ದೋಸ್ತಾನ ಚಿತ್ರದಲ್ಲಿ ಅಭಿಷೇಕ್ ಬಚ್ಚನ್, ಜಾನ್ ಅಬ್ರಹಾಂ ಮತ್ತು ಪ್ರಿಯಾಂಕ ಚೋಪ್ರಾ ಅವರು ತೊಟ್ಟಿರುವ ಬಟ್ಟೆಗಳನ್ನು ಹರಾಜು ಹಾಕಲಾಗುತ್ತದಂತೆ. ಈ ಹರಾಜಿನಿಂದ ದೊರೆತಂತಹ ಹಣವನ್ನು ಅವಶ್ಯಕತೆಯಲ್ಲಿರುವ ಯಾವುದಾದರು ಸಂಸ್ಥೆಗೆ ನೀಡಲಾಗುತ್ತದೆ.
ಪ್ರಿಯಾಂಕ ಚೋಪ್ರಾ ಅವರು ತೊಟ್ಟ ಸ್ವಿಮ್ಮಿಂಗ್ ಸೂಟ್ ಮತ್ತು ಜಾನ್ ಅಬ್ರಹಾಂರ ಬಟ್ಟೆಗಳನ್ನು ಜನರು ಇಷ್ಟಪಟ್ಟಿದ್ದಾರೆ. ಈ ವಿಷಯ ಚಿತ್ರದ ನಿರ್ದೇಶಕ ತರುಣ್ ಮನುಸುಕಾನಿ ಅವರಿಗೆ ತಿಳಿದಾಗ ಅವರು ಹರಾಜಿನ ಬಗ್ಗೆ ಯೋಚಿಸಿದ್ದಾರೆ.
ಹರಾಜು ಹಾಕಲು ಬಹಳಷ್ಟು ಬಟ್ಟೆಯನ್ನೇನು ಈ ನಟರು ತೊಟ್ಟಿರಲಿಲ್ಲ ಎಂಬುದು ಬೇರೆ ಮಾತು, ಆದರೆ ಈ ತುಂಡುಬಟ್ಟೆಗಳಿಂದಲೂ ಸಾಕಷ್ಟು ದುಡ್ಡು ಮಾಡಿಕೊಳ್ಳಬಹುದು ಎಂಬುದು ತರುಣ್ ಮತ್ತು ಧರ್ಮ ಫ್ರೋಡಕ್ಷನ್ ಅವರ ನಂಬಿಕೆ. ಈ ಬಗ್ಗೆ ಶೀಘ್ರದಲ್ಲೇ ಪ್ರಕಟಣೆ ಮಾಡಲಾಗುವುದು.