ಬಾಲಿವುಡ್‌ನ 'ಹಾಟ್ ಕಪಲ್' ಸೈಫ್ ಅಲಿಖಾನ್ ಮತ್ತು ಕರೀನಾ ಕಪೂರ್ ತಮ್ಮ ವೃತ್ತಿ ಬದುಕಿನಲ್ಲಿ ಎಷ್ಟೊಂದು ಬ್ಯೂಸಿಯಾಗಿದ್ದಾರೆಂದರೆ ಅವರಿಗೆ ಪರಸ್ಪರರಿಗೆ ಸಮಯ ಮೀಸಲಿಡುವುದಕ್ಕೆ ಸಾಧ್ಯವಾಗುತ್ತಿಲ್ಲ. ಕರೀನಾ ಹೋದಲ್ಲೆಲ್ಲಾ ಅವರ ಹಿಂದೆಯೇ ಸೈಫ್ ವಿಶ್ವ ಪರ್ಯಟನೆ ಮಾಡಿದ ಕಾಲವೊಂದಿತ್ತು, ಈಗ ಇಬ್ಬರೂ ತಮ್ಮ ತಮ್ಮ ಚಿತ್ರಗಳಲ್ಲಿ ಬಿಡುವಿಲ್ಲದಂತೆ ತೊಡಗಿಕೊಂಡಿದ್ದಾರೆ.
ಇಮ್ತಿಯಾಜ್ ಅಲಿಖಾನ್ ಅವರು ನಿರ್ದೇಶಿಸುತ್ತಿರುವ ಮಿ. ಆಂಡ್ ಮಿಸೆಸ್ ಖನ್ನಾ ಚಿತ್ರಕ್ಕಾಗಿ ಕರೀನಾ ದುಬೈನಲ್ಲಿ ರಾತ್ರಿ, ಹಗಲೂ ಚಿತ್ರೀಕರಣ ನಿರತರಾಗಿದ್ದಾರೆ.
IFM
ಸೈಫ್ ತಮ್ಮ ದುಡಿಮೆಯಲ್ಲಿ ಎಷ್ಟೊಂದು ಮುಳುಗಿ ಹೋಗಿದ್ದಾರೆಂದರೆ ಅವರ ಮನದನ್ನೆ ಕರೀನಾ ಕಪೂರ್ ಗೃಹಿಣಿಯಾಗಿ ನಟಿಸಿರುವ ಹೊಸ ಚಿತ್ರ ಗೋಲ್‌ಮಾಲ್ ರಿಟರ್ನ್ಸ್ ಅನ್ನು ಇನ್ನೂ ನೋಡಿಲ್ಲ. ಈ ಬಗ್ಗೆ ಬೆಬೊ "ಸೈಫ್ ನನಗೆ ಸಮಯ ನೀಡದಷ್ಟೂ ಬ್ಯೂಸಿಯಾಗಿದ್ದಾರೆ... ಮತ್ತು ಅವರಿಗೆ ಚಿತ್ರವನ್ನು ನೋಡಲು ಬಿಡುವಿರಲಿಲ್ಲ" ಎಂದಿದ್ದಾರೆ.
ಈ ಮೊದಲು ಇಂತಹದೇ ಘಟನೆಯಲ್ಲಿ ಶಾರುಖ್‌ನರೊಂದಿಗೆ ಪೂರ್ವ ನಿರ್ಧಾರಿತವಾಗಿದ್ದ ಲಿಲ್ ಸ್ಟಾರ‌್ಸ್ ಅವಾರ್ಡ್‌ನಲ್ಲಿ ಭಾಗವಹಿಸಬೇಕಿದ್ದುದರಿಂದ ಸೈಫ್‌ರ ರಾಕ್ ಅನ್ ಕನ್ಸರ್ಟ್‌ನಲ್ಲಿ ಭಾಗವಹಿಸುವುದಕ್ಕೆ ಕರೀನಾರಿಗೆ ಸಾಧ್ಯವಾಗಿರಲಿಲ್ಲ.