'ತಮ್ಮ ಚಿತ್ರದ ಪ್ರಚಾರಕ್ಕಾಗಿ ರಿಯಾಲಿಟಿ ಶೊಗಳಿಗೆ ನಟ, ನಟಿಯರು ಆಗಮಿಸುವುದು ಟ್ರೆಂಡ್ ಎನಿಸಿಕೊಂಡುಬಿಟ್ಟಿದೆ. ಆದರೆ ಈ ಬಾರಿ ಝೀ ಟಿವಿಯವರ 'ಸಾರೇ ಗಾ ಮಾ ಪ ಚಾಲೆಂಜ್ 2009' ಕಾರ್ಯಕ್ರಮಕ್ಕೆ ಸೂಪರ್ ಸ್ಟಾರ್ ಸಲ್ಮಾನ್ ಖಾನ್ ಮತ್ತು ಕತ್ರಿನಾ ಕೈಫ್ ತಮ್ಮ 'ಯುವರಾಜ್' ಚಿತ್ರದ ಪ್ರಚಾರಕ್ಕಾಗಿ ಆಗಮಿಸಿದರು. ಬಾಲಿವುಡ್ನ ಹಾಟೆಸ್ಟ್ ಜೋಡಿ ಅಲ್ಲಿರುವಾಗ ಅದು ವಿಶೇಷ ಸಂದರ್ಭವಾಗದಿರಲು ಸಾಧ್ಯವೇ?
ಹುಡುಗಾಟದ ಮೂಡ್ನಲ್ಲಿದ್ದ ಸಲ್ಲು ಬಹುಶಃ ಕತ್ರಿನಾರಿಗಾಗಿ 'ಮುಜ್ ಸೇ ಶಾದಿ ಕರೋಗಿ' ಹಾಡನ್ನುಲಿದರು. ಅವರು ಹಾಡಿನಂತೆ ಮದುವೆ ಯಾವಾಗ ಎಂದು ಪ್ರಶ್ನಿಸಿದ್ದಕ್ಕೆ, ತಕ್ಷಣ ಸಿಕ್ಕ ಉತ್ತರ "ಇದು ಮುಂದಿನ ವರ್ಷ ನಡೆಯುತ್ತದೆ ಇದನ್ನೇ ನಾನು ನನ್ನ ಹಿಂದಿನ ಸಂದರ್ಶನಗಳಲ್ಲೂ ಹೇಳಿದ್ದೇನೆ". ಇದೇ ವೇಳೆ ಸ್ಪರ್ಧಾಳುಗಳೊಂದಿಗೆ ಹಾಡುವ, ಕುಣಿಯುವ ಮೂಲಕ ಸಲ್ಲು ಮತ್ತು ಕತ್ರಿನಾ ಕಾರ್ಯಕ್ರಮಕ್ಕೆ ಕಳೆ ನೀಡಿದರು.
IFM
ಕಾರ್ಯಕ್ರಮದ ಕೆಲವು ಹುಡುಗಿಯರಿಗೆ ಜೀವನದ ಅವಿಸ್ಮರಣೀಯ ಅನುಭವಗಳನ್ನು ನೀಡಿದ ಸಲ್ಮಾನ್ ಅವರೊಂದಿಗೆ ನರ್ತಿಸಿದರು ಮತ್ತು ಫೋಟೊಗಳಿಗೆ ಫೋಸು ನೀಡಿದರು. ಕತ್ರಿನಾರ ಹಿಂದಿ ಬಗ್ಗೆ ಸಲ್ಲು ಹಾಸ್ಯ ಮಾಡಿದಾಗ, ಎಲ್ಲರೂ ನಗುವಿನಲೆಯಲ್ಲಿ ತೇಲಿದರೆ ಕತ್ರಿನಾ ನಾಚಿ ನೀರಾದರು.