ದೋಸ್ತಾನಾ ಚಿತ್ರದಲ್ಲಿ ಶಿಲ್ಪಾ ಶೆಟ್ಟಿ ಮತ್ತು ಜಾನ್ ಅಬ್ರಹಾಂ ನಟಿಸಿರುವ ಹಾಡೊಂದು ಬಹಳಷ್ಟು ಜನಪ್ರಿಯತೆ ಪಡೆಯುತ್ತಿದೆ. ಆದರೆ ಚಿತ್ರೀಕರಣ ಸಂದರ್ಭ ಪಾಪಾ ಜಾನ್ರ ದೇಹದಿಂದಾಗಿ ಶಿಲ್ಪಾ ಎಷ್ಟು ಕಷ್ಟಪಡಬೇಕಾಗಿತ್ತು ಎಂದು ಯಾರಿಗೂ ತಿಳಿದಿಲ್ಲ. ಜಾನ್ ಸೂರ್ಯನ ಪ್ರಕೋಪದಿಂದ ತಪ್ಪಿಸಿಕೊಳ್ಳಲು ಸನ್ ಬ್ಲಾಕ್ ಹಚ್ಚಿಕೊಂಡಿದ್ದರು ಇದರಿಂದ ಅವರನ್ನು ತೋಳಿಂದ ಬಳಸಬೇಕಾಗಿದ್ದ ಶಿಲ್ಪಾ ಮತ್ತೆ ಮತ್ತೆ ಜಾರಿ ಕೆಳಗೆ ಬೀಳುತ್ತಿದ್ದರು.
ಕಿಲಕಿಲನೆನ್ನುತ್ತಿದ್ದ ಶಿಲ್ಪಾ "ಜಾನ್ ತಮ್ಮ ಮೈಮೇಲೆ ಎಷ್ಟೊಂದು ಎಣ್ಣೆ ಸವರಿಕೊಂಡಿದ್ದರೆಂದರೆ ಪ್ರತಿಸಲ ನಾನು ಅವರನ್ನು ತೋಳಿಂದ ಬಳಸಿದಾಗಲೂ ಬಿದ್ದು ಬಿಡುತ್ತಿದ್ದೆ. ಕೊನೆಗೆ ನಾನು ಅವರಲ್ಲಿ ಸ್ವಲ್ಪ ಎಣ್ಣೆಯನ್ನು ಒರೆಸಿ ತೆಗೆಯುವಂತೆ ವಿನಂತಿಸಿದೆ. ಆದರೆ ಜಾನ್ರಷ್ಟು ಹಾಟ್ ಆಗಿ ಕಾಣಿಸುವವರನ್ನು ನಾನು ಎಂದೂ ನೋಡಿಲ್ಲ! ನಾನು ಅವರಿಗೆ ಹೇಳುತ್ತಲೇ ಇರುತ್ತಿದ್ದೆ, ಜಾನ್ ದಯವಿಟ್ಟು ದೂರ ಹೋಗಿ, ನೀವು ಎಷ್ಟು ಚೆನ್ನಾಗಿ ಕಾಣುತ್ತೀರಿ ಎಂದರೆ ನನ್ನನ್ಯಾರು ನೋಡುತ್ತಲೇ ಇಲ್ಲ" ಎಂದರು.
IFM
ತಮ್ಮ ಸಾಂಗ್ಗೆ ಸಿಗುತ್ತಿರುವ ಉತ್ತಮ ಪ್ರತಿಕ್ರಿಯೆಯ ಬಗ್ಗೆ ಶಿಲ್ಪಾ ಬಹಳ ಖುಷಿಯಾಗಿದ್ದಾರೆ. "ಜನರು ನನ್ನ ಹಾಟ್ ಲುಕ್ ಅನ್ನು ಇಷ್ಟಪಟ್ಟಿದ್ದಾಗಿ ಹೇಳುತ್ತಿದ್ದಾರೆ. ರಾಜ್(ಕುಂದ್ರಾ) ತಾವು ಮೊದಲ ಬಾರಿ ಸಾಂಗ್ ಅನ್ನು ನೋಡಿದಾಗ ಬಹಳ ಇಷ್ಟಪಟ್ಟಿದ್ದಾಗಿ ಹೇಳಿದರು.
ಆದರೆ ನನ್ನ ತಂದೆಗೆ ಇದನ್ನು ನೋಡಿದಾಗ ಸ್ವಲ್ಪ ಮಟ್ಟಿನ ಆಘಾತ ಉಂಟಾಗಿತ್ತು, ನಾನು ಇಷ್ಟೊಂದು ಕಡಿಮೆ ಬಟ್ಟೆ ಹಾಕಿರುವುದನ್ನು ಅವರು ನೋಡಿರಲಿಲ್ಲ" ಎನ್ನುತ್ತಾ ನಗೆ ಬೀರುತ್ತಾರೆ ಶಿಲ್ಪಾ. ಸದ್ಯ ಅವರ ತಂದೆ ತಮ್ಮ ಮಗಳ ಅವತಾರ ನೋಡಿ ಹೃದಯಾಘಾತವಾಗಲಿಲ್ಲವಲ್ಲ...!