ಸುದ್ದಿ/ಗಾಸಿಪ್ | ಸಿನಿಮಾ ಮುನ್ನೋಟ | ಸಿನಿಮಾ ವಿಮರ್ಶೆ | ತಾರಾ ಪರಿಚಯ | ಸಂದರ್ಶನ | ಹಾಲಿವುಡ್ | ಕಿರುತೆರೆ
ಮುಖ್ಯ ಪುಟ ಮನರಂಜನೆ » ಬಾಲಿವುಡ್‌ » ಸುದ್ದಿ/ಗಾಸಿಪ್ » ಸೆಕ್ಸಿಯೆಸ್ಟ್ ಪುರುಷರ ಪಟ್ಟಿಯಲ್ಲಿ ಜಾನ್
ಸುದ್ದಿ/ಗಾಸಿಪ್
Feedback Print Bookmark and Share
 
IFM
ಅವನ ಲುಕ್ಕೇ ಬೇರೆ. ಎದೆ, ಕೈಗಳು, ನೀಳವಾದ ಹೊಟ್ಟೆ-ರಟ್ಟೆ, ಚೂಪು ನೋಟ, ಸೆಕ್ಸೀ ತುಟಿಗಳು, ನಳನಲಿಸುವ ಸ್ಟೈಲಿಶ್ ಕೂದಲು ಹೀಗೆ ಅವನ ದೇಹ ಸೌಂದರ್ಯಕ್ಕೆ ಮಾರು ಹೋಗದ ಹುಡುಗಿಯರೇ ಇಲ್ಲ. ಆತ ಹುಡುಗಿಯರ ಪಾಲಿಗೆ ಮನ್ಮಥ. ಕೊನೆಯ ಬೆಂಚಿನ ಹುಡುಗಿಯರ ಕೈಗೆ ಒಬ್ಬಂಟಿಯಾಗಿ ಸಿಕ್ಕಿದರೆ ಹರಿದು ಮುಕ್ಕುವ ಬೆದರಿಕೆ ಬೇರೆ. ಅಂಥವನನ್ನು ಬುಟ್ಟಿಗೆ ಹಾಕಿಕೊಂಡ ಕೃಷ್ಣಸುಂದರಿ ಬಿಪಾಶಾ ಮೇಲೆ ಮುಖ ಸಿಂಡರಿಸುವಷ್ಟು ಕೋಪ ಲಲನೆಯರಿಗೆ...

ಅವನ ಲುಕ್ಕಿನಲ್ಲೇನೋ ಇದೆ ಎಂದು ಆವತ್ತಿನ 'ಜಿಸ್ಮ್'ನಲ್ಲೇ ತಿಳಿದುಹೋಗಿತ್ತು. ಬಿಪಾಶಾ ಜತೆ ತುಟಿಗೆ ತುಟಿ ಬೆಸೆದು ಚೆಲ್ಲಾಟವಾಡಿದಾಗಲೇ ಹಲವರು ಮೈ ಉರಿದುಕೊಂಡಿದ್ದರು. ತನ್ನ ಭಾರ ಕಣ್ರೆಪ್ಪೆಗಳಿಂದ ನೀರಸ ದೃಷ್ಟಿ ಬೀರಿ ಏನೇನೋ ಹೇಳುವ ಅವನ ಕಣ್ಣುಗಳು, ಆತನ ಹಾಟ್ ಬಾಡಿ ಅಂದಿನ ದಿನಗಳಲ್ಲೇ ಮಾಡ್ ಹುಡುಗಿಯರ ಬೆನ್ನ ಹುರಿಯಲ್ಲಿ ಝಲಕ್ ಹುಟ್ಟಿಸಿತ್ತು.

ಅಂಥ ಸರ್ವಾಂಗ ಸುಂದರನಿಗೀಗ ಜಗದ್ವಿಖ್ಯಾತಿಯಾಗುತ್ತಿದ್ದಾನೆ. ಅಮೆರಿಕಾದ 'E!' ಚಾನೆಲ್ ಜಗತ್ತಿನಾದ್ಯಂತ ನಡೆಸಿದ ಸಮೀಕ್ಷೆಯಲ್ಲಿ ಜಾನ್ ಅಬ್ರಹಾಂ ಟಾಪ್ 25 ಸೆಕ್ಸಿಯೆಸ್ಟ್ ಪುರುಷರ ಸಾಲಿನಲ್ಲಿ ಸ್ಥಾನ ಪಡೆದಿದ್ದಾನೆ.

ಅಮೆರಿಕಾದ ಖ್ಯಾತ ಫಿಟ್ನೆಸ್ ತರಬೇತುದಾರ ಮೈಕ್ ರಿಯಾನ್‌ರವರು ಜಾನ್ ಈ ಪರಿಯ ಬಾಡಿ ಪಡೆದುಕೊಳ್ಳಲು ಸಹಾಯ ಮಾಡಿದ್ದಾರಂತೆ. ಹಾಲಿವುಡ್ ಸ್ಟಾರ್‌ಗಳಾದ ಜಾನ್ನಿ ಡೆಪ್, ಜೊನಾಥನ್ ರೀಸ್ ಮೇಯರ್ಸ್, ಫುಟ್ಬಾಲ್ ಆಟಗಾರ ಡೇವಿಡ್ ಬೇಕಮ್ ಜತೆ ಜಾನ್ ಅಬ್ರಹಾಂ ಹೆಸರು ಕೂಡ ಕಾಣಿಸಿಕೊಂಡಿರುವುದು ಸ್ವತಃ ಆತನಿಗೇ ಗ್ರೇಟ್ ಅನ್ನಿಸಿದೆ.

ಇದೀಗ ಅಮೆರಿಕಾದಲ್ಲಿ 'ನ್ಯೂಯಾರ್ಕ್' ಚಿತ್ರದ ಚಿತ್ರೀಕರಣದಲ್ಲಿರುವ ಜಾನ್, "ಜನ ನಾನು ಚೆಂದ ಕಾಣುತ್ತಿದ್ದೇನೆ ಎಂದು ಹೇಳಿದಾಗ, ನನ್ನ ತಕ್ಷಣದ ಪ್ರತಿಕ್ರಿಯೆಯೇ ಆಶ್ಚರ್ಯ, ನಂತರ ಮುಗುಳ್ನಗುತ್ತೇನೆ. ಆ ಸಮಯದಲ್ಲಿ ನಾನು ಸುರಕ್ಷಿತನೆಂದೆನ್ನಿಸುವುದಿಲ್ಲ- ಮುಜುಗರವುಂಟಾಗುತ್ತದೆ. ಆದರೆ ಅವರ ಮೆಚ್ಚುಗೆಯನ್ನು ಪ್ರೀತಿಯಿಂದ ಸ್ವೀಕರಿಸುತ್ತೇನೆ" ಎಂದು ಪ್ರತಿಕ್ರಿಯಿಸಿದ್ದಾರೆ.

ದೇಹ ಸೌಂದರ್ಯದ ಖನಿಯೆಂದು ಹೇಳಲಾಗುತ್ತಿದ್ದ ಹೃತಿಕ್ ರೋಶನ್ ಕೂಡ ಜಾನ್ ಎದುರು ಬಿದ್ದು ಹೋಗಿದ್ದಾನೆ. ಸಿಕ್ಸ್ ಪ್ಯಾಕ್ ಮಾಡಿಸಿಕೊಂಡ ಶಾರೂಕ್, ಆಮೀರ್‌ಗಳು ಲೆಕ್ಕಕ್ಕೇ ಇಲ್ಲ. ಅಷ್ಟೆಲ್ಲ ಯಾಕೆ... ತನ್ನ ಸಾಲಿಡ್ ಅರೆಬೆತ್ತಲೆ ದೇಹದಿಂದಲೇ ಹುಡುಗಿಯರ ಹೃದಯದಲ್ಲಿ ಟೆಂಟ್ ಹಾಕಿಕೊಂಡಿದ್ದ ಬ್ಯಾಡ್ ಬಾಯ್, ಸ್ಟಿಲ್ ಬ್ಯಾಚುಲರ್ ಸಲ್ಮಾನ್ ಕೂಡ ಜಾನ್ ಬಾಡಿ ಎದುರು ತೃಣ ಸಮಾನನಾಗಿದ್ದಾರೆ. ಇವರೆಲ್ಲರನ್ನೂ ಮೀರಿಸಿರುವ ಜಾನ್ ಅಬ್ರಹಾಂ ದೇಶದಲ್ಲಿನ ಎಲ್ಲರನ್ನೂ ಮೀರಿಸಿ ವಿಶ್ವಮಟ್ಟದಲ್ಲಿ ಗುರುತಿಸಿಕೊಂಡಿದ್ದಾರೆ.

ಇದೀಗ ಅಭಿಷೇಕ್ ಬಚ್ಚನ್ ಮತ್ತು ಜಾನ್ ಅಬ್ರಹಾಂ ಜತೆಯಾಗಿ ನಟಿಸುತ್ತಿರುವ 'ದೋಸ್ತಾನಾ' ಚಿತ್ರದಲ್ಲಿ ಜಾನ್ ಹೊಸ ಲುಕ್ ನೋಡಬಹುದು. ನವೆಂಬರ್ 14ರಂದು ಬಿಡುಗಡೆಯಾಗಲಿರುವ ಚಿತ್ರದ ಪ್ರೊಮೊಗಳು ಹುಚ್ಚು ಹಿಡಿಸುವಂತಿವೆಯಂತೆ.

ಜಾನ್ ಬಗೆಗಿನ ವಿವರ:
ಹೆಸರು ಜಾನ್ ಅಬ್ರಹಾಂ. ವಯಸ್ಸು 35. ಹುಟ್ಟಿದ್ದು 1972 ಡಿಸೆಂಬರ್ 17ರಂದು ಮುಂಬಯಿಯಲ್ಲಿ. ತಂದೆ ಕೇರಳದ ಮಲಯಾಳಿ ಕ್ರಿಶ್ಚಿಯನ್. ತಾಯಿ ಮುಂಬಯಿಯ ಪಾರ್ಸಿ ಜನಾಂಗದವರು. ಜಾನ್‌ನ ಪಾರ್ಸಿ ಹೆಸರು ಫರ್ಹಾನ್ ಎಂದು. ಮೊದಲು ಮಾಡೆಲ್ ಆಗಿದ್ದು ನಂತರ ನಟನಾಗಿ ಭಡ್ತಿ. ಮೊದಲ ಚಿತ್ರ 'ಜಿಸ್ಮ್'. ನಂತರ ಈತನ ಲೆಕ್ಕವಿಲ್ಲದಷ್ಟು ಚಿತ್ರಗಳು ಬಂದು ಹೋಗಿವೆ. ಎಲ್ಲವೂ ಹಿಟ್ ಆಗದಿದ್ದರೂ ಗಮನ ಸೆಳೆದಿವೆ. ಧೂಮ್, ಗರಂ ಮಸಾಲ ಮುಂತಾದುವು ಸೂಪರ್‌ಹಿಟ್ ಎನಿಸಿದ್ದರೆ, ದೀಪಾ ಮೆಹ್ತಾರ 'ವಾಟರ್' ಗಮನ ಸೆಳೆದಿತ್ತು. ಕೈಯಲ್ಲಿ ಸಾಕಷ್ಟು ಚಿತ್ರಗಳಿವೆ.

2002ರಿಂದ ನಟಿ ಬಿಪಾಶಾ ಬಸು ಜತೆ ಸಂಬಂಧ ಬೆಳೆಸಿಕೊಂಡಿದ್ದಾನೆ. ಈ ಜೋಡಿಯು ಸಂಬಂಧವನ್ನು ಬಹಿರಂಗವಾಗಿಯೇ ಗುರುತಿಸಿಕೊಂಡಿವೆ. ಮದುವೆ ಸದ್ಯಕ್ಕಿಲ್ಲ ಎಂಬುದು ಇಬ್ಬರ ಮಾತು ಕೂಡಾ.
ಸಂಬಂಧಿತ ಮಾಹಿತಿ ಹುಡುಕಿ
ಇದನ್ನು ಸಹ ಶೋಧಿಸು: ಜಾನ್ ಅಬ್ರಹಾಂ, ಸೆಕ್ಸಿಯೆಷ್ಟ್, ಬಿಪಾಶಾ ಬಸು