ಆಸ್ಟ್ರೇಲಿಯನ್ ಕ್ರಿಕೆಟಿಗ ಬ್ರೆಟ್ ಲಿ ಮತ್ತು ಬಾಲಿವುಡ್ ನಟ ಶಾಹಿದ್ ಕಪೂರ್ ಇತ್ತೀಚಿಗೆ ಚಂಢೀಗಡದಲ್ಲಿ ಭೇಟಿಯಾಗಿದ್ದಾರೆ.
ಶಾಹಿದ್ ಇನ್ನೂ ಹೆಸರಿಡದ ಚಿತ್ರದಲ್ಲಿ ರಾಣಿ ಮುಖರ್ಜಿ ಜೊತೆ ನಟಿಸುತ್ತಿದ್ದು, ಬಿಡುವಿಲ್ಲದ ಚಿತ್ರೀಕರಣದಲ್ಲಿ ನಿರತರಾಗಿದ್ದರು. ಪೂರ್ಣ ದಿನದ ಶೂಟಿಂಗ್ ಮುಗಿಸಿ ದಣಿದ ಶಾಹಿದ್ ಹೋಟೆಲ್ ಕೊಠಡಿ ಸೇರಿದರು. ಆದರೆ ಸಂಜೆ ಶಾಹಿದ್ರಿಗೊಂದು ಆಶ್ಚರ್ಯ ಕಾದಿತ್ತು. ಅದೇ ಹೋಟೆಲ್ನಲ್ಲಿ ತಂಗಿದ್ದ ಬ್ರೆಟ್ ಲಿ ಅವರು ಶಾಹಿದ್ ಕೊಠಡಿಗೆ ಸರ್ಪ್ರೈಸ್ ವಿಸಿಟ್ ನೀಡಿದರು.
ಬಾಲಿವುಡ್ ವಲಯದಲ್ಲಿ ಸಾಕಷ್ಟು ಖ್ಯಾತಿ ಪಡೆದಿರುವ ಬ್ರೆಟ್, ಶಾಹಿದ್ರನ್ನು ಭೇಟಿಯಾಗುವ ಅವಕಾಶ ಕಳೆದುಕೊಳ್ಳಲಿಚ್ಛಿಸಲಿಲ್ಲ. ಅವರಿಬ್ಬರೂ ಸುದೀರ್ಘ ಚರ್ಚೆಯಲ್ಲಿ ತೊಡಗಿದ್ದರು ಮತ್ತು ಜೊತೆಯಾಗಿ ಡಿನ್ನರ್ ಸ್ವೀಕರಿಸಿದರು. ಅವರ ಮಾತುಕತೆ ಸಂಬಂಧಿಸಿದ್ದುದು ಕೇವಲ ಕ್ರಿಕೆಟ್, ಕ್ರಿಕೆಟ್ ಮತ್ತು ಕ್ರಿಕೆಟ್ಗೆ ಮಾತ್ರ.
PTI
ಶಾಹಿದ್ ಅತೀವ ಕ್ರಿಕೆಟ್ ಮೋಹ ಹೊಂದಿದ್ದಾರೆ ಮತ್ತು ಟಿ20 ಪಂದ್ಯಾವಳಿಯ ರಾಜಸ್ತಾನ್ ತಂಡಕ್ಕೆ ಬ್ರಾಂಡ್ ಅಂಬಾಸೆಡರ್ ಆಗುವ ಪ್ರಸ್ತಾಪ ಸಹ ಇತ್ತು. ಆದರೆ ಬಿಡುವಿಲ್ಲದ ಶೂಟಿಂಗ್ ವೇಳಾಪಟ್ಟಿಯ ಕಾರಣ ಶಾಹಿದ್ ಈ ಅವಕಾಶಕ್ಕೆ ಒಲ್ಲೆ ಎನ್ನಬೇಕಾಯಿತು.
ಕಾಕತಾಳೀಯವಾಗಿ ಶಾಹಿದ್ ಪ್ರಸ್ತುತ ಚಿತ್ರೀಕರಣ ನಿರತರಾಗಿರುವ ಚಿತ್ರವೂ ಸಹ ಕ್ರಿಕೆಟ್ ಕುರಿತಾಗಿದೆ. ಈಗ ಶಾಹಿದ್ ತಮ್ಮ ನಟನೆಗಾಗಿ ಲೀಯಿಂದ ಸಾಕಷ್ಟು ಕ್ರಿಕೆಟಿಂಗ್ ಟಿಪ್ಸ್ ಪಡೆದುಕೊಂಡಿರಬುದು.