'ಲಮ್ಹಾ'ಚಿತ್ರದ ಚಿತ್ರೀಕರಣ ಕಾಶ್ಮೀರದಲ್ಲಿ ನಡೆಯುತ್ತಿದ್ದು, ನಾಯಕಿ ಬಿಪಾಶ ಬಸು ಇದ್ದಕಿದ್ದಂತೆ ಚಿತ್ರೀಕರಣ ತೊರೆದು ಮುಂಬಯಿಗೆ ಆಗಮಿಸಿರುವ ಬಗ್ಗೆ ನಿರ್ಮಾಪಕ ಬಂಟಿ ವಾಲಿಯಾ ಅವರು ಬಹಳ ಸಿಟ್ಟಾಗಿದ್ದಾರೆಂಬ ಮಾತುಗಳು ಕೇಳಿಬರುತ್ತಿವೆ.
ಈ ಚಿತ್ರಕ್ಕಾಗಿ ಜನವರಿಯಲ್ಲಿ ಮತ್ತೊಮ್ಮೆ ಕಾಶ್ಮೀರದಲ್ಲಿ ಚಿತ್ರೀಕರಣ ನಡೆಯಲಿದೆ. ಸಧ್ಯದವರೆಗೆ ಬಿಪಾಶ ಕಾಶ್ಮೀರಕ್ಕೆ ತೆರಳುತ್ತಾರೆಯೇ ಎಂಬುದನ್ನು ತಿಳಿಸಿಲ್ಲ. ಆದರೆ ಅವರು ಮತ್ತೊಮ್ಮೆ ಕಾಶ್ಮೀರಕ್ಕೆ ತೆರಳಲು ಇಚ್ಛಿಸದಿರಬಹುದು ಎಂದು ಹೇಳಲಾಗುತ್ತಿದೆ.
ಬಿಪಾಶಾರ ಈ ನಿಲುವನ್ನು ಅಧರಿಸಿ ಲಮ್ಹಾ ಚಿತ್ರದಿಂದ ಅವರನ್ನು ತೆಗೆದು ಹಾಕಲಾಗುವುದು ಮತ್ತು ಹೊಸ ನಾಯಕಿಗಾಗಿ ಹುಡುಕಾಟ ಆರಂಭವಾಗಿದೆ ಎಂಬ ಮಾತು ಬಾಲಿವುಡ್ ವಲಯದಲ್ಲಿ ಕೇಳಿಸತೊಡಗಿದೆ.
ಬಿಪಾಶರ ಜಾಗಕ್ಕೆ ಬೇರೆ ನಾಯಕಿಯರನ್ನು ಆರಿಸುವುದಾದಲ್ಲಿ, ಬಿಪಾಶ ನಟಿಸಿದ್ದಂತಹ ದೃಶ್ಯಗಳಿಗೆ ಮರುಚಿತ್ರೀಕರಣ ಮಾಡಬೇಕಾಗುವುದರಿಂದ ನಿರ್ಮಾಪಕರು ನಷ್ಟವನ್ನು ಭರಿಸಬೇಕಾಗುತ್ತದೆ. ದಿಟ್ಟ ಹೆಜ್ಜೆ ಇಡುವ ಮುನ್ನ ನಿರ್ದೇಶಕ ರಾಹುಲ್ ಬಿಪಾಶರೊಂದಿಗೆ ಮಾತನಾಡಿ ಅವರನ್ನು ಒಪ್ಪಿಸುವ ಪ್ರಯತ್ನ ಮಾಡಲಿದ್ದಾರೆ.
ಕಾಶ್ಮೀರದಲ್ಲಿ ತಮ್ಮ ಸುರಕ್ಷತೆಯ ಬಗ್ಗೆ ಬಿಪಾಶ ಬಹಳ ಚಿಂತಿತರಾಗಿದ್ದರು ಮತ್ತು ಚಿತ್ರೀಕರಣವನ್ನು ಅರ್ಧದಲ್ಲೇ ಬಿಟ್ಟು ಮುಂಬಯಿಗೆ ಮರಳಿದ್ದರು. ಅವರಿಗೆ ಫೋನ್‌ನಲ್ಲಿ ಬೆದರಿಕೆ ಹಾಕಲಾಗಿತ್ತು ಮತ್ತು ಒರ್ವ ಭದ್ರತಾ ಸಿಬ್ಬಂದಿ ಬಿಪಾಶರ ಮುಂದೆ ವಿವಾಹ ಪ್ರಸ್ತಾವನೆಯನ್ನಿಟ್ಟಿದ್ದ ಎಂದು ಹೇಳಲಾಗುತ್ತಿದೆ ಈ ಎಲ್ಲಾ ಘಟನೆಗಳಿಂದ ಬಿಪಾಶ ಬಹಳ ಹೆದರಿದ್ದಾರೆ.