ತಮ್ಮ ಬಿಡುಗಡೆಗೆ ಸಿದ್ಧವಾಗಿರುವ ಚಿತ್ರ ಯುವರಾಜ್ ಪ್ರಚಾರ ಕಾರ್ಯವಾಗಿ ಸಂದರ್ಶನಗಳನ್ನು ನೀಡುತ್ತಿರುವ ಸಲ್ಮಾನ್ ಖಾನ್, ಒಂದು ಕಾಲದ ಉತ್ತಮ ಗೆಳೆಯ ಶಾರುಖ್ ಖಾನ್‌ರೊಂದಿಗಿನ ಕಲಹದ ಬಗೆಗೆ ಮಾತಾನಾಡಿದ್ದಾರೆ.
ಮಿಡ್ ಡೇ ದಿನಪತ್ರಿಕೆಗೆ ಅವರು ನೀಡಿದ ಸಂದರ್ಶನದ ಸಂದರ್ಭ ಅವರ ಮನದಲ್ಲಿದ್ದ ನೋವು ಮತ್ತೊಮ್ಮೆ ಗಮನಕ್ಕೆ ಬರುವಂತಿತ್ತು. ತಮ್ಮ ಪರಿವಾರ ಸದಸ್ಯರನ್ನು ಶಾರುಖ್‌ರ ಸಭೆ, ಸಮಾರಂಭಗಳಲ್ಲಿ ಭಾಗವಹಿಸದಿರುವಂತೆ ಯಾಕೆ ಹೇಳುತ್ತಿರುವಿರಿ ಎಂದು ಪ್ರಶ್ನಿಸಿದ್ದಕ್ಕೆ ಸಲ್ಮಾನ್, "ನಾನು ಅವರಿಗೆ ಆ ರೀತಿ ಹೇಳಿಲ್ಲ. ಅವರು ಶಾರುಖ್‌ರ ಕಾರ್ಯಕ್ರಮಗಳಲ್ಲಿ ಭಾಗಹಿಸಲು ಬಯಸುವುದಾದರೆ ಖಂಡಿತ ಅವರು ಭಾಗವಹಿಸಬಹುದು.
ಆದರೆ ನನ್ನ ಕುಂಟುಂಬದವರು ಅವರ ಕಾರ್ಯಕ್ರಮದಲ್ಲಿ ಭಾಗವಹಿಸಿದಲ್ಲಿ, ಅವರನ್ನು ಕರೆಯಲಾಯಿತು ಮತ್ತು ಸಲ್ಮಾನ್ ಪರವಾಗಿ ಅವರ ಕುಟುಂಬದವರೆಲ್ಲಾ ಇಲ್ಲಿಗೆ ಬಂದಿದ್ದಾರೆ ಆದ್ದರಿಂದ ಸಲ್ಮಾನರದ್ದೇ ತಪ್ಪು ಎಂದು ತಿಳಿದುಕೊಳ್ಳಲಾಗುತ್ತದೆ ಎಂದು ನಿಮಗನಿಸುವುದಿಲ್ಲವೇ" ಎಂದು ಸಲ್ಮಾನ್ ಮರುಪ್ರಶ್ನೆ ಹಾಕಿದ್ದಾರೆ.
ತಮ್ಮ ನಡುವಿನ ಭಿನ್ನಾಭಿಪ್ರಾಯಗಳ ಬಗ್ಗೆ ಶಾರುಖ್‌ರೇ ಮಾಧ್ಯಮದವರಿಗೆ ತಿಳಿಸಿದರು ಎಂದು ಸಲ್ಮಾನ್ ಹೇಳಿದರು. "ಅವರು ಪಾರ್ಟಿಯಿಂದ ಹೊರನಡೆದ ತಕ್ಷಣ ಮಾಧ್ಯಮದವರೊಂದಿಗೆ ಮಾತಾಡಲು ತೊಡಗಿದರು, ಘಟನೆಯ ಒಂದು ವಾರದವರೆಗೂ ನಾನು ಮಾತನಾಡಲಿಲ್ಲ. ಆದರೆ ಎಲ್ಲಾ ವಿಷಯಗಳಲ್ಲೂ ನನ್ನನ್ನೇ ನಡುವೆ ಸಿಲುಕಿಸಿ ತಪ್ಪಿತಸ್ಥನೆಂದು ಮಾಡಲು ಹೊರಟರು, ಆ ಸಂದರ್ಭ ನಾನು ಮಾತನಾಡಬೇಕಾಯಿತು.
ಅಗೌರವ ತೋರಿಸುವುದಕ್ಕೆ ಅಲ್ಲಿ ಯಾವ ಕಾರಣವೂ ಇಲ್ಲ. ಎಲ್ಲರ ನಡುವೆಯೂ ಭಿನ್ನಾಭಿಪ್ರಾಯಗಳುಂಟಾಗುತ್ತವೆ. ನಾನು ಒಮ್ಮೆಯಲ್ಲ, ಆನೇಕ ಬಾರಿ ಕಲಹಗಳಲ್ಲಿ ತೊಡಗಿದ್ದೇನೆ ಇದಕ್ಕೆ ಇಂತಹುದೇ ಎಂಬ ಕಾರಣಗಳಾಗಲಿ ಉದ್ದೇಶಗಳಾಗಿ ಇರಲಿಲ್ಲ. ನಮ್ಮ ನಡುವೆ ಭಿನ್ನಾಭಿಪ್ರಾಯಗಳಿದ್ದಲ್ಲಿ, ನಾವಿಬ್ಬರೂ ಒಟ್ಟಿಗೆ ಕುಳಿತು ಅದನ್ನು ಪರಿಹರಿಸಿಕೊಳ್ಳಬೇಕು ಆದರೆ ಅವರು ಇನ್ನೂ ಹೆಚ್ಚು ಗೊಂದಲ ಮಾಡಿ, ನನಗೆ ಅಗೌರವ ತೋರಿಸುತ್ತಾರೆ ಎಂದಾದಲ್ಲಿ, ಮತ್ತೆ ಒಂದಾಗುವ ವಿಷಯವನ್ನು ಮರೆತುಬಿಡಬೇಕಾಗುತ್ತದೆ" ಎಂದು ಕಣ್ಣು ಹನಿಗೂಡಿದ ಸಲ್ಮಾನ್ ಹೇಳಿದರು.
IFM
ಇನ್ನೂ ಮುಂದುವರಿದು ಮಾತನಾಡಿದ ಸಲ್ಮಾನ್, "ನಾನು ಯಾವಾಗಲೂ ಸರಿಯಾದದುದನ್ನೆ ಮಾಡಲು ಪ್ರಯತ್ನಿಸುತ್ತೇನೆ. ನಾನು ಸಹ ಮನುಷ್ಯ! ನಾನು ಮನುಷ್ಯನಾಗಿಯೇ ಇರಲು ಪ್ರಯತ್ನಿಸುತ್ತಿದ್ದೇನೆ. ನನ್ನಲ್ಲೂ ಆನೇಕ ನ್ಯೂನ್ಯತೆಗಳಿವೆ ಆದರೆ ನಾನು ಆ ಬಗ್ಗೆ ಎಚ್ಚರಿಕೆ ವಹಿಸಿದ್ದೇನೆ. ನಾನೇನಾದರು ತಪ್ಪು ಮಾಡಿದ್ದರೆ, ಕೂಡಲೇ ಕರೆ ಮಾಡಿ ಕ್ಷಮೆ ಕೇಳುವ ಧೈರ್ಯ ನನ್ನಲ್ಲಿದೆ. ನಾನೇನು ಹೇಳುತ್ತೇನೊ ಅದನ್ನೆ ಮಾಡುತ್ತೇನೆ. ನಾನು ಒಂದು ರೀತಿ ಹೇಳಿ ಇನ್ನೊಂದು ಮಾಡುವುದಿಲ್ಲ" ಎಂಬುದು ಅವರ ಬಿಚ್ಚು ನುಡಿ.
ಸಹನಟ ಸಂಜಯ್ ದತ್ ಅವರನ್ನು ಈ ವಿಷಯದಲ್ಲಿ ಮಧ್ಯವಸ್ಥಿಕೆ ವಹಿಸಲು ಕೇಳಿಕೊಳ್ಳಲಾಯಿತು ಆದರೆ ಸಲ್ಮಾನ್ ಇದನ್ನು ನಿರಾಕರಿಸಿದರು, ಈ ಬಗ್ಗೆ ಪ್ರಶ್ನಿಸಿದಾಗ "ಯಾರು ಮಧ್ಯಸ್ಥಿಕೆ ವಹಿಸುವುದು ನನಗೆ ಬೇಕಿಲ್ಲ. ಶಾರುಖ್ ಬಗ್ಗೆ ನನಗೇನು ಹೇಳಬೇಕಿತ್ತೊ ಅದನ್ನು ನೇರವಾಗಿ ಹೇಳಿದ್ದೇನೆ. ನಾಲ್ಕು ತಿಂಗಳ ನಂತರ ಈಗ ನನ್ನ ಬಗ್ಗೆ ಉತ್ತಮ ಮಾತುಗಳನ್ನು ಹೇಳುತ್ತಿರುವ ಶಾರುಖ್‌ರಿಗೆ ಈ ವಿಷಯ ಸೇರಿದೆ" ಎಂದು ಅವರು ಉತ್ತರಿಸಿದರು.
IFM
ಸಲ್ಮಾನ್‌ರ ಈ ಮೇಲಿನ ಹೇಳಿಕೆಗಳನ್ನು ಓದಿದ ಮೇಲೆ ಸಲ್ಮಾನ್‌ರಿಗೆ ಸ್ನೇಹಿತರೊಬ್ಬರಿಂದ ನೋವುಂಟಾಗಿದೇ ಎಂಬುದು ನಮ್ಮ ಅರಿವಿಗೆ ಬರುತ್ತದೆ.
ಅದೇನೇ ಇದ್ದರೂ ಬಾಲಿವುಡ್‌ನಲ್ಲಿ ದಿಗ್ಗಜರಾದ ಈ ಖಾನ್ ದ್ವಯರು ಮತ್ತೆ ಒಂದಾಗಿ ಸ್ನೇಹಿತರಾಗಲಿ ಎಂದು ನಾವು ಹಾರೈಸಬಹುದಷ್ಟೇ...