ಆಯೇಶಾ ಟಾಕೀಯಾ ಎಷ್ಟೇ ಪ್ರಯತ್ನ ಪಟ್ಟರೂ ತಮ್ಮ ತೂಕವನ್ನು ನಿಯಂತ್ರಣದಲ್ಲಿರಿಸುವುದು ಅವರಿಂದ ಸಾಧ್ಯವಾಗುತ್ತಿಲ್ಲ. ನಿರ್ಮಾಪಕರಿಗೆ, ಇಷ್ಟು ದಪ್ಪಗಿನ ನಾಯಕಿಯನ್ನು ಜನ ಇಷ್ಟಪಡುತ್ತಾರೆಯೇ ಎಂಬ ಸಂಶಯವಿರುವುದರಿಂದ ಆಯೇಶಾರಿಗೆ ಅಭಿನಯಕ್ಕೆ ಚಿತ್ರಗಳೂ ಸಿಗುತ್ತಿಲ್ಲ.
ಆಯೇಶಾ ಪ್ರಸ್ತುತ 'ವಾಂಟೆಡ್ ಡೆಡ್ ಆರ್ ಅಲೈವ್' ಎಂಬ ಹೆಸರಿನ ಮಹತ್ವಪೂರ್ಣ ಚಿತ್ರ ಮಾಡುತ್ತಿದ್ದಾರೆ. ಚಿತ್ರದಲ್ಲಿ ಸಲ್ಮಾನ್ ಖಾನ್ ನಾಯಕರಾಗಿ ನಟಿಸುತ್ತಿದ್ದಾರೆ. ಬೋನಿ ಕಪೂರ್ ಈ ಚಿತ್ರಕ್ಕಾಗಿ ಆನೇಕ ನಾಯಕಿಯರ ಬಗ್ಗೆ ಯೋಚಿಸಿದ್ದರು, ಆದರೆ ಕೊನೆಗೆ ಅಯೇಶಾರನ್ನು ಆರಿಸಿದ್ದಾರೆ.
ಮೂಲಗಳ ಪ್ರಕಾರ ಈ ಚಿತ್ರದ ಕೆಲವು ದೃಶ್ಯಗಳನ್ನು ವೀಕ್ಷಿಸಿದ ಸಲ್ಮಾನ್ ಡುಮ್ಮಗಿನ ಆಯೇಶಾರನ್ನು ನೋಡಿ ದಂಗಾಗಿದ್ದಾರಂತೆ. ಆಯೇಶಾರ ಈ ಲುಕ್‌ನ ಪರಿಣಾಮ ಚಿತ್ರದ ಮೇಲಾಗಬಹುದು ಎಂದು ಸಲ್ಮಾನ್‌ಗೆ ಅನಿಸಿದೆ.
ಸಲ್ಮಾನ್ ಈ ದೃಶ್ಯಗಳ ಮರುಚಿತ್ರೀಕರಣ ಮಾಡಬೇಕೆಂದು ನಿರ್ಮಾಪಕರಿಗೆ ಸೂಚಿಸಿದ್ದಾರಂತೆ, ಆದರೆ ಈ ಮೊದಲು ಆಯೇಶಾ ತಮ್ಮ ತೂಕ ಇಳಿಸಿಕೊಳ್ಳಬೇಕಾಗುತ್ತದೆ.