ಸುದ್ದಿ/ಗಾಸಿಪ್ | ಸಿನಿಮಾ ಮುನ್ನೋಟ | ಸಿನಿಮಾ ವಿಮರ್ಶೆ | ತಾರಾ ಪರಿಚಯ | ಸಂದರ್ಶನ | ಹಾಲಿವುಡ್ | ಕಿರುತೆರೆ
ಮುಖ್ಯ ಪುಟ ಮನರಂಜನೆ » ಬಾಲಿವುಡ್‌ » ಸುದ್ದಿ/ಗಾಸಿಪ್ » ಗೋಲ್‌ಮಾಲ್ ಕೇಸಿನಲ್ಲಿ 'ಗೋಲ್‌ಮಾಲ್ ರಿಟರ್ನ್ಸ್'
ಸುದ್ದಿ/ಗಾಸಿಪ್
Feedback Print Bookmark and Share
 
ಹಾಸ್ಯಚಿತ್ರ 'ಗೋಲ್‌ಮಾಲ್ ರಿಟರ್ನ್ಸ್', 1973ರ 'ಅಜ್ ಕಿ ತಾಜ್ ಖಬರ್' ಚಿತ್ರದ ಪ್ರತಿ ಎಂದು ದೂರು ದಾಖಲಾಗಿದೆ.

ಅಕ್ಟೋಬರ್ 29ರಂದು ಬಿಡುಗಡೆಯಾದ 'ಗೋಲ್‌ಮಾಲ್ ರಿಟರ್ನ್ಸ್', ತಮ್ಮ ಪತಿ ಮತ್ತು ನಿರ್ಮಾಪಕ ರಾಜೇಂದ್ರ ಭಾಟಿಯಾ ಅವರ 'ಅಜ್ ಕಿ ತಾಜಾ ಖಬರ್'(ತಾರಾಗಣ: ಕಿರಣ್ ಕುಮಾರ್, ರಾಧ ಶೌಲಜಾ ಮತ್ತು ಅಶ್ರಾನಿ) ಚಿತ್ರದ ನೇರ ಪ್ರತಿ ಎಂದು ಶಕುಂತಳಾ ಭಾಟಿಯಾ ಅವರು ಇಂಡಿಯನ್ ಮೋಶನ್ ಪಿಕ್ಚರ್ಸ್ ನಿರ್ಮಾಪಕರ ಸಂಘಟನೆಗೆ ದೂರು ನೀಡಿದ್ದಾರೆ.

ಸೋಮವಾರದಂದು ಬಾಲಿವುಡ್‌ನ ಟ್ರೇಡ್ ಮ್ಯಾಗಜಿನ್‌ನಲ್ಲಿ 'ಗೋಲ್‌ಮಾಲ್ ರಿಟರ್ನ್ಸ್‌'ನ ಚಿತ್ರ ವಿಮರ್ಶೆ ಓದಿದ ಮೇಲಷ್ಟೇ ಎರಡೂ ಚಿತ್ರಗಳ ನಡುವಿನ ಸಾಮ್ಯತೆ ತಮ್ಮ ಅರಿವಿಗೆ ಬಂತು ಮತ್ತು ವಿಮರ್ಶಕರೂ ಸಹ ಈ ಅಂಶವನ್ನು ದಾಖಲಿಸಿದ್ದಾರೆ ಎಂದು ಅವರು ತಮ್ಮ ವಾದಕ್ಕೆ ಸಮರ್ಥನೆ ನೀಡಿದರು.
IFM

ತಮ್ಮದೇ ನಿರ್ಮಾಣ ಸಂಸ್ಥೆ ಕಿರಣ್ ಪ್ರೊಡಕ್ಷನ್ಸ್‌ನ ಮೂಲಕ 'ಅಜ್ ಕಿ ತಾಜ್ ಖಬರ್‌'ನ ಮರು ಅವತರಣಿಕೆಯನ್ನು ಹೊರತರುವ ಸಿದ್ಧತೆಯಲ್ಲಿ ತಾವಿದ್ದುದರಿಂದ ಭಾಟಿಯಾ, 'ಗೋಲ್‌ಮಾಲ್ ರಿಟರ್ನ್ಸ್‌''ನ ನಿರ್ಮಾಪಕರಾದ ಅಷ್ಟವಿನಾಯಕ ನಿರ್ಮಾಣ ಸಂಸ್ಥೆಯಿಂದ 50 ಲಕ್ಷ ರೂಪಾಯಿ ಪರಿಹಾರವನ್ನು ಕೋರಿದ್ದಾರೆ.

'ಗೋಲ್‌ಮಾಲ್ ರಿಟರ್ನ್ಸ್' ಚಿತ್ರದಲ್ಲಿ ಅಜಯ್ ದೇವಗನ್, ಕರೀನಾ ಕಪೂರ್, ಶ್ರೇಯಸ್ ತಲಪಾಡೆ, ಅರ್ಶದ್ ವರ್ಸಿ, ಸೆಲಿನಾ ಜೇಟ್ಲಿ ಮತ್ತು ಅಮೃತಾ ಅರೋರಾ ನಟಿಸಿದ್ದಾರೆ. ರೋಹಿತ್ ಶೆಟ್ಟಿ ಅವರು ನಿರ್ದೇಶಿಸಿದ್ದಾರೆ. ಚಿತ್ರವನ್ನು 'ಗೋಲ್‌ಮಾಲ್' ಚಿತ್ರದ ಎರಡನೇ ಭಾಗವೆಂಬುದಾಗಿ ಪ್ರಚಾರ ಮಾಡಲಾಗಿದೆ.
ಸಂಬಂಧಿತ ಮಾಹಿತಿ ಹುಡುಕಿ
ಇದನ್ನು ಸಹ ಶೋಧಿಸು: ಗೋಲ್ಮಾಲ್ ರಿಟರ್ನ್ಸ್, ಅಜ್ ಕಿ ತಾಜ್ ಖಬರ್, ಶಕುಂತಳಾ ಭಾಟಿಯಾ, ರೋಹಿತ್ ಶೆಟ್ಟಿ