ಸಂಜಯ್ ಲೀಲಾ ಬನ್ಸಾಲಿ ತಮ್ಮ ಮುಂದಿನ ಚಿತ್ರಕ್ಕೆ ಹೃತಿಕ್ ರೋಶನ್ರನ್ನು ಆರಿಸಿದ್ದಾರೆ ಎಂಬುದು ಈಗ ಹಳೆಯ ಸುದ್ದಿ. ಈಗ ಬಾಲಿವುಡ್ ವಲಯದಲ್ಲಿರುವ ಹಾಟ್ ಸುದ್ದಿಯೆಂದರೆ ಚಿತ್ರದ ನಾಯಕಿಯಾಗಿ ಐಶ್ವರ್ಯ ರೈ ಬಚ್ಚನ್ ನಟಿಸಲಿದ್ದಾರೆ ಎಂಬುದು.
ಐಶ್ವರ್ಯ ಚಿತ್ರದಲ್ಲಿ ನಟಿಸಲಿದ್ದಾರೆ ಎಂಬುದಕ್ಕೆ ಆಧಿಕೃತ ದೃಢೀಕರಣ ಸಿಕ್ಕಿಲ್ಲವಾದರೂ, ಬಾಲಿವುಡ್ ವಲಯದಲ್ಲಿ ಈ ಬಗ್ಗೆ ದಟ್ಟವಾದ ಸುದ್ದಿ ಹಬ್ಬಿದೆ. ಬನ್ಸಾಲಿ ಅವರ ಚಿತ್ರ ಮುಂದಿನ ಜುಲೈನಲ್ಲಿ ಸೆಟ್ಟೇರಲಿದೆ. ಈ ಸುದ್ದಿ ನಿಜವಾದಲ್ಲಿ ಇದು ಧೂಮ್ 2 ಮತ್ತು ಜೋಧಾ ಅಕ್ಬರ್ ನಂತರ ಐಶ್ ಮತ್ತು ಹೃತಿಕ್ ಜೊತೆಯಾಗಿ ನಟಿಸುತ್ತಿರುವ ಮೂರನೇ ಚಿತ್ರವಾಗಲಿದೆ. ಎರಡೂ ಚಿತ್ರಗಳು ಸೂಪರ್ ಹಿಟ್ ಎನಿಸಿದ್ದವು. ಈ ಅಂಶವನ್ನು ಗಮನದಲ್ಲಿರಿಸಿಕೊಂಡೇ ಬನ್ಸಾಲಿ ಈ ರಾಕಿಂಗ್ ಜೋಡಿಯನ್ನು ಒಂದುಗೂಡಿಸುವ ಯೋಚನೆಗೆ ಬಂದಿರಬಹುದು. ಈ ಚಿತ್ರಕ್ಕೆ ಕಥೆ ಬರೆಯಲು ಬನ್ಸಾಲಿ ಅವರೇ ಪೆನ್ನೆತ್ತಿಕೊಂಡಿದ್ದಾರೆ. ಐಶ್ವರ್ಯರ ಫಿಲ್ಮಿ ಕೆರಿಯರ್ನಲ್ಲಿ ಅತಿ ದೊಡ್ಡ ಹಿಟ್ ಎನ್ನಬಹುದಾದ ಹಮ್ ದಿಲ್ ದೇ ಚುಕೇ ಸನಮ್ ಚಿತ್ರವನ್ನು ಬನ್ಸಾಲಿ ಅವರೇ ನಿರ್ದೇಶಿಸಿದ್ದರು.
IFM
ಇತ್ತಕಡೆ ಹೃತಿಕ್ ಪ್ರಥಮ ಬಾರಿಗೆ ಬನ್ಸಾಲಿ ಅವರಿಂದ ನಿರ್ದೇಶಿಸಲ್ಪಡಲಿದ್ದಾರೆ. ಈ ಮೊದಲು ಬನ್ಸಾಲಿ ಅವರು ಹೇರಾ ಮಂಡಿ ಎಂಬ ಚಿತ್ರ ಮಾಡಲು ಬಯಸಿದ್ದರು ಆದರೆ ಚಿತ್ರಕ್ಕೆ ಬಹುಸಂಖ್ಯೆಯ ತಾರಬಳಗ ಅವಶ್ಯಕವಾಗಿತ್ತು. ಇಷ್ಟೊಂದು ಸಂಖ್ಯೆಯ ನಟನಟಿಯರ ದಿನಾಂಕಗಳನ್ನು ಹೊಂದಿಸಿಕೊಳ್ಳುವುದು ಆಗದ ಮಾತು ಎಂದು ಅರಿತ ಬನ್ಸಾಲಿ ಅವರು ಹೇರಾ ಮಂಡಿಯನ್ನು ಬದಿಗಿರಿಸಿ ಐಶ್ ಮತ್ತು ಹೃತಿಕ್ ನಡುವೆ ನವಿರಾದ ಪ್ರೇಮಕತೆಯನ್ನು ನಿರ್ದೇಶಿಸುವ ಯೋಜನೆ ತಯಾರಿಸಿದ್ದಾರೆ.
ನಾವು ಐಶ್ವರ್ಯ ರೈ ಈ ಚಿತ್ರದಲ್ಲಿ ನಟಿಸುತ್ತಿರುವ ಬಗ್ಗೆ ಆಧಿಕೃತ ಮಾಹಿತಿಗಾಗಿ ಕಾಯಬೇಕಾಗುತ್ತದೆ. ಪ್ರಸ್ತುತ ಮಣಿರತ್ನಂ ಚಿತ್ರದ ಚಿತ್ರೀಕರಣ ನಿರತರಾಗಿರುವ ಐಶ್ ಸಧ್ಯದಲ್ಲಿ ಆಧಿಕೃತವಾಗಿ ಬನ್ಸಾಲಿ ಚಿತ್ರಕ್ಕೆ ಸಹಿ ಹಾಕಲಿದ್ದಾರೆ.