯಾಗಿ ಪಾಕಿಸ್ತಾನದ ಸಾನಾ ಖಾನ್ ನಟಿಸುತ್ತಿದ್ದಾರೆ. ಸಿನಿಮಾದಲ್ಲಿ 65ರ ಹರೆಯದ ರಾಜೇಶ್ ಖನ್ನಾ ಮತ್ತು ಸಾಧಾರಣ ಯುವತಿ ಸಾನಾ ಖಾನ್ ನಡುವೆ ತುಟಿಗೆ ತುಟಿ ಬೆರೆಸಿ ಕಿಸ್ ಕೊಡುವ ದೃಶ್ಯಗಳಿವೆಯಂತೆ. ಹಾಗಾಗಿ ಇದೊಂದು ಅಬ್‌ನಾರ್ಮಲ್ ಸಿನಿಮಾವೆಂದು ಒಪ್ಪಿಕೊಳ್ಳಬಹುದಲ್ಲವೇ?ಅದು ಬಿಡಿ, ನೀವಿಂಥಾ ಚಿತ್ರದಲ್ಲಿ ಯಾಕೆ ನಟಿಸುತ್ತಿದ್ದೀರಿ ಎಂದು ಖನ್ನಾ ಅವರನ್ನು ಕೇಳಿದಾಗ, "ಗಂಡ ಹೆಂಡತಿಯ ಚಿತ್ರವೆಂದ ಮೇಲೆ ಇದೆಲ್ಲ ಮಾಮೂಲು. ಇದೊಂದು ಪರಿಪೂರ್ಣ ಲವ್ ಸ್ಟೋರಿ. ಸಾಕಷ್ಟು ತಿರುವುಗಳಿವೆ. 170ಕ್ಕೂ ಹೆಚ್ಚು ಚಿತ್ರಗಳಲ್ಲಿ ನಟಿಸಿದ ಮೇಲೆ ನನಗೆ ಕೆಟ್ಟ ಚಿತ್ರಗಳಲ್ಲಿ ನಟಿಸುವ ಅಗತ್ಯವಿಲ್ಲ" ಎಂದುತ್ತರಿಸಿದ್ದಾರೆ.ಬಹುಶಃ ನಮ್ಮ 'ಕಾಕಾ' ಹಷ್ಮಿ ಚಿತ್ರಗಳ ನಿರ್ದೇಶಕರನ್ನು ಕೇಳಿಕೇಳಿ ಸುಸ್ತಾದ ನಂತರ ರಾಕೇಶ್ ಸಾವಂತ್ ಬಳಿ ಬಂದಿರಬಹುಹು ಎಂಬುದು ಕೆಲ ಬಾಲಿವುಡ್ ಹಿರಿತಲೆಗಳ ಕಿರಿಕಿರಿ. ಇತ್ತೀಚೆಗೆ ಮುಂಬೈನ ಹಾಟ್ ಏರಿಯಾವೊಂದರಲ್ಲಿ ಇದೇ ಖನ್ನಾ ಹುಡುಗಿಯರನ್ನು ಚುಡಾಯಿಸುತ್ತಿದ್ದರು ಎಂಬ ದೂರು ಕೇಳಿ ಬಂದಿತ್ತು. ಯೌವನದ ಕಾಲದಲ್ಲಿ 3-4 ಸಂಬಂಧಗಳನ್ನಿಟ್ಟಕೊಂಡಿದ್ದರೂ ಇನ್ನೂ ತಣಿಯದ ಈ ಮನುಷ್ಯ ಅಜ್ಜ ಆಗಿದ್ದಾರೆ ಎನ್ನುವುದೂ ಮರೆತು ಹೋದಂತಿದೆ ಎಂದು ಕೆಲವರು ಮೂಗು ಮುರಿಯುತ್ತಿದ್ದರೂ ಅವರಿಗೆ ಲೆಕ್ಕಕ್ಕೇ ಇಲ್ಲ.'
