ರಬ್ನೆ ಬನಾ ದಿ ಜೋಡಿ ಯುರೋಪ್ ಮತ್ತು ಭಾರತದಲ್ಲಿ ಏಕಕಾಲದಲ್ಲಿ ಬಿಡುಗಡೆ ಕಾಣುತ್ತಿರುವ ಪ್ರಥಮ ಬಾರತೀಯ ಚಿತ್ರ.
ಹಿಂದಿ ಚಿತ್ರಗಳು ವಿಶ್ವಾದ್ಯಂತ ಪ್ರಸಿದ್ಧವಾಗಿವೆ. ಖ್ಯಾತನಾಮರ ಚಿತ್ರಗಳು ಭಾರತದಲ್ಲಿ ಬಿಡುಗಡೆಯಾಗುವ ದಿನವೇ ಇಂಗ್ಲೆಂಡ್ ಮತ್ತು ಅಮೆರಿಕಾಗಳಲ್ಲಿ ಬಿಡುಗಡೆಯಾಗುತ್ತವೆ. ಇತ್ತೀಚಿನ ದಿನಗಳಲ್ಲಿ ಯುಎಇ ಮತ್ತು ಮಿಡಲ್ ಈಸ್ಟ್ ಹಾಗು ಆಸ್ಟ್ರೇಲಿಯಾ ಮತ್ತು ನ್ಯೂಜಿಲ್ಯಾಂಡ್‌ಗಳೂ ಹಿಂದಿ ಚಿತ್ರಗಳಿಗೆ ಉತ್ತಮ ಮಾರುಕಟ್ಟೆಗಳಾಗಿವೆ. ಆದರೆ ಹಿಂದಿ ಸಿನಿಮಾ ಮತ್ತು ಶಾರುಖ್ ಖಾನ್ ಮೇನಿಯಾ ಯುರೋಪ್‌ನ ಹೃದಯಭಾಗದವರೆಗೂ ತಟ್ಟಿದೆ ಎಂಬುದು ಊಹೆಗೆ ಮೀರಿದ ಬೆಳವಣಿಗೆ.
ಯಶ್ ರಾಜ್ ಫಿಲಮ್ಸ್‌ರವರ ಬಹುನಿರೀಕ್ಷಿತ ಚಿತ್ರ 'ರಬ್ನೆ ಬನಾ ದಿ ಜೋಡಿ' ಡಿಸೆಂಬರ್ 12ರಂದು ಬಿಡುಗಡೆಯಾಗುವುದು ಖಚಿತವಾಗಿದೆ, ಇದೇ ದಿನ ಈ ಚಿತ್ರ ಭಾರತ ಮತ್ತು ಎಂದಿನಂತೆ, ಯುನೈಟೆಡ್ ಕಿಂಗ್‌ಡಮ್‌ನ ಅಸಂಖ್ಯ ಚಿತ್ರಮಂದಿರಗಳೂ ಸೇರಿಂದಂತೆ, ಹೋಲ್ಯಾಂಡ್, ಜರ್ಮನಿ, ಸ್ವಿರ್ಜರ್‌ಲ್ಯಾಂಡ್, ಆಸ್ಟ್ರೀಯಾ, ಫ್ರಾನ್ಸ್, ಡೆನ್ಮಾರ್ಕ್, ಸ್ವೀಡನ್ ಮತ್ತು ನಾರ್ವೆಗಳಲ್ಲಿ ಬಿಡುಗಡೆಯಾಗಲಿದೆ.
ಈ ಮೂಲಕ ಹಿಂದಿ ಚಿತ್ರರಂಗ ಅಂತಾರಾಷ್ಟ್ರೀಯ ಮಟ್ಟದಲ್ಲಿ ಗುರುತಿಸಿಕೊಳ್ಳವಲ್ಲಿ ಮಹತ್ವದ ಹೆಜ್ಜೆಯಿರಿಸಲಿದೆ. ಡಿಸೆಂಬರ್ 12ರ ಬಿಡುಗಡೆ, ಕೇವಲ ಹಾಲಿವುಡ್ ಚಿತ್ರಗಳಷ್ಟೇ ಅಲ್ಲದೇ ಬಾಲಿವುಡ್ ಸಿನಿಮಾಗಳನ್ನು ವಿಶ್ವಾದ್ಯಂತದ ಜನ ಕಾತುರದಿಂದ ನಿರೀಕ್ಷಿಸುತ್ತಾರೆ ಎಂಬುದಕ್ಕೆ ಸಾಕ್ಷಿಯಾಗಲಿದೆ. 'ರಬ್ನೆ ಬನಾ ದಿ ಜೋಡಿ'ಯ 'ಡಾನ್ಸ್ ಪೆ ಚಾನ್ಸ್' ಮತ್ತು 'ಹುಲ್ಲೆ ಹುಲ್ಲೆ' ಹಾಡುಗಳು, ಕೇವಲ ವಿಶ್ವದ ವಿವಿಧೆಡೆಗಳಲ್ಲಿರುವ ಭಾರತೀಯರನ್ನಷ್ಟೇ ಅಲ್ಲದೆ ಬೇರೆಬೇರೆ ರಾಷ್ಟ್ರಗಳ ಸಂಗೀತ ಪ್ರಿಯರನ್ನು ಹುಚ್ಚೆಬ್ಬಿಸಲಿವೆ. ಹಿಂದಿ ಚಿತ್ರರಂಗದಲ್ಲಿ ಯಶ್ ರಾಜ್ ಸಂಸ್ಥೆ ತನ್ನದೇ ವಿಶಿಷ್ಟ ಛಾಪು ಮೂಡಿಸಿದೆ.