ನವದೆಹಲಿ: ಬಿಗ್ ಬಾಸ್ ಕಾರ್ಯಕ್ರಮದ ಇನ್‌ಮೇಟ್(ನಿವಾಸಿ) ಆಗಿರುವ ಸೆಲೆಬ್ರೆಟಿ ರಾಹುಲ್ ಮಹಾಜನ್ ನಿಯಮ ಮುರಿದದ್ದಕ್ಕಾಗಿ ಕಾರ್ಯಕ್ರಮದಿಂದ ಹೊರಬಿದ್ದಿದ್ದಾರೆ.
ಬಿಜಿಪಿ ಧುರೀಣ ದಿವಂಗತ ಪ್ರಮೋದ್ ಮಹಾಜನ್ ಅವರ ಪುತ್ರರಾಗಿರುವ ರಾಹುಲ್ ಅತ್ಯಂತ ಖ್ಯಾತ ಮತ್ತು ವಿವಾದಿತ ಬಿಗ್ ಬಾಸ್ ಮನೆಯ ನಿವಾಸಿಯಾಗಿದ್ದರು, ನಿಯಮಾವಳಿಯನ್ನು ಮುರಿದದ್ದಕ್ಕಾಗಿ ಕ್ಷಮೆ ಕೇಳುಲು ಮಹಾಜನ್ ನಿರಾಕರಿಸಿದಾಗ ಅವರನ್ನು ಕಾರ್ಯಕ್ರಮವನ್ನು ತೊರೆಯುವಂತೆ ಹೇಳಲಾಯಿತು.
ರಾಹುಲ್ ಇತರ ಇನ್‌ಮೇಟ್‌ಗಳಾದ ರಾಜ ಚೌಧರಿ, ಜುಲ್ಫಿ ಸಾಯೇದ್ ಮತ್ತು ಅಶುತೋಷ್ ಕೌಶಿಕ್ ಅವರೊಂದಿಗೆ ಬಿಗ್ ಬಾಸ್ ಮನೆಯಿಂದ ಹೊರ ಹೋಗಲು ಗೋಡೆ ಹಾರಿದ್ದರು.
ಕಾರ್ಯಕ್ರಮದ ನಿಯಮದಂತೆ, ಯಾವುದೇ ಇನ್‌ಮೇಟ್ ಕಾರ್ಯಕ್ರಮ ಕೊನೆಗೊಳ್ಳುವ ಮೊದಲು ಅಥವಾ ಸ್ಪರ್ಧೆಯಿಂದ ವೋಟ್ ಔಟ್ ಆಗುವ ಮೊದಲು ಬಿಗ್ ಬಾಸ್ ಮನೆಯನ್ನು ಬಿಟ್ಟು ಹೊರಹೋಗುವಂತಿಲ್ಲ.
"ರಾಹುಲ್ ನಾನು ಕಾರ್ಯಕ್ರಮವನ್ನು ತೊರೆಯುತ್ತೇನೆ ಆದರೆ ಕ್ಷಮೆ ಯಾಚಿಸುವುದಿಲ್ಲ" ಎಂದು ಹೇಳಿದ್ದಾಗಿ ವರದಿಯಾಗಿದೆ.
ಬಿಗ್ ಬಾಸ್ ಮನೆಯಲ್ಲಿ ತಯಾರಿಸಲಾದ ಆಹಾರದಿಂದ ಬೇಸರಗೊಂಡು, ಹೊರಗಡೆ ತಿನ್ನುವ ಕಾರಣಕ್ಕಾಗಿ ನಾಲ್ವರು ಇನ್‌ಮೇಟ್‌ಗಳು ಶನಿವಾರದಂದು ತಾವು 90ದಿನಗಳಿಂದ ತಂಗಿದ್ದ ಲೊನಾವಾಲ ಮನೆಯ ಗೋಡೆಯನ್ನು ಹಾರಿದ್ದರು.
ಕೂಡಲೇ ಕಾರ್ಯನಿರತರಾದ ಭದ್ರತಾ ಸಿಬ್ಬಂದಿ ಅವರನ್ನು ಬಿಗ್ ಬಾಸ್ ಮನೆಗೆ ಮರಳಿಸಿದರು. ಗೇಟ್‌ನ ಬಳಿ ಕೆಲವು ನಿಮಿಷಗಳ ಕಾಲ ಸರಿದಾಡಿ ನಂತರ ನಾಲ್ವರು ಒಳಕ್ಕೆ ಹೋದರು.
ನಿರ್ಮಾಣ ಸಂಸ್ಥೆ ಎಂಡೆಮೋಲ್ ಸ್ಪರ್ಧಿಗಳ ವಿರುದ್ಧ ಕ್ರಮ ಕೈಗೊಳ್ಳುವುದಾಗಿ ತಿಳಿಸಿದೆ.
ಮಂಗಳವಾರ ರಾತ್ರಿ ರಾಹುಲ್ ರಾದ್ಧಾಂತ ಪ್ರಕರಣ ಪ್ರಸಾರವಾಗಲಿದೆ.