ಆಶಾ ಭೊಂಸ್ಲೆ ಅವರ ಇತ್ತೀಚಿನ ಅತ್ಯಂತ ರೊಮ್ಯಾಂಟಿಕ್ ಅಲ್ಬಂ 'ತುಮ್ ಜೊ ಮಿಲೇ'. ಸೌಂದರ್ಯದಾಗರವಾಗಿರುವ ಮಲ್ಶೇಜ್ ಘಾಟ್ಸ್ ಪ್ರಕೃತಿಯ ಮಡಿಲು ಆಶಾರಲ್ಲಿ ನವಯೌವನದ ಯುರುಪು ತುಂಬಿದೆ. ನಾನು ಅವರಷ್ಟು ಧನಾತ್ಮಕವಾಗಿ ಯೋಚಿಸುವ ವ್ಯಕ್ತಿಗಳನ್ನು ನೋಡಿಯೇ ಇಲ್ಲ ಮತ್ತು ಅವರ ಉತ್ಸಾಹದ ಮಟ್ಟ ಅದ್ಭುತ ಎನ್ನುತ್ತಾರೆ ಅಲ್ಬನಲ್ಲಿ ಆಶಾರೊಂದಿಗೆ ಕಾಣಿಸಿಕೊಂಡ ನಿರ್ದೇಶಕ ಸುಮಿತ್ ದತ್. 75ರ ಹರೆಯದಲ್ಲಿರುವ ಆಶಾಜಿಯ ಚೈತನ್ಯ ಮಟ್ಟ ಹದಿಹರೆಯದವರನ್ನೂ ನಾಚಿಸುವಂತಹುದು.