ರಬ್ನೆ ಬನಾ ದಿ ಜೋಡಿ ಚಿತ್ರ ತನ್ನ ಯವ ಆದರೆ ಒಲ್ಲದ ಪತ್ನಿಯನ್ನು ಒಲಿಸಿಕೊಳ್ಳಲು ಪ್ರಯತ್ನಿಸುವ ಸರಳ ಮತ್ತು ಸಾಮಾನ್ಯ ವ್ಯಕ್ತಿಯೊರ್ವನ ಕತೆಯನ್ನು ಒಳಗೊಂಡಿದೆ.
ಎಲ್ಲಾ ಯಶ್ ರಾಜ್ ಚಿತ್ರಗಳಂತೆ ಇಲ್ಲೂ ಚಿತ್ರಕತೆಯನ್ನು ರಹಸ್ಯವಾಗಿಡಲಾಗಿದೆ. ಆದರೆ ಚಿತ್ರತಂಡದಿಂದ ಸಂಗ್ರಹಿಸಲ್ಪಟ್ಟ ಮಾಹಿತಿಯಂತೆ ಚಿತ್ರದ ಕತೆಯನ್ನು ಇಲ್ಲಿ ಪ್ರಸ್ತುತ ಪಡಿಸಲಾಗಿದೆ.
ಶಾರುಖ್ ಖಾನ್ ಕಂಪೆನಿಯೊಂದರಲ್ಲಿ ಉದ್ಯೋಗಸ್ಥರಾಗಿರುವ ಸಾಮಾನ್ಯ ವ್ಯಕ್ತಿ. ಅವರ ವಿವಾಹವು ಅವರನ್ನು ಸ್ವಲ್ಪವೂ ಇಷ್ಟಪಡದ ತಾನಿ(ಅನುಕ್ಷ ಶರ್ಮ) ಅವರೊಂದಿಗೆ ನೆರವೇರುತ್ತದೆ. ಪತಿ-ಪತ್ನಿಯ ನಡುವೆ ಸಾಕಷ್ಟು ವಯಸ್ಸಿನ ಅಂತರವಿರುವುದಲ್ಲದೆ ಅವರ ನಡುವೆ ಪ್ರೀತಿ ಇರುವುದಿಲ್ಲ. ಶಾರುಖ್ ತಾನಿಯನ್ನು ಪ್ರೀತಿಸುತ್ತಾರಾದರೂ ತಮ್ಮ ಭಾವನೆಗಳನ್ನು ವ್ಯಕ್ತಪಡಿಸುವುದಿಲ್ಲ.
IFM
ಅನುಕ್ಷ ರಬ್ನೆ ಬನಾ ದಿ ಜೋಡಿ ಎಂಬ ಡಾನ್ಸ್ ಕಾಂಪಿಟೇಶನ್‌ನಲ್ಲಿ ಭಾಗವಹಿಸಲು ಬಯಸುವಲ್ಲಿಂದ ಕತೆಗೆ ಮಹತ್ವದ ತಿರುವು ಬರುತ್ತದೆ. ಅನುಕ್ಷರಿಗೆ ತಮ್ಮ ಹಳೆಯ ಕಾಲದ ಫ್ಯಾಶನ್ ರಹಿತ ಪತಿಯೊಂದಿಗೆ ಜೋಡಿಯಾಗಿ ಡಾನ್ಸ್ ಸ್ಪರ್ಧೆಯಲ್ಲಿ ಭಾಗವಹಿಸುವುದು ಇಷ್ಟವಿರುವುದಿಲ್ಲ. ಇದು ಶಾರುಖ್ ಅರಿವಿಗೆ ಬಂದಾಗ ಅವರು ತಮ್ಮನ್ನು ಬದಲಾಯಿಸಿಕೊಳ್ಳಲು ನಿರ್ಧರಿಸುತ್ತಾರೆ. ಅವರು ಫರಿಶ್ರಮ ಪಟ್ಟು ತಮ್ಮನ್ನು ಸಾಮಾನ್ಯವಾಗಿ ಕಾಣುವ ವ್ಯಕ್ತಿಯಿಂದ ಹಾಟ್ ಹುಡುಗನ ತರಹ ಕಾಣಿಸುವಂತೆ ಬಲಾಯಿಸಿಕೊಳ್ಳುತ್ತಾರೆ. ಎಷ್ಟರ ಮಟ್ಟಿಗೆ ಎಂದರೆ ಡಾನ್ಸ್ ಕಾಂಪಿಟೇಶನ್‌ನಲ್ಲಿ ಅನುಕ್ಷಾರ ಜೋಡಿಯಾಗುವ ಶಾರುಖ್‌ರನ್ನು ಅವರು ಗುರುತು ಹಿಡಿಯಲಾರದಷ್ಟು.
IFM
ಡಾನ್ಸ್ ಕಾಂಪಿಟೇಶನ್ ಸಂದರ್ಭ ತನ್ನ ಜೋಡಿ ತನ್ನ ಪತಿಯೇ ಎಂಬುದನ್ನು ಅರಿಯದ ಅನುಕ್ಷಾ ಶಾರುಖ್‌ರನ್ನು ಪ್ರೀತಿಸಲು ತೊಡಗುತ್ತಾರೆ.
ಕೊನೆಯಲ್ಲಿ ಪತ್ನಿ, ತನ್ನ ಪತಿ ಇರುವ ಹಾಗೆಯೇ ಅವರನ್ನು ಒಪ್ಪಿಕೊಳ್ಳುವ ಮೂಲಕ ಚಿತ್ರ ಸುಖಾಂತ್ಯಗೊಳ್ಳುತ್ತದೆ.
IFM
ಈ ಮೇಲಿನ ಚಿತ್ರಕತೆಯು ಬಾಲಿವುಡ್ ವಲಯದಿಂದ ಸಂಗ್ರಹಿಸಲ್ಪಟ್ಟ ಮಾಹಿತಿಯಷ್ಟೇ ಹೊರತು ಯಶ್ ರಾಜ್ ಪ್ರೊಡಕ್ಷನ್ ಅವರ ಆಧಿಕೃತ ಚಿತ್ರ ಸಾರಾಂಶವಲ್ಲ.
ರಬ್ನೆ ಬನಾ ದಿ ಜೋಡಿ ಮೂಲಕ ಆದಿತ್ಯ ಚೋಪ್ರಾ ಮತ್ತೆ ನಿರ್ದೇಶನಕ್ಕಿಳಿದಿದ್ದಾರೆ. ಚಿತ್ರ ಡಿಸೆಂಬರ್‌ನಲ್ಲಿ ಬಿಡುಗಡೆಯಾಗಲಿದೆ.