ಹೋಟೆಲ್ ಓಬೆರಾಯ್ ಮೇಲೆ ಉಗ್ರರು ದಾಳಿ ನಡೆಸುವ ಕೆಲವೇ ಸಮಯದ ಮುನ್ನ ನಟಿ ಭೈರವಿ ಗೋಸ್ವಾಮಿ ಹೋಟೆಲ್ ಬಿಟ್ಟು ತೆರಳಿದ್ದರು.
ಭೈರವಿ ತಮ್ಮ ಪ್ರಿಯಕರ ಮತ್ತು ಕೆಲ ಗೆಳೆಯರೊಂದಿಗೆ ಹೋಟೆಲ್ ಓಬೆರಾಯ್‌ಗೆ ಡಿನ್ನರ್‌ಗೆಂದು ತೆರಳಿದ್ದರು. ಅಲ್ಲಿ ಅವರಿಗೆ ಅರೋಗ್ಯದ ತೊಂದರೆ ಕಾಣಿಸಿಕೊಂಡಿದ್ದರಿಂದ ಮನೆಗೆ ತೆರಳುವ ನಿರ್ಧಾರ ಕೈಗೊಂಡರು. ಮನೆ ಮುಟ್ಟಿದ ಭೈರವಿ, ಹೋಟೆಲ್‌ನಲ್ಲಿದ್ದ ತಮ್ಮ ಪ್ರಿಯಕರನಿಗೆ ಫೋನಾಯಿಸಿ ತಮ್ಮನ್ನು ಮನೆಗೆ ಬಿಡಲು ಯಾಕೆ ಬರಲಿಲ್ಲವೆಂದು ಜಗಳವಾಡಿದರು. ಈ ಜಗಳದಿಂದಾಗಿ ಭೌರವಿ ಅವರ ಪ್ರಿಯಕರರ ಮೂಡ್ ಕೆಟ್ಟುಹೋಗಿ ಅವರು ಹೋಟೆಲ್ ಬಿಟ್ಟು ಹೊರಬಂದರು.
ಕೆಲವೇ ನಿಮಿಷಗಳಲ್ಲಿ ಹೋಟೆಲ್ ಮೇಲೆ ಉಗ್ರರ ದಾಳಿ ನಡೆಯಿತು ಮತ್ತು ಭೈರವಿಯವರ ಎಲ್ಲಾ ಸ್ನೇಹತರು ಮೃತರಾದರು. ಭೈರವಿಯವರ ಕೆಲ ಪರಿಚಿತರು ಹೋಟೆಲ್ ತಾಜ್‌ನಲ್ಲೂ ಮೃತರಾದರು. ಭೈರವಿಯವರಿಗೀಗ ಇಷ್ಟೊಂದು ಜನ ಪರಿಚಿತರನ್ನು ಒಂದೇ ಬಾರಿಗೆ ಕಳೆದುಕೊಂಡ ದುಖವನ್ನು ಭರಿಸಲಾಗುತ್ತಿಲ್ಲ.