ಇರಾನಿಯನ್ ಚಿತ್ರ ಚಿಲ್ಡ್ರನ್ ಅಫ್ ಹೆವನ್ ಚಿತ್ರದ ಹಿಂದಿ ರಿಮೇಕ್ನಲ್ಲಿ ಬಾಲಿವುಡ್ನ ಲಿಟ್ಲ್ ವಂಡರ್ ದರ್ಶಿಲ್ ಸಫಾರಿ ನಟಿಸುತ್ತಿದ್ದಾರೆ. ದರ್ಶಿಲ್ ಹಿಂದಿ ಅವತರಣಿಕೆ ಬಮ್ ಬಮ್ ಭೋಲೆ ಚಿತ್ರದಲ್ಲಿ ಮುಖ್ಯ ಪಾತ್ರಕ್ಕೆ ಆಯ್ಕೆಯಾಗಿದ್ದಾರೆ.
ತಾರೇ ಜಮೀನ್ ಪರ್ನಲ್ಲಿ ತಮ್ಮ ನಟನೆಯಿಂದ ಜಗತ್ತನ್ನೇ ಬೆರಗೊಳಿಸಿದ್ದ ದರ್ಶಿಲ್ ಹೊಸ ಚಿತ್ರದ ಚಿತ್ರೀಕರಣದ ಸಂದರ್ಭ ತಮ್ಮ ತೆರೆಯ ಮೇಲಿನ ತಂದೆ ಅತುಲ್ ಕುಲಕರ್ಣಿ ಅವರಿಗೆ ಡಾನ್ಸ್ ಸ್ಟೆಪ್ಗಳನ್ನು ಕಲಿಸಿಕೊಡುವ ಮೂಲಕ ಎಲ್ಲರ ಮೆಚ್ಚುಗೆಗೆ ಪಾತ್ರನಾಗಿದ್ದಾನೆ.
ಶೈಮಕ್ ದವರ್ರ ನೃತ್ಯತಂಡದ ಸದಸ್ಯನಾಗಿರುವ ದರ್ಶಿಲ್ಗೆ ಚಿತ್ರದಲ್ಲಿ ಅತುಲ್ರೊಂದಿಗೆ ಒಂದು ಡಾನ್ಸ್ ಐಟಂ ಇದೆ. ಈ ಹಾಡಿಗಾಗಿ ಚಿತ್ರತಂಡ ಊಟಿಯಲ್ಲಿ ಶೂಟಿಂಗ್ ನಿರತವಾಗಿತ್ತು ಆದರೆ 12ರ ಹರೆಯದ ಡಾನ್ಸ್ ಎಕ್ಸಪರ್ಟ್ ಜೊತೆಗೆ ಹೆಜ್ಜೆ ಹಾಕುವುದು ಅತುಲ್ರಿಗೆ ಸಾಧ್ಯವಾಗಲಿಲ್ಲ. ಆದ್ದರಿಂದ ದರ್ಶಿಲ್ ತಮ್ಮ ತೆರೆಮೇಲಿನ ತಂದೆಗೆ ನೃತ್ಯಪಾಠ ಹೇಳಿದರು, ಎರಡು ಮೂರು ಬಾರಿಯ ತಯಾರಿಯ ನಂತರ ಅತುಲ್ ಸರಿಯಾಗಿ ಹೆಜ್ಜೆ ಹಾಕಿದರು.
IFM
ದರ್ಶಿಲ್ ಸ್ಪೆಪ್ಗಳನ್ನು ಅಷ್ಟೊಂದು ಚೆನ್ನಾಗಿ ಕ್ಯಾಚ್ಅಪ್ ಮಾಡಿಕೊಳ್ಳುವುದು ಮತ್ತು ದಿಗ್ಗಜ ನಟನಿಗೂ ಹಾಗೆ ಮಾಡುವಂತೆ ಹೇಳಿಕೊಡುವಂತಹ ಅವರ ಸಾಮರ್ಥ್ಯ ಸಮಗ್ರ ಚಿತ್ರತಂಡದಿಂದ ಪ್ರಶಂಸೆಗೆ ಪಾತ್ರವಾಗಿದೆ.
ಹೈಜಾಕ್ ಪ್ರಸಿದ್ಧಿಯ ಕಾವೇರಿ ಜಾ, ದರ್ಶಿಲ್ರ ಪುಟ್ಟ ತಂಗಿಯ ಪಾತ್ರ ವಹಿಸುತ್ತಿದ್ದಾರೆ. ಈ ಚಿತ್ರ ಪುಟ್ಟ ಬಾಲಕನ ಅತ್ಮವಿಶ್ವಾಸ ಮತ್ತು ತಂಗಿಯೊಂದಿಗಿನ ಬಾಂಧವ್ಯಗಳನ್ನು ಬಿಂಬಿಸುತ್ತದೆ. ಒರಿಜಿನಲ್ ಇರಾನಿಯನ್ ಚಿತ್ರ ಕ್ಲಾಸಿಕ್ ಆಗಿದ್ದು ಆನೇಕ ಪ್ರಶಸ್ತಿಗಳನ್ನು ಸೆಳೆದುಕೊಂಡಿದೆ ಮತ್ತು ವಿಶ್ವಾದ್ಯಂತ ಪ್ರಶಂಸೆಗೆ ಪಾತ್ರವಾಗಿದೆ.