ಸುದ್ದಿ/ಗಾಸಿಪ್ | ಸಿನಿಮಾ ಮುನ್ನೋಟ | ಸಿನಿಮಾ ವಿಮರ್ಶೆ | ತಾರಾ ಪರಿಚಯ | ಸಂದರ್ಶನ | ಹಾಲಿವುಡ್ | ಕಿರುತೆರೆ
ಮುಖ್ಯ ಪುಟ ಮನರಂಜನೆ » ಬಾಲಿವುಡ್‌ » ಸುದ್ದಿ/ಗಾಸಿಪ್ » ಪ್ರಖ್ಯಾತ ಚಿತ್ರ ನಿರ್ಮಾಪಕ ಬಿ.ಆರ್.ಚೋಪ್ರಾ ನಿಧನ
ಸುದ್ದಿ/ಗಾಸಿಪ್
Feedback Print Bookmark and Share
 
ಪ್ರಖ್ಯಾತ ಚಿತ್ರ ನಿರ್ಮಾಪಕ, ಬಿ.ಆರ್.ಚೋಪ್ರಾ ಎಂದೇ ಖ್ಯಾತರಾದ ಬಲದೇವ್ ರಾಜ್ ಚೋಪ್ರಾ ಅವರು ದೀರ್ಘಕಾಲದ ಅನಾರೋಗ್ಯದಿಂದ ಬುಧವಾರ ತಮ್ಮ ನಿವಾಸದಲ್ಲಿ ನಿಧನರಾದರು. ಅವರಿಗೆ 94 ವರ್ಷ ವಯಸ್ಸಾಗಿತ್ತು.

ಮುಂಬಯಿಯ ಜುಹು ಉಪನಗರದಲ್ಲಿನ ಅವರ ನಿವಾಸದಲ್ಲಿ ಬೆಳಗ್ಗೆ 8.30ಕ್ಕೆ ಚೋಪ್ರಾ ಕೊನೆಯುಸಿರೆಳೆದರು ಎಂದು ಮೂಲಗಳು ತಿಳಿಸಿವೆ.

ದೇಶದ ಅತ್ಯಂತ ಗೌರವಾನ್ವಿತ ಚಲನಚಿತ್ರರಂಗದ ಗಣ್ಯರಲ್ಲೊಬ್ಬರಾದ ಚೋಪ್ರಾ ಅವರಿಗೆ, ಕಿರಿಯ ಸಹೋದರ, ಚಿತ್ರನಿರ್ಮಾಪಕ ಯಶ್ ಚೋಪ್ರಾ, ಪುತ್ರ ರವಿ ಚೋಪ್ರಾ ಮತ್ತು ಇಬ್ಬರು ಪುತ್ರಿಯರಿದ್ದಾರೆ.

ಚರ್ವಿತ ಚರ್ವಣ ಕಥೆಗಳಿಗಿಂತ ವಿಭಿನ್ನ ಚಿತ್ರಗಳನ್ನು ನಿರ್ಮಿಸುತ್ತಿದ್ದ ಅವರು, ಸಾಮಾಜಿಕವಾಗಿ ಪ್ರಸ್ತುತವೆನಿಸುವ ಕಥಾನಕಗಳನ್ನು ತಮ್ಮ ಚಿತ್ರಗಳ ಮೂಲಕ ಬಿಂಬಿಸುತ್ತಿದ್ದರು. 1959ರ ಧೂಲ್ ಕಾ ಫೂಲ್, 1965ರ ವಕ್ತ್, 1957ರ ನಯಾ ದೌರ್, 1958ರ ಕಾನೂನ್, 1967ರ ಹಮ್‌ರಾಝ್, 1980ರ ಇನ್ಸಾಫ್ ಕಾ ತರಜು ಮತ್ತು 1982ರ ನಿಕಾಹ್ ಚಿತ್ರಗಳು ಅವರಿಗೆ ಖ್ಯಾತಿ ತಂದುಕೊಟ್ಟವವುಗಳಲ್ಲಿ ಪ್ರಮುಖವಾದವು.
ಸಂಬಂಧಿತ ಮಾಹಿತಿ ಹುಡುಕಿ
ಇದನ್ನು ಸಹ ಶೋಧಿಸು: ಬಾಲಿವುಡ್, ಚಿತ್ರ ನಿರ್ಮಾಪಕ, ಬಿಆರ್ಚೋಪ್ರಾ