ಸುದ್ದಿ/ಗಾಸಿಪ್ | ಸಿನಿಮಾ ಮುನ್ನೋಟ | ಸಿನಿಮಾ ವಿಮರ್ಶೆ | ತಾರಾ ಪರಿಚಯ | ಸಂದರ್ಶನ | ಹಾಲಿವುಡ್ | ಕಿರುತೆರೆ
ಮುಖ್ಯ ಪುಟ ಮನರಂಜನೆ » ಬಾಲಿವುಡ್‌ » ಸುದ್ದಿ/ಗಾಸಿಪ್ » ಸಲ್ಮಾನ್, ಹೃತಿಕ್, ಶಾಹಿದ್, ಈಗ ಸೋನು..
ಸುದ್ದಿ/ಗಾಸಿಪ್
Feedback Print Bookmark and Share
 
ಸಲ್ಮಾನ್ ಖಾನ್, ಹೃತಿಕ್ ರೋಶನ್, ಶಾಹಿದ್ ಕಪೂರ್ ಮತ್ತು ಸೋನು ಸೂದ್‌ರನ್ನು ಒಟ್ಟಿಗೆ ಸೇರಿಸಲು ಒಂದು ಸರಳ ಕಾರಣ ಪ್ರೇಮ್ ಎಂಬ ಹೆಸರು. ಸೂರಜ್ ಭಾರ್ಜತ್ಯ ಅವರ 'ಎಕ್ ವಿವಾಹ್ ಐಸಾ ಭೀ' ಚಿತ್ರ ಈ ವಾರಂತ್ಯದಲ್ಲಿ ತೆರೆ ಕಾಣಲಿದೆ. ಸೂರಜ್ 'ಪ್ರೇಮ್' ರಹಸ್ಯವನ್ನು ಬಿಚ್ಚಿಟ್ಟಿದ್ದಾರೆ.

"'ಪ್ರೇಮ್' ಎಂಬ ಹೆಸರು ನನ್ನ ಎಲ್ಲಾ ಚಿತ್ರಗಳಲ್ಲೂ ಮುಖ್ಯಪಾತ್ರ ವಹಿಸಿತ್ತು ಮತ್ತು ನಾನು ಈ ಹೆಸರಿನೊಂದಿಗೆ ಭಾವಾನಾತ್ಮಕತೆಯನ್ನು ಬೆಳೆಸಿಕೊಂಡಿದ್ದೇನೆ" ಎನ್ನುವ ಸೂರಜ್‌ರ ಚೊಚ್ಚಲ ಚಿತ್ರ 'ಮೈನೆ ಪ್ಯಾರ್ ಕಿಯಾ'ದಿಂದ ಹಿಡಿದು, 'ವಿವಾಹ್'ವರಗೆ ಎಲ್ಲಾ ಚಿತ್ರಗಳಲ್ಲೂ ನಾಯಕನ ಹೆಸರು ಪ್ರೇಮ್ ಎಂದಾಗಿತ್ತು ಮತ್ತು ಈ ಎಲ್ಲಾ ಚಿತ್ರಗಳು ಬಾಲಿವುಡ್‌ನ ಗಲ್ಲಾಪೆಟ್ಟಿಗೆಯನ್ನು ತುಂಬಿದ ಹಿಟ್ ಚಿತ್ರಗಳೆನಿಸಿವೆ. ಇದುವರೆಗೆ ಅವರ ಮೆಚ್ಚಿನ ಭಾವನಾತ್ಮಕ ಹೆಸರು ಸೂರಜ್‌ಗೆ ಅದೃಷ್ಟದ ಬಾಗಿಲು ಕೂಡ ಎನಿಸಿದೆ.

ಎಕ್ ವಿವಾಹ್ ಐಸಾ ಭೀ ಚಿತ್ರದ ನಾಯಕ ಸೋನು ಸೂದ್ ಅವರ ಹೆಸರು ಸಹ ಪ್ರೇಮ್ ಎಂದೇ, ಚಿತ್ರಕ್ಕೆ ನಾಯಕಿ ಇಶಾ ಕೊಪ್ಪಿಕರ್.

ಈ ಬಾರಿಯ 'ಪ್ರೇಮ್' ಸೋನು ಸೂದ್‌ಗೂ ಚಿತ್ರ ಪ್ರೇಮದುಡುಗೊರೆಯಾಗುತ್ತದೆಯೇ ಎಂಬುದನ್ನು ಕಾದು ನೋಡಬೇಕಷ್ಟೇ.
ಸಂಬಂಧಿತ ಮಾಹಿತಿ ಹುಡುಕಿ
ಇದನ್ನು ಸಹ ಶೋಧಿಸು: ಸಲ್ಮಾನ್ ಖಾನ್, ಹೃತಿಕ್ ರೋಶನ್, ಶಾಹಿದ್ ಕಪೂರ್, ಸೂರಜ್ ಭಾರ್ಜತ್ಯ, ಎಕ್ ವಿವಾಹ್ ಐಸಾ ಭೀ