ಇಶ್ಕಿಯಾ ಚಿತ್ರದಲ್ಲಿ ವಿದ್ಯಾ ಬಾಲನ್ ಅರ್ಶದ್ ವರ್ಸಿ ಅವರೊಂದಿಗೆ ನಟಿಸುತ್ತಿದ್ದು, ಈ ಬಾರಿ ಸಹನಟನೊಂದಿಗೆ ತಮ್ಮ ಹೆಸರನ್ನು ತಳುಕು ಹಾಕಿ ವದಂತಿ ಹಬ್ಬಿಸದಿರುವ ಬಗ್ಗೆ ಖುಷಿಯಾಗಿದ್ದಾರಂತೆ.
"ಈ ಬಾರಿ ಮಾಧ್ಯಮಗಳು ಅವರ ಹೆಸರನ್ನು ಸಹನಟನೊಂದಿಗೆ ತಳುಕು ಹಾಕುವುದು ಸಾಧ್ಯವಿಲ್ಲ ಎಂಬ ಬಗ್ಗೆ ವಿದ್ಯಾ ಸಂತೋಷವಾಗಿದ್ದಾರೆ. ಅರ್ಶದ್ ಅವರ ಉತ್ತಮ ಗೆಳೆಯ ಮತ್ತು ಎರಡು ಮಕ್ಕಳನ್ನು ಪಡೆದು ವಿವಾಹಿತ ಜೀವನ ನಡೆಸುತ್ತಿರುವಾತ. ಆದ್ದರಿಂದ ಈ ಬಾರಿ ತಾವು ಸಹನಟನೊಂದಿಗೆ ನಂಟಿನ ವದಂತಿಯಿಂದ ದೂರವಿರಬಹುದೆಂದು ವಿದ್ಯಾ ಖುಷಿಯಾಗಿದ್ದಾರೆ" ಎಂದು ಮೂಲವೊಂದು ತಿಳಿಸಿದೆ.
IFM
ಶಾಹಿದ್ ಕಪೂರ್, ಸಂಜಯ್ ದತ್ ಮತ್ತು ಜಾನ್ ಅಬ್ರಹಾಂ ಸೇರಿದಂತೆ ಎಲ್ಲಾ ಸಹನಟರೊಂದಿಗೂ ವಿದ್ಯಾಗೆ ನಂಟಿದೆಯೆಂದು ಸುದ್ದಿ ಹಬ್ಬಿತ್ತು. ಅವರು ನಟಿಸಿದ್ದ ಹೇ ಬೇಬಿ ನಿರ್ದೇಶಕ ಸಾಜಿದ್ ಖಾನ್ ಅವರೊಂದಿಗೂ ವಿದ್ಯಾ ನಂಟಿನ ವರದಿಯಾಗಿತ್ತು.