ಡಿಯೋಲ್ ಕುಟುಂಬದ ನಕ್ಷತ್ರಗಳು ಇತ್ತೀಚಿಗೆ ಮೋಡದ ಮರೆಯಲ್ಲಿದ್ದರೂ ಅವರ ಚಿತ್ರಗಳು ತೆರೆ ಮರೆಗೆ ಸರಿದಿಲ್ಲ. ವಿಜೇತ ಬ್ಯಾನರ್ನಡಿಯಲ್ಲಿ ಅವರೀಗ ಚಿಯರ್ಸ್ ಎಂಬ ಚಿತ್ರ ನಿರ್ಮಿಸುವುದಾಗಿ ಘೋಷಿಸಿದ್ದಾರೆ.
ಈ ಚಿತ್ರದಲ್ಲಿ ಧರ್ಮೇಂದ್ರ ತಮ್ಮ ಸಣ್ಣ ಮಗ ಬಾಬ್ಬಿಯವರೊಂದಿಗೆ ಕಾಣಿಸಿಕೊಳ್ಳಲಿದ್ದಾರೆ. ಈ ಚಿತ್ರದಲ್ಲಿ ತಂದೆ ಮಗನ ಸಂಬಂಧವನ್ನು ಹೊಸ ಅಯಾಮದಲ್ಲಿ ಬಿಚ್ಚಿಡಲಾಗುತ್ತದಂತೆ. ಈ ಸಂಬಂಧ ಅಪ್ಪ-ಮಗನಿಗಿಂತ ಹೆಚ್ಚಾಗಿ ಗೆಳೆಯರಂತಿರುತ್ತದೆ.
ನಿಜ ಜೀವನದಲ್ಲೂ ಧರ್ಮೇಂದ್ರರಿಗೆ ಸನ್ನಿಗಿಂತಲೂ ಹೆಚ್ಚಾಗಿ ಬಾಬ್ಬಿಯೊಂದಿಗೆ ಹೆಚ್ಚು ಹೊಂದಾಣಿಕೆ ಇದೆ ಮತ್ತು ಇವರಿಬ್ಬರೂ ಗೆಳೆಯರಂತೆಯೇ ಇರುವರಂತೆ. ಈ ಚಿತ್ರದ ನಿರ್ದೇಶನವನ್ನು ಸಂಗೀತ ಶಿವನ್ ವಹಿಸಿಕೊಳ್ಳಲಿದ್ದಾರೆ. ಇವರು ಕ್ಯಾ ಕೂಲ್ ಹೈ ಮತ್ತು ಅಪ್ನಾ ಸಪ್ನಾ ಮನಿ ಮನಿಯಂತಹ ಹಿಟ್ ಚಿತ್ರಗಳನ್ನು ನೀಡಿದ್ದಾರೆ.
ಈ ಚಿತ್ರದಲ್ಲೂ ಸಹ ಹಾಸ್ಯ ಸಮೃದ್ಧವಾಗಿರುತ್ತದೆ ಎಂದು ಊಹಿಸಲಾಗುತ್ತಿದೆ. ಚಿತ್ರಕ್ಕೆ ಇತರ ಕಲಾವಿದರನ್ನು ಇನ್ನಷ್ಟೇ ಆರಿಸಬೇಕಿದೆ.