ಬಾಲಿವುಡ್ ಹಾಟ್ ನಟಿ ಕರೀನಾ ಕಪೂರ್ ತನ್ನ 'ಮಾಜಿ' ಪ್ರಿಯಕರ ಶಾಹಿದ್ ಕಪೂರ್ ಈಗಲೂ ನನ್ನ ಜೀವನದ ಒಂದು ಭಾಗವಾಗಿದ್ದಾರೆ ಎಂದಿದ್ದಾರೆ.
ಪತ್ರಿಕೆಯೊಂದರೊಂದಿಗೆ ಮಾತಾನಾಡುತ್ತಿದ್ದ ಬೆಬೊ, "ಶಾಹಿದ್ ಮತ್ತು ನನ್ನ ನಡುವೆ ವಿರಸ ಉಂಟಾದುದು ತೀರಾ ವೈಯಕ್ತಿಕ ವಿಷಯಕ್ಕೆ. ಶಾಹಿದ್ ಯಾವಾಗಲೂ ನನ್ನ ಜೀವನದ ಒಂದು ಭಾಗವಾಗಿರುತ್ತಾರೆ. ಆದರೆ ನಾವು ಉತ್ತಮ ಸ್ನೇಹಿತರಾಗಿರುತ್ತೇವೆ. ನಮ್ಮ ನಡುವೆ ದ್ವೇಷವಿಲ್ಲ" ಎಂದು ಹೇಳಿದ್ದಾರೆ.
IFM
"ಕೆಲವೊಂದು ಬಾರಿ ಜೀವನದಲ್ಲಿ ನಡೆಯುವ ಕೆಲವು ಘಟನೆಗಳಿಗೆ ನಿರ್ದಿಷ್ಟ ಕಾರಣಗಳಿರುವುದಿಲ್ಲ. ಒಂದು ವೇಳೆ ಇದ್ದರೂ ಆ ಬಗ್ಗೆ ಸಾರ್ವಜನಿಕವಾಗಿ ಮಾತನಾಡುವುದು ಸರಿಯೆಂದು ನನಗನಿಸುವುದಿಲ್ಲ" ಎಂದು ಕರೀನಾ ಹೇಳಿದ್ದಾರೆ.
ಕಳೆದ ವರ್ಷಾರ್ಧದಲ್ಲಿ ಕರೀನಾ ಶಾಹಿದ್‌ರೊಂದಿಗಿನ ಹಲವಾರು ವರ್ಷಗಳ ಸಂಬಂಧವನ್ನು ಮುರಿದುಕೊಂಡು ಬಾಲಿವುಡ್‌ನ ಇನ್ನೊರ್ವ ಸಹನಟ ಸೈಫ್ ಅಲಿಖಾನ್ ತೋಳ್‌ತೆಕ್ಕೆ ಸೇರಿದ್ದರು.