ಇತ್ತೀಚೆಗೆ ಸಲ್ಮಾನ್ ಖಾನ್ ಮಾಧುರಿ ದೀಕ್ಷಿತ್ ತನ್ನ ಇಷ್ಟದ ನಟಿ ಎಂದು ಹೇಳಿದ್ದು ನೆನಪುಂಟಾ? ಇದೀಗ ಸಲ್ಲು ಗೆಳತಿ ಕತ್ರಿನಾ ಕೈಫ್ ಕೂಡ ಅಪ್ರತಿಮ ಸುಂದರಿ ಮಾಧುರಿ ದೀಕ್ಷಿತ್ ತನ್ನ ಆದರ್ಶ ಹಾಗ ಸ್ಪೂರ್ತಿ ಎಂದು ಸಂದರ್ಶನ ಒಂದರಲ್ಲಿ ಹೇಳಿದ್ದಾರೆ.
ಇಷ್ಟು ಮಾತ್ರವಲ್ಲ ಪ್ರೀತಿ ಜಿಂಟಾ ಕತ್ರಿನಾರ ಆಪ್ತಗೆಳತಿಯರಲ್ಲಿ ಒಬ್ಬರಂತೆ. ಇದನ್ನೇ ಸಲ್ಲೂ ಸಹ ಹೇಳಿದ್ದರು.
ಕತ್ರಿನಾ ಕೈಫ್ ಬರ್ತ್‌ಡೇ ಪಾರ್ಟಿಯಲ್ಲಿ ಸಲ್ಮಾನ್ ವರ್ತನೆ ಕುರಿತು ಕೇಳಲಾದ ಪ್ರಶ್ನೆಗೆ ದೊಡ್ಡ ನಗುವೇ ಈಕೆಯ ಉತ್ತರ.
ಸಲ್ಮಾನ್‌ನನ್ನು ಯಾರೂ ತಡೆಯಲಾರರು ಮತ್ತು ನಿಯಂತ್ರಿಸಲಾರರು. ನಾವ್ಯಾರನ್ನಾದರೂ ಇಷ್ಟಪಟ್ಟಲ್ಲಿ ಅವರು ಇರುವ ಹಾಗೆ ಅವರನ್ನು ಸ್ವೀಕರಿಸುತ್ತೇವೆ. ಹೀಗಿರುವಾಗ ನಿಯಂತ್ರಣದ ಅವಶ್ಯಕತೆ ಇದೆಯೇ ಎಂದು ಕತ್ರಿನಾ ನಗುಚೆಲ್ಲುತ್ತಾರೆ.