ಸುದ್ದಿ/ಗಾಸಿಪ್ | ಸಿನಿಮಾ ಮುನ್ನೋಟ | ಸಿನಿಮಾ ವಿಮರ್ಶೆ | ತಾರಾ ಪರಿಚಯ | ಸಂದರ್ಶನ | ಹಾಲಿವುಡ್ | ಕಿರುತೆರೆ
ಮುಖ್ಯ ಪುಟ ಮನರಂಜನೆ » ಬಾಲಿವುಡ್‌ » ಸುದ್ದಿ/ಗಾಸಿಪ್ » ಪುತ್ರ ರಿತೇಶ್‌ನಿಂದಾಗಿ ಸ್ಥಾನ ಕಳಕೊಳ್ಳುತ್ತಿರುವ ದೇಶ್‌ಮುಖ್!
ಸುದ್ದಿ/ಗಾಸಿಪ್
Feedback Print Bookmark and Share
 

IFM
2003ರಲ್ಲಿ ವಿಲಾಸ್ ರಾವ್ ದೇಶ್‌ಮುಖ್ ಮಹಾರಾಷ್ಟ್ರ ಮುಖ್ಯಮಂತ್ರಿಯಾಗಿದ್ದಾಗ ತನ್ನ ಪದವಿಗೆ ರಾಜೀನಾಮೆ ನೀಡಲು ನಿರ್ದೇಶಿಸಲಾಗಿತ್ತು, 2008ರಲ್ಲೇ ಮತ್ತೆ ಇತಿಹಾಸ ಮರುಕಳಿಸಿದೆ!. ಇನ್ನೊಂದು ಕುತೂಹಲಕಾರಿ ಅಂಶವೆಂದರೆ ಈ ಎರಡೂ ಸಂದರ್ಭದ ರಾಜೀನಾಮೆಯ ಹಿಂದೆ ಒಂದು ಸಾಮಾನ್ಯ ಅಂಶವಿದೆ.

ಈ ಹಿಂದೆ 2003ರಲ್ಲಿ ಕಾಂಗ್ರೆಸ್ ಅಧ್ಯಕ್ಷೆ ಸೋನಿಯಾ ಗಾಂಧಿ ದೇಶ್‌ಮುಖ್‌ರಲ್ಲಿ ರಾಜೀನಾಮೆ ನೀಡಲು ಹೇಳಿದ್ದರು. ಕಾರಣ: ದೇಶ್‌ಮುಖ್‌ರ ಪುತ್ರ ರಿತೇಶ್ ದೇಶ್‌ಮುಖ್ ಬಾಲಿವುಡ್‌ಗೆ ಚೊಚ್ಚಲ ಪ್ರವೇಶ ಮಾಡುವವರಿದ್ದರು ಮತ್ತು ಮುಖ್ಯಮಂತ್ರಿ, ತಮ್ಮ ಮಂತ್ರಾಲಯ ಅಧಿಕಾರಿಗಳೊಂದಿಗೆ ಮಗನ ಚೊಚ್ಚಲ ಚಿತ್ರ ತುಜೆ ಮೇರಿ ಕಸಮ್ ಬಾಕ್ಸ್ ಅಫೀಸ್‌ನಲ್ಲಿ ಮಿಂಚುವಂತೆ ಮಾಡಲು ತಮ್ಮ ಕೈಲಾದ ಕಾಣಿಕೆ ಸಲ್ಲಿಸಲು ಮಾಡಲು ಸಾಧ್ಯವಿದ್ದುದನ್ನೆಲ್ಲಾ ಮಾಡಲು ಮುಂದಾಗಿದ್ದರು.

ಸಿಎಂರ ಪಬ್ಲಿಕ್ ರಿಲೇಶನ್ ಅಧಿಕಾರಿಯಿಂದ ಹಿಡಿದು, ಕಾಂಗ್ರೆಸ್ ಸದಸ್ಯರವರೆಗೆ, ಪಾರ್ಟಿ ಅಕ್ಟಿವಿಸ್ಟ್‌ನಿಂದ ಹಿಡಿದು ಪೊಲೀಸ್ ಇನ್ಸಪೆಕ್ಟರ್‌ವರೆಗೆ ಎಲ್ಲರು ಚಿತ್ರದ ವರ್ಚಸ್ಸು ಬೆಳೆಸಲು ಶ್ರಮಿಸಿದರು. ಚಿತ್ರ ಗುರತಿಸಲ್ಪಡದೇ ಹೋಗದಿರುವಂತೆ ಎಲ್ಲಾ ಪ್ರಚಾರ ಕಾರ್ಯಗಳನ್ನು ಭರದಲ್ಲಿ ಮತ್ತು ಅದ್ದೂರಿ!ಯಾಗಿಯೇ ನಡೆಸಲಾಯಿತು. ಬಹಳಷ್ಟು ಜನರು ಹೇಳುವಂತೆ, ಇವೆಲ್ಲವೂ ನಡೆದು ನಿರ್ಮಾಪಕರ ಹಣದಿಂದಲ್ಲ...

IFM

ಇಂತಹ ಕಾರ್ಯಗಳಿಗೆ ತಮ್ಮ ರಾಜಕೀಯ ವರ್ಚಸ್ಸನ್ನು ಬಳಸಿಕೊಂಡ ಕಾರಣಕ್ಕೆ ದೇಶ್‌ಮುಖ್ ಅವರಿಗೆ ರಾಜೀನಾಮೆ ನೀಡಲು ಆದೇಶಿಸಲಾಯಿತು.

ಪ್ರಸಕ್ತ ಸಂದರ್ಭ ಕೂಡ, ದೇಶ್‌ಮುಖ್‌ರ ರಾಜೀನಾಮೆ ಹಿಂದೆ ರಿತೇಶ್ ಪಾತ್ರ ವಹಿಸುತ್ತಾರೆ. ವಿದ್ರೋಹಿಗಳಿಂದ ವಿಧ್ವಂಸಗೊಂಡ ತಾಜ್ ಹೋಟೆಲ್‌ಗೆ ತಮ್ಮ ಭೇಟಿಯ ಸಂದರ್ಭ ದೇಶ್‌ಮುಖ್ ತಮ್ಮ ಬಾಲಿವುಡ್ ಸ್ಟಾರ್- ಮಗ ರಿತೇಶ್ ಮತ್ತು ನಿರ್ದೇಶಕ ರಾಮ್ ಗೋಪಾಲ್ ವರ್ಮ ಅವರನ್ನು ತಮ್ಮ ಸಂಗಡ ಕರೆದೊಯ್ದರು. ಈ ಮೂವರು ಜೊತೆಯಾಗಿ ಟ್ರೈಡೆಂಟ್ ಹೋಟೆಲ್‌ಗೂ ಭೇಟಿ ನೀಡಿದರು. ಇದು ಸಿಎಂ ವಿಲಾಸ್‌ರಾವ್ ದೇಶ್‌ಮುಖ್ ಘಟನೆಯ ಬಗ್ಗೆ ಎಷ್ಟು ಕಾಳಜಿ ಹೊಂದಿದ್ದಾರೆ ಎಂಬ ಬಗ್ಗೆ ಪ್ರಶ್ನೆಗಳನ್ನು ಹುಟ್ಟು ಹಾಕಿತು. ಕೆಲವೆಡೆ ಮಗ ಮತ್ತು ರಾಮು ಜೊತೆ ದೇಶ್‌ಮುಖ್ 'ಪಿಕ್‌ನಿಕ್' ಎಂದೂ ವರದಿ ಮಾಡಲಾಯಿತು. ವಿಧ್ವಂಸಕ ದಾಳಿಯಿಂದ ತತ್ತರಿಸಿ, ಚೇತರಿಸಿಕೊಳ್ಳುವ ಪ್ರಯತ್ನದಲ್ಲಿರುವ ನಗರದ ಬಗ್ಗೆ ಮುಖ್ಯಮಂತ್ರಿಗಳ ನಿರ್ಲ್ಯಕ್ಷ ಜನರಲ್ಲಿ ಹೇಸಿಗೆ ಹುಟ್ಟಿಸಿತು.
IFM


ರಾಮ್‌ಗೋಪಾಲ್ ವರ್ಮಾ ಮತ್ತು ರಿತೇಶ್ ತಮ್ಮ ಮುಂಬರುವ ಚಿತ್ರ ರನ್ನ್‌ಗಾಗಿ ಸಮೀಕ್ಷೆ ನಡೆಸಲು ಬಂದಿದ್ದರು ಎಂಬ ವದಂತಿಗಳು ಹಬ್ಬಿದವು. ಅಮಾಯಕರ ಮಾರಣಹೋಮದಂತಹ ಸೂಕ್ಷ್ಮ ಘಟನೆಯ ಬಗ್ಗೆ ಇಂತಹ ವರಸೆ ಕ್ರೋಧಿತ ಜನರನ್ನು ಇನ್ನಷ್ಟು ಕೆರಳಿಸಿತು. ಐದು ವರ್ಷದ ಅವಧಿಯೊಳಗೇ ಎರಡು ಬಾರಿ ಕುರ್ಚಿಯಿಂದ ಕೆಳಗಿಳಿಸಲ್ಪಡುತ್ತಿರುವ ದೇಶ್‌ಮುಖ್‌ರ ರಾಜಕೀಯ ಬದುಕು ಇಲ್ಲಿಗೆ ಕೊನೆಗೊಳ್ಳುವುದೇ ?.

ಕೊನೆಗೊಂಡರೇನಂತೆ, ನಟನೆಗೂ ರಾಜಕೀಯಕ್ಕೂ ಅವಿನಾವ ಸಂಬಂಧ, ನಟ ಮಹಾಶಯರೆಲ್ಲಾ ರಾಜಕೀಯಕ್ಕೆ ಧುಮುಕಿದರೆ, ನಟನಾ ಕೌಶಲಗಳನ್ನು ಲೀಲಾಜಾಲವಾಗಿ ಕರಗತ ಮಾಡಿಕೊಂಡ ರಾಜಕಾರಣಿಗಳು ನಟನಾವೃತ್ತಿಗಿಳಿಯಬಾರದೇಕೆ... ?!
ಸಂಬಂಧಿತ ಮಾಹಿತಿ ಹುಡುಕಿ
ಇದನ್ನು ಸಹ ಶೋಧಿಸು: ವಿಲಾಸ್ ರಾವ್ ದೇಶ್ಮುಖ್ ರಿತೇಶ್ ದೇಶ್ಮುಖ್