ಬಿಡುಗಡೆಗೆ ಸಿದ್ಧವಾಗಿರುವ ಚಿತ್ರ ದೋಸ್ತಾನ ಜಾನ್ ಅಬ್ರಹಾಂ ಮತ್ತು ಅಭಿಷೇಕ್‌ರ ಗೆಳೆತನದ ಬಗೆಗಿನ ಚಿತ್ರ ಮತ್ತು ಸಲಿಂಗಕಾಮದ ಬಗೆಗಿನ ಚಿತ್ರವಲ್ಲ ಎನ್ನುತ್ತಾರೆ ನಿರ್ದೇಶಕ ತರುಣ್ ಮನುಸುಕಾನಿ. "ಅವರು ಸಲಿಂಗಕಾಮಿಗಳಂತೆ ವರ್ತಿಸುವುದಿಲ್ಲ. ಅವರು ಸಾಮಾನ್ಯ ಗೆಳೆಯರಂತೆಯೇ ವರ್ತಿಸುತ್ತಾರೆ" ಎಂದು ತರುಣ್ ಹೇಳಿದ್ದಾರೆ.
ವಾಸ್ತವವಾಗಿ, ಸಲಿಂಗಕಾಮಿಗಳು ಬೇರೆಯದೇ ರೀತಿಯಲ್ಲಿ ವರ್ತಿಸುವುದಿಲ್ಲ. ಅವರ ವರ್ತನೆ ನಮ್ಮ ವರ್ತನೆಗಿಂತ ಭಿನ್ನವಾಗಿರುವುದಿಲ್ಲ. ಸಲಿಂಗಕಾಮಿಗಳ ಬಗ್ಗೆ ನಾವು ಹೊಂದಿರುವ ದೃಷ್ಟಿಕೋನದಿಂದಾಗಿ ನಾವು ಅವರು ಬೇರೆಯದೇ ರೀತಿ ವ್ಯವಹರಿಸುತ್ತಾರೆ ಎಂದು ಯೋಚಿಸುತ್ತೇವೆ ಎಂದ ತರುಣ್ ದೋಸ್ತಾನ ಚಿತ್ರ ಸಲಿಂಗಕಾಮಿಗಳ ಬಗ್ಗೆ ಪೂರ್ವಗ್ರಹ ಪೀಡಿತವಾದುದಲ್ಲ ಎಂಬುದಾಗಿ ಸ್ಪಷ್ಟಪಡಿಸಿದರು.
IFM
ಸಲಿಂಗಕಾಮದ ಬಗೆಗಿನ ಥೀಮ್ ಆರಿಸಿಕೊಳ್ಳುವುದಕ್ಕೆ ಕಾರಣವೇನೆಂದು ಪ್ರಶ್ನಿಸಿದಾಗ "ಬಾಲಿವುಡ್‍ನಲ್ಲಿ ಮಕ್ಕಳ ಶೋಷಣೆ, ಡ್ರಗ್ಸ್, ಅನೈತಿಕ ಸಂಬಂಧ, ಲೈಂಗಿಕ ಶೋಷಣೆ ಮುಂತಾದ ಎಲ್ಲಾ ವಿಷಯಗಳ ಮೇಲೆ ಚಿತ್ರ ಮಾಡಲಾಗಿದೆ. ಆದರೆ ಇದುವರೆಗೆ ಸಲಿಂಗಕಾಮಿಗಳ ಬಗ್ಗೆ ಈವರೆಗೆ ಯಾವುದೇ ಚಿತ್ರ ಬಂದಿಲ್ಲ. ಆದ್ದರಿಂದ ನಾನಿದನ್ನು ಚಿತ್ರದಲ್ಲಿ ಸೇರಿಸಿದೆ" ಎಂದು ತರುಣ್ ಉತ್ತರಿಸಿದರು.
ಆದರೆ ಇದು ಸಲಿಂಗಕಾಮಿಗಳ ಚಿತ್ರವಲ್ಲ. ಇದು ಗೆಳೆತನ ಮತ್ತು ಅದರಲ್ಲಿನ ಏಳು ಬೀಳುಗಳ ಕುರಿತ ಚಿತ್ರವಾಗಿದೆ. ದೋಸ್ತಾನದಲ್ಲಿ ಅಭಿಷೇಕ್ ಬಚ್ಚನ್, ಜಾನ್ ಅಬ್ರಾಹಾಂ. ಪ್ರೀಯಾಂಕ ಚೋಪ್ರಾ ಮತ್ತು ಶಿಲ್ಪಾ ಶೆಟ್ಟಿ ನಟಿಸಿದ್ದಾರೆ ಮತ್ತು ಬಾಬ್ಬಿ ಡಿಯೋಲ್ ಅತಿಥಿ ಪಾತ್ರದಲ್ಲಿ ಕಾಣಿಸಿಕೊಳ್ಳಲಿದ್ದಾರೆ.
ಅಭಿಷೇಕ್ ಆಸ್ಪತ್ರೆಯೊಂದರಲ್ಲಿ ಪುರುಷ ನರ್ಸ್ ಆಗಿರುತ್ತಾರೆ, ಜಾನ್ ಫೋಟೊಗ್ರಾಫರ್ ಆಗಿದ್ದು ಕಾನೂನು ಬಾಹಿರವಾಗಿ ದೇಶಕ್ಕೆ ವಲಸೆ ಬಂದಿರುತ್ತಾರೆ. ಪ್ರಿಯಾಂಕ ಫ್ಯಾಶನ್ ಪತ್ರಿಕೆಯೊಂದರಲ್ಲಿ ಉದ್ಯೋಗಸ್ಥೆಯಾಗಿರುತ್ತಾರೆ.