ಸುದ್ದಿ/ಗಾಸಿಪ್ | ಸಿನಿಮಾ ಮುನ್ನೋಟ | ಸಿನಿಮಾ ವಿಮರ್ಶೆ | ತಾರಾ ಪರಿಚಯ | ಸಂದರ್ಶನ | ಹಾಲಿವುಡ್ | ಕಿರುತೆರೆ
ಮುಖ್ಯ ಪುಟ ಮನರಂಜನೆ » ಬಾಲಿವುಡ್‌ » ಸುದ್ದಿ/ಗಾಸಿಪ್ » ಮುಂಬಯಿ ದಾಳಿ ಬಗ್ಗೆ ಬಾಲಿವುಡ್‌ನ ಆತಂಕದ ಧ್ವನಿ...
ಸುದ್ದಿ/ಗಾಸಿಪ್
Feedback Print Bookmark and Share
 
ಮುಂಬಯಿಯ ಮೇಲಿನ ಉಗ್ರರ ದಾಳಿ ಬಾಲಿವುಡ್ ಮಂದಿಯನ್ನೂ ನಡುಗಿಸಿಬಿಟ್ಟಿದೆ, ಈ ಬಗ್ಗೆ ಬಾಲಿವುಡ್ ಸ್ಟಾರ್‌ಗಳೂ ವಿಚಾರಮಗ್ನರಾಗಿದ್ದಾರೆ. ಅವರಲ್ಲಿ ಕೆಲವರ ಭಾವಭಿವ್ಯಕ್ತ ಹೀಗಿದೆ;

IFM
ಸಲೀನಾ ಜೇಟ್ಲಿ: ನಾನು ಆ ದಿನ ಓಬೆರಾಯ್ ಹೋಟೆಲ್‌ಗೆ ಡಿನ್ನರ್ ಸ್ವೀಕರಿಸಲು ತೆರಳಲು ಯೋಚಿಸಿದ್ದೆ ಆದರೆ ಇದ್ದಕ್ಕಿದ್ದಂತೆ ಯೋಚನೆ ಬದಲಿಸಿ ನನ್ನ ತಂದೆಯ ಸ್ನೇಹಿತರೊಂದಿಗೆ ವರ್ಲಿಯಲ್ಲಿರುವ ಹೋಟೆಲ್‌ಗೆ ತೆರಳಿದೆ. ಸ್ವಲ್ಪ ಸಮಯದ ನಂತರ ಕೆಲವು ಹೋಟೆಲ್‌ಗಳ ಮೇಲೆ ಭಯೋತ್ಪಾದಕರು ದಾಳಿ ನಡೆಸಿದ್ದಾರೆ ಎಂದು ನನಗೆ ಕರೆಗಳು ಬರ ತೊಡಗಿವು. ಆ ನಂತರ ನಾವು ಹೋಟೆಲ್‌ನಲ್ಲೇ ಪೂರ್ಣ ರಾತ್ರಿಯನ್ನು ಕಳೆಯಬೇಕಾಯಿತು. ನನ್ನ ಮನೆಯವರು ಮತ್ತು ಸ್ನೇಹಿತರು ಚಿಂತಿತರಾಗಿದ್ದರು. ದೇಶ ಭಯದ ಛಾಯೆಯಲ್ಲಿದೆ. ಆತಂಕವಾದಿಗಳಲ್ಲಿ ನಾನಿಷ್ಟನ್ನೇ ಹೇಳಲು ಬಯಸುತ್ತೇನೆ, ಇಂತಹ ಕೃತ್ಯಗಳಿಂದ ನಮ್ಮನ್ನು ಭಯಪಡಿಸುವುದು ಸಾಧ್ಯವಿಲ್ಲ, ನಾವು ಮತ್ತೆ ಎದ್ದು ನಿಲ್ಲುತ್ತೇವೆ.

IFM
ಮುಗ್ಧ ಗೋಡ್ಸೆ: ಈ ಘಟನೆ ನನ್ನನ್ನು ಸ್ತಬ್ಧಳನ್ನಾಗಿಸಿದೆ ಮತ್ತು ಇನ್ನಾದರೂ ಪರಿಸ್ಥಿತಿ ಸುಧಾರಿಸುವುದು ಎಂಬ ಆಶಾಭಾವನೆ ಇರಿಸಿದ್ದೇನೆ. ನಾವು ಇದನ್ನು ಎದುರಿಸಿ ನಿಲ್ಲಬೇಕಾದ ಅಗತ್ಯವಿದೆ. ಪ್ರತಿಯೊಬ್ಬರೂ ತಮ್ಮ ಸುರಕ್ಷತೆಯನ್ನು ಸ್ವತಃ ಕಾಯ್ದುಕೊಳ್ಳಬೇಕು. ಭಾರತೀಯರಿಗೆ ತಲೆಬಾಗಿ ಅಭ್ಯಾಸವಿಲ್ಲ.

IFM
ಮಿನಿಶಾ ಲಾಂಬ: ಮುಂಬಯಿ ಮೇಲಿನ ದಾಳಿ ಭಾರತದ ಮೇಲಿನ ದಾಳಿಯಾಗಿದೆ. ಭದ್ರತಾ ವ್ಯವಸ್ಥೆಯಲ್ಲಿ ಯಾವ ಕೊರತೆಯಾಗಿದೆ ಎಂದು ನನಗೆ ತಿಳಿಯುತ್ತಿಲ್ಲ. ಪೊಲೀಸರಿಗೂ ಪೂರ್ಣ ಮುಂಬಯಿಗೆ ಸುರಕ್ಷತೆ ಒದಗಿಸುವುದು ಕಷ್ಟದ ಕೆಲಸ. ಅವರು ನಮ್ಮ ಸಹೋದರ - ಸಹೋದರಿಯರನ್ನು ರಕ್ಷಿಸುವ ಎಲ್ಲಾ ಪ್ರಯತ್ನ ಮಾಡುತ್ತಾರೆ. ಇದು ಮುಂಬಯಿಗೆ ಒದಗಿದ ಅತ್ಯಂತ ಕರಾಳ ದಿನವಾಗಿದೆ ಎಂಬುದು ನನ್ನ ಅಭಿಪ್ರಾಯ.

IFM
ಇಶಾ ಕೋಪ್ಪಿಕರ್: ನಡೆದು ಹೋದ ಘಟನೆ ಅತ್ಯಂತ ದುಃಖಕರವಾದುದು. ಅತ್ಯಂತ ಶೀಘ್ರದಲ್ಲಿ ಪರಿಸ್ಥಿತಿ ನಿಯಂತ್ರಣಕ್ಕೆ ಬರುವುದೆಂಬ ಆಶಯವನ್ನು ನಾನು ಹೊಂದಿದ್ದೇನೆ.



IFM
ಅರ್ಜುನ್ ರಾಂಪಾಲ್: ಮುಂಬಯಿಯಲ್ಲಿ ಇಂತಹ ಘಟನೆ ನಡೆದುದು ಅತ್ಯಂತ ದುಃಖಕರವಾಗಿದೆ. ದೇಶದ ಮತ್ತು ನಗರದ ಸುರಕ್ಷತೆಯ ಬಗ್ಗೆ ಸರಕಾರವನ್ನು ಪ್ರಶ್ನಿಸುವ ಹಕ್ಕು ಪ್ರತಿಯೊಬ್ಬ ಮುಂಬಯಿಕರ್‌ಗೂ ಇದೆ. ಆತಂಕವಾದಿಗಳು ಎಷ್ಟೊಂದು ಸುಲಭವಾಗಿ ದೇಶದೊಳಗೆ ಪ್ರವೇಶಿಸಿದರು ಮತ್ತು ದೊಡ್ಡ ಪ್ರಮಾಣದ ದುರ್ಘಟನೆಯನ್ನು ಉಂಟುಮಾಡಿದರು. ಈ ಬಗ್ಗೆ ರಾಜಕಾರಣಿಗಳು ಉತ್ತರ ನೀಡಬೇಕಾಗುತ್ತದೆ. ಎಲ್ಲಿ ಮತ್ತು ಹೇಗೆ ನ್ಯೂನತೆಗಳಾಗಿವೆ ಎಂದು ಅವರು ಉತ್ತರಿಸಬೇಕು.

IFM
ಅನಿಲ್ ಕಪೂರ್: ನಾನು ಈ ಸಂದರ್ಭ ಏನನ್ನೂ ಹೇಳುವ ಸ್ಥಿತಿಯಲ್ಲಿಲ್ಲ. ಪೊಲೀಸ್, ಮಿಲಿಟರಿ ಮತ್ತು ಸರಕಾರ ಇಂತಹ ಘಟನೆ ಯಾಕೆ ನಡೆಯಿತು ಎಂಬ ಬಗ್ಗೆ ಉತ್ತರಿಸಬೇಕು.



IFM
ಗುಲ್ಶನ್ ಗ್ರೋವರ್: ಇದು ಖಂಡಿತವಾಗಿಯೂ ಭಾರತದ ಮೇಲಿನ ಅತ್ಯಂತ ಕೆಟ್ಟ ಉಗ್ರರ ದಾಳಿ. ಉಗ್ರರು ಅಮಾಯಕರ ಪ್ರಾಣವನ್ನು ಬಲಿತೆಗೆದುಕೊಂಡ ರೀತಿಗೆ ನಾನು ದಂಗಾಗಿದ್ದೇನೆ ಮತ್ತು ಬಹಳ ವಿಚಲಿತನಾಗಿದ್ದೇನೆ. ಈ ಭಯಾನಕ ಘಟನೆಯ ನಂತರ ಮುಂಬಯಿಯಲ್ಲಿ ಧನಾತ್ಮಕ ಬದಲಾವಣೆಗಳು ಕಾಣಸಿಗುವುದೆಂಬ ಭರವಸೆ ಹೊಂದಿದ್ದೇನೆ.
ಸಂಬಂಧಿತ ಮಾಹಿತಿ ಹುಡುಕಿ
ಇದನ್ನು ಸಹ ಶೋಧಿಸು: ಮುಂಬಯಿ ಬಾಲಿವುಡ್ ಸಲೀನಾ ಜೇಟ್ಲಿ ಮಿನಿಶಾ ಲಾಂಬ ಅರ್ಜುನ್ ರಾಂಪಾಲ್ ಅನಿಲ್ ಕಪೂರ್