'ಕಣ್ಣುಗಳು ಆತ್ಮವನ್ನು ಪ್ರತಿಫಲಿಸುತ್ತವೆ' ಎಂಬ ಸೂಕ್ತಿ ಇಂದಿನ ಬರ್ತಡೇ ಬಾಯ್ ತುಷಾರ್ ಕಪೂರ್‌ಗೆ ಅನ್ವರ್ಥಕ. ಸಂಖ್ಯಾಶಾಸ್ತ್ರವೆಂಬ ವೈರಸ್ ಅನ್ನು ಬಾಲಿವುಡ್‌ನಲ್ಲಿ ಹಬ್ಬಿದ ವ್ಯಕ್ತಿ ತುಷಾರ್ ಎಂದೆನ್ನಬಹುದು. ತುಷಾರ್ ಸೂಪರ್ ಸ್ಟಾರ್ ಜಿತೆಂದರ್ ಮತ್ತು ಶೋಭಾ ಕಪೂರ್ ಪುತ್ರರಾಗಿದ್ದು, ಎಕ್ತಾ ಕಪೂರ್ ತಮ್ಮ. ಇವರು ಚಿನ್ನದ ಚಮಚ ಬಾಯಲ್ಲಿಟ್ಟುಕೊಂಡೇ ಹುಟ್ಟಿದವರು, ಆದರೆ ಯುವ ಪ್ರತಿಭೆ ತುಷಾರ್ ತಮ್ಮದೇ ಆದ ಸ್ವಂತಿಕೆಯಲ್ಲಿ ಖ್ಯಾತಿ ದಕ್ಕಿಸಿಕೊಳ್ಳಲು ಚಿತ್ರರಂಗಕ್ಕೆ ಬಂದವರು. ತುಷಾರ್ ಜನಿಸಿದ್ದು 1976ರ ನವೆಂಬರ್ 20ರಂದು.
ಕರೀನಾ ಕಪೂರ್ ಅವರೆದುರು 'ಮುಜೇ ಕುಚ್ ಕೆಹನಾ ಹೈ'(2001) ಚಿತ್ರದ ಮೂಲಕ ತುಷಾರ್ ಬಾಲಿವುಡ್‌ಗೆ ಕಾಲಿರಿಸಿದರು. ಈ ಚಿತ್ರ ಬಾಕ್ಸ್ ಅಫೀಸಿನಲ್ಲಿ ಗೆದ್ದಿತ್ತು ಮತ್ತು ಫಿಲ್ಮಫೇರ್‌ನಲ್ಲಿ ತುಷಾರ್‌ಗೆ ಬೆಸ್ಟ್ ಡಿಬಟ್ ಪ್ರಶಸ್ತಿಯೂ ದಕ್ಕಿತು. ಮುಂದಿನ ಎರಡು ಚಿತ್ರಗಳಾದ 'ಕುಚ್ ತೊ ಹೈ'(2003) ಮತ್ತು 'ಗಾಯಬ್'(2004) ಬಾಕ್ಸ್ ಅಪೀಸಿನಲ್ಲಿ ಯಶಸ್ವಿಯೆನಿಸಲಿಲ್ಲವಾದರು ತುಷಾರ್ ನಟನೆ ಗುರುತಿಸಲ್ಪಟ್ಟಿತು.
ತುಷಾರ್, ಲೆಜೆಂಡ್ ಅಮಿತಾಬ್ ಬಚ್ಚನ್‌ರೊಂದಿಗೆ ನಟಿಸಿದ ಬಹುತಾರಾಗಣದ ಚಿತ್ರದ 'ಖಾಖಿ'(2004) ತುಷಾರ್ ಕೆರಿಯರ್‌ನ ಅತ್ಯಂತ ಯಶಸ್ವಿ ಚಿತ್ರವೆನಿಸಿದೆ. ತುಷಾರ್‌ರ ಇನ್ನೊಂದು ಯಶಸ್ವಿ ಚಿತ್ರ 'ಕ್ಯಾ ಕೂಲ್ ಹೈ ಹಮ್'(2005). 2006ರಲ್ಲಿ 'ಗೋಲ್‌ಮಾಲ್' ಚಿತ್ರದಲ್ಲಿ ತುಷಾರ್ ಮೂಕ ಪಾತ್ರ ವಹಿಸಿದ್ದು, ಇದು ಹಿಟ್ ಚಿತ್ರವಾಗಿದೆ.
IFM
2007ರಲ್ಲಿ ತುಷಾರ್ ನಟಿಸಿದ 'ಕ್ಯಾ ಲವ್ ಸ್ಟೋರಿ' ಮತ್ತು 'ಗುಡ್ ಬಾಯ್ ಬ್ಯಾಡ್ ಬಾಯ್' ಚಿತ್ರಗಳೆರಡು ಸೋತವು. ನಂತರದ ಬಹುತಾರಾಗಣ ಚಿತ್ರ 'ಶೂಟ್ ಎಟ್ ಲೋಕಾಂಡ್‌ವಾಲ' ಗೆದ್ದಿತು. ರಿಯಲ್ ಲೈಫ್ ಗ್ಯಾಂಗ್‌ಸ್ಟರ್ ದಿಲೀಪ್ ಬೂವ ಪಾತ್ರ ವಹಿಸಿದ್ದ ತುಷಾರ್ ನಟನೆ ಮೆಚ್ಚುಗೆಗೆ ಪಾತ್ರವಾಗಿತ್ತು. ಇದರ ನಂತರ 'ಅಗರ್' ಚಿತ್ರ ಬಾಕ್ಸ್ ಅಫೀಸ್‌ನಲ್ಲಿ ಸೋತು ನೆಲಕಚ್ಚಿತ್ತು. ಮತ್ತೆ ಬಹುತಾರಾಗಣದ ಚಿತ್ರ 'ಧೋಲ್' ಯಶಸ್ವಿಯೆನಿಸಿತು.
2008ರಲ್ಲಿ ಅವರು ನಟಿಸಿದ 'ಒನ್ ಟೂ ತ್ರಿ' ತಕ್ಕ ಮಟ್ಟಿಗೆ ಯಶಸ್ಸನ್ನು ಗಳಿಸಿತು. 'ಗೋಲ್‌ಮಾಲ್' ಚಿತ್ರದ ಉತ್ತಾರಾರ್ಧ 'ಗೋಲ್ ಮಾಲ್ ರಿಟರ್ನ್ಸ್' ಮತ್ತೆ ವಿಜಯಪಥದಲ್ಲಿ ಸಾಗಿದೆ.
ಬಾಲಿವುಡ್‌ನಲ್ಲಿ ತುಷಾರ್ ಪ್ರಭಾವ ಎಷ್ಟರ ಮಟ್ಟಿಗಿದೆಯೆಂದರೆ ಗೋಲ್‌ಮಾಲ್ ಮತ್ತು ಗೋಲ್‌ಮಾಲ್ ರಿಟರ್ನ್ಸ್ ಚಿತ್ರಗಳು ತುಷಾರ್‌ರಿಲ್ಲದೇ ಇದ್ದಲ್ಲಿ ಅಪೂರ್ಣವೆನಿಸಿಬಿಡುತ್ತಿದ್ದವು. ಇಂತಹ ಗುಡ್ ಬಾಯ್ ತುಷಾರ್‌ಗೆ ಹುಟ್ಟು ಹಬ್ಬದ ಶುಭಾಶಯಗಳು.