ಸುದ್ದಿ/ಗಾಸಿಪ್ | ಸಿನಿಮಾ ಮುನ್ನೋಟ | ಸಿನಿಮಾ ವಿಮರ್ಶೆ | ತಾರಾ ಪರಿಚಯ | ಸಂದರ್ಶನ | ಹಾಲಿವುಡ್ | ಕಿರುತೆರೆ
ಮುಖ್ಯ ಪುಟ ಮನರಂಜನೆ » ಬಾಲಿವುಡ್‌ » ಸುದ್ದಿ/ಗಾಸಿಪ್ » ಬಾಕಿ ಸಂಭಾವನೆ ಬಗ್ಗೆ ಅರ್ಜಿ ಸಲ್ಲಿಸಿದ ಸಲ್ಲು
ಸುದ್ದಿ/ಗಾಸಿಪ್
Feedback Print Bookmark and Share
 
IFM
ತಮ್ಮ ಹಳೆಯ ಚಿತ್ರವೊಂದರ ಸಂಭಾವನೆ ಇನ್ನೂ ಪಾವತಿಯಾಗದಿರುವ ಬಗ್ಗೆ ಬಾಲಿವುಡ್ ನಟ ಸಲ್ಮಾನ್ ಖಾನ್ ಅವರು ಸೋಮವಾರ ಎಂಸಿಒಸಿಎ ನ್ಯಾಯಾಲಯಾಕ್ಕೆ ಅರ್ಜಿ ಸಲ್ಲಿಸಿದ್ದಾರೆ. ಈ ಚಿತ್ರದ ನಿರ್ಮಾಪಕರು ಅಂಡರ್‌ವಲ್ಡ್ ಸಂಪರ್ಕ ಹೊಂದಿರುವ ಅಪಾದನೆಯೊಂದಿಗೆ ಬಂಧಿಸಲ್ಪಟ್ಟಿದ್ದರು.

2001ರಲ್ಲಿ ಬಿಡುಗಡೆಗೊಂಡ 'ಚೋರಿ ಚೋರಿ ಚುಪ್ಕೆ ಚುಪ್ಕೆ' ಚಿತ್ರಕ್ಕೆ ಭೂಗತ ಜಗತ್ತಿನಿಂದ ಬಂಡವಾಳ ಹರಿದು ಬಂದಿತ್ತು ಎಂದು ಅಪಾದಿಸಲಾಗಿತ್ತು. ಚಿತ್ರಕ್ಕೆ ಹಣತೊಡಗಿಸಿರುವ ಭರತ್ ಶಾ ಮತ್ತು ನಿರ್ಮಾಪಕ ನಜೀಮ್ ರವಿ ಅವರನ್ನು ಈ ಸಂಬಂಧದಲ್ಲಿ ಬಂಧಿಸಲಾಗಿತ್ತು.

ಒಪ್ಪಂದದ ಪ್ರಕಾರ ಖಾನ್‌ರಿಗೆ 25ಲಕ್ಷ ಸಂಭಾವನೆ ಸಂದಾಯವಾಗಬೇಕಿತ್ತು. ಆದರೆ ಇದುವರೆಗೂ ಅವರಿಗೆ ಪೂರ್ಣ ಸಂಭಾವನೆಯ ಮೊತ್ತವನ್ನು ಪಾವತಿಸಲಾಗಿಲ್ಲ ಎಂದು ಸಲ್ಮಾನ್ ವಕೀಲ ರೇಣುಕಾ ಲಕ್ಷ್ಮಣ್ ತಿಳಿಸಿದ್ದಾರೆ.

ಎಂಸಿಒಸಿಎ ನ್ಯಾಯಧೀಶ ವೈ.ಡಿ ಶಿಂಧೆ ಅವರ ಮುಂದೆ ಅರ್ಜಿ ವಿಚಾರಣೆಗೆ ಬರಲಿದೆ.
ಸಂಬಂಧಿತ ಮಾಹಿತಿ ಹುಡುಕಿ
ಇದನ್ನು ಸಹ ಶೋಧಿಸು: ಸಲ್ಮಾನ್ ಖಾನ್ ಚೋರಿ ಚೋರಿ ಚುಪ್ಕೆ ಚುಪ್ಕೆ ಅಂಡರ್ವಲ್ಡ್ ಸಂಭಾವನೆ ಅರ್ಜಿ