ಕತ್ರಿನಾ ಕೈಫ್ ತಮ್ಮ ಬಾಯ್‌ಪ್ರೆಂಡ್ ಸಲ್ಮಾನ್ ಖಾನ್‌ರನ್ನೆ ಮದುವೆಯಾದರೆ ಅವರ ಕುಟುಂಬ ಸೇರಬೇಕಾಗುತ್ತದೆ. ಆದರೆ ಇತ್ತೀಚಿನ ವದಂತಿಗಳನ್ನು ನಂಬುವುದಾದರೆ ಸಲ್ಲು ಪರಿವಾರಕ್ಕೆ ಕತ್ರಿನಾ ಪಯಣ ಅಷ್ಟೊಂದು ಸುಲಭ ಸಾಧ್ಯವಾಗಿರುವುದಿಲ್ಲ. ಸಲ್ಮಾನ್‌ರ ಸಿಸ್ಟರ್-ಇನ್-ಲಾ ಮಲೈಕಾ ಅರೋರಾಗೆ ಕತ್ರಿನಾ ಎಂದರೆ ಅಷ್ಟಕಷ್ಟೇ ಎನ್ನುವ ಸುದ್ದಿ ಬಾಲಿವುಡ್ ವಲಯದಲ್ಲಿ ಸರಿದಾಡುತ್ತಿದೆ.
IFM
ತಮ್ಮ ಅರ್ಬಾಜ್ ಖಾನ್‌ರ ನಿರ್ಮಾಣ ಸಂಸ್ಥೆಯ ಚೊಚ್ಚಲ ಚಿತ್ರದಲ್ಲಿ ಕತ್ರಿನಾರನ್ನು ನಾಯಕಿಯನ್ನಾಗಿಸಬೇಕು ಎಂಬ ಬಗ್ಗೆ ಸಲ್ಲು ಬಹಳ ಉತ್ಸಾಹಿತರಾಗಿದ್ದರು ಆದರೆ ಮಲೈಕಾ ಇದಕ್ಕೆ ಸಮ್ಮತಿ ನೀಡುತ್ತಿಲ್ಲ ಎನ್ನಲಾಗುತ್ತಿದೆ. ಆದ್ದರಿಂದ ಸಲ್ಮಾನ್ ಮುಖ್ಯಪಾತ್ರದಲ್ಲಿದ್ದರೂ ಕತ್ರಿನಾರಿಗೆ ಚಿತ್ರದಲ್ಲಿ ನಟಿಸುವ ಆಹ್ವಾನ ನೀಡಲಾಗಿಲ್ಲ.
ಕತ್ರಿನಾ ಶೀಘ್ರವಾಗಿ ಮನಸ್ತಾಪವನ್ನು ತಿಳಿಯಾಗಿಸಿಕೊಳ್ಳುವುದು ಭವಿಷ್ಯದ ದೃಷ್ಟಿಯಲ್ಲಿ ಒಳಿತು...