ರಘುಲಾಲ್ ರೀತ್ ಸದಾ ಚಲೀ ಆಯೀ' ಎಂಬ ಟೀವಿ ಕಾರ್ಯಕ್ರಮದಲ್ಲಿ ನಟಿಸುತ್ತಿರುವ ರಾಜೇಶ್ ಖನ್ನಾ ತನ್ನ ಪತ್ನಿ ಪಾತ್ರಕ್ಕೆ ಯುವತಿ ಮೋನಾ ಅಂಬೆಗಾವಂಕರ್‌ಳನ್ನು ಹಾಕಲು ಕಾರಣವೇನೆಂದು ಕೇಳಿದರೆ, ಅದರ ನಿರ್ದೇಶಕ "ಅದರ ಕಥೆ ಹಾಗಿದೆ. ಅದಕ್ಕಾಗಿ ಖನ್ನಾರಿಗಿಂತ ತುಂಬಾ ಕಡಿಮೆ ಪ್ರಾಯದ ಯುವತಿಯನ್ನು ಬಳಸಿಕೊಳ್ಳಲಾಗಿದೆ" ಎನ್ನುತ್ತಾರೆ.65
ರ ಇಳಿವಯಸ್ಸಿನಲ್ಲಿ ಇಂತಹ 'ಸಾಧನೆ' ಮಾಡಿರುವ ರಾಜೇಶ್ ಖನ್ನಾ ಬಗ್ಗೆ ನಿಮಗೆಲ್ಲ ಗೊತ್ತು. ಆದರೂ ಅಲ್ಪ ಮಾಹಿತಿಗಳನ್ನಿಲ್ಲಿ ತುರುಕಲಾಗಿದೆ- ನೋಡಿಕೊಳ್ಳಿ.ರಾಜೇಶ್ ಖನ್ನಾ ಹುಟ್ಟಿದ್ದು ಪಂಜಾಬ್‌ನಲ್ಲಿ. 1942
ರ ಡಿಸೆಂಬರ್ 29ರಂದು ಜನಿಸಿದ ಇವರ ಮೂಲ ಹೆಸರು ಜತಿನ್ ಖನ್ನಾ. ಬಾಲಿವುಡ್‌ನಲ್ಲಿ ಒಂದು ಕಾಲದ ಸೂಪರ್‌ಸ್ಟಾರ್ ಪಟ್ಟವನ್ನಲಂಕರಿಸಿದ್ದ ಇವರನ್ನು ಎಲ್ಲರೂ 'ಕಾಕಾ' ಎಂದೇ ಕರೆಯುತ್ತಿದ್ದುದು. ದಾದಾ ಸಾಹೇಬ್ ಫಾಲ್ಕೆ ಪ್ರಶಸ್ತಿ ಪಡೆದ ಗರಿಮೆಯೂ ಇವರಿಗಿದೆ. 1991ರಿಂದ 1996ರವರೆಗೆ ಸಂಸದರಾಗಿದ್ದು, ರಾಜಕೀಯದ ರುಚಿಯನ್ನೂ ಕಂಡಿದ್ದಾರೆ. ಇನ್ನು ಇವರ ಖಾಸಗಿ ಜೀವನ ಸಾಧಾರಣ ಎಲ್ಲ ಚಿತ್ರನಟರಂತೆ ರಂಗುರಂಗಾಗಿತ್ತು ಎನ್ನಬಹುದು. 1960ರ ಅವಧಿಯಲ್ಲಿ ಅಂಜು ಮಹೆಂದ್ರೊ ಜತೆ ರೊಮ್ಯಾನ್ಸ್ ಮಾಡುತ್ತಾ ಕಾಲ ಕಳೆದರು. 1970ರಲ್ಲಿ ನಟಿ ಡಿಂಪಲ್ ಕಪಾಡಿಯಾರವರನ್ನು ಮದುವೆಯಾಗಿ ಎರಡು ಮಕ್ಕಳನ್ನೂ ಪಡೆದರು. ನಂತರ ಸಂಸಾರ ಸರಿಬರದೆ 1984ರಲ್ಲಿ ಬೇರೆಯಾದರು. ಇವರ ಮಕ್ಕಳೇ ಟ್ವಿಂಕಲ್ ಖನ್ನಾ ಮತ್ತು ರಿಂಕಿ. ಟ್ವಿಂಕಲ್ ಖನ್ನಾ ನಟ ಅಕ್ಷಯ್ ಕುಮಾರ್‌ನನ್ನು ವಿವಾಹವಾದಳು. ಡಿಂಪಲ್ ಸಂಬಂಧ ಕಡಿದು ಹೋದ ನಂತರ ರಾಜೇಶ್ ಖನ್ನಾ ಟೀನಾ ಮುನಿಮ್ ಜತೆ ರೊಮ್ಯಾನ್ಸ್ ಇಟ್ಟುಕೊಂಡಿದ್ದರು. ಈ ಸರಸ-ಸಲ್ಲಾಪಗಳು ಕೂಡ ಬಹಳ ದಿನ ಮುಂದುವರಿಯಲಿಲ್ಲ. ಮತ್ತೆ ಖನ್ನಾ-ಡಿಂಪಲ್ ಹತ್ತಿರವಾದರು